ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಪೋಷಕರ ಸಭೆ ಹಾಗೂ ಉಪನ್ಯಾಸ ಕಾರ್ಯಕ್ರಮ

0

ನರಿಮೊಗರು: ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಶ್ರೀ ಗೋಪಾಲಕೃಷ್ಣ ಮಂದಿರ ವೇದಿಕೆಯಲ್ಲಿ ಜೂ.15 ರಂದು ಪೋಷಕರ ಸಭೆ ನಡೆಯಿತು.


ಮುಖ್ಯ ಅತಿಥಿ ವಿರೂಪಾಕ್ಷ ದೇವರ ಮನೆ ರವರು ಮಾತನಾಡಿ ನಾವು ಬಾಲ್ಯದಲ್ಲಿ ಸುತ್ತಮುತ್ತಲ ಜನರಿಂದ ಒಂದೊಂದು ಗುಣ ಕಲಿತು ಬದುಕ ಕಟ್ಟಿದೆವು. ಆದರೆ ಪ್ರಸ್ತುತ ವಿಭಕ್ತ ಕುಟುಂಬದಲ್ಲಿ ಮಕ್ಕಳಿಗೆ ಪ್ರೀತಿ ಭಾವನಾತ್ಮಕ ಬೇಡಿಕೆ ಸಿಗದ ಕಾರಣ ಮಕ್ಕಳು ಖಿನ್ನತೆಗೆ ಒಳಗಾಗಿ ಭವಿಷ್ಯದ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತಾರೆ. ಪೋಷಕರು ಮಕ್ಕಳ ಆಸಕ್ತಿ ಯನ್ನು ಕೇಳಿ ತಿಳಿದುಕೊಳ್ಳುವುದು ಹಾಗೆ ಪರಿಶೀಲಿಸಿ ನಿರಾಸಕ್ತಿಯನ್ನು ತಿಳಿಯುವುದು. ಮಕ್ಕಳನ್ನು ಬಹಿರಂಗವಾಗಿ ಪ್ರಶoಶಸಿಸಬೇಕು ಪ್ರೈವೇಟಾಗಿ ದೂರುವುದು.’ಪೋಷಕರು ‘be thankful for you children ‘ ಎಂಬ ಭಾವನೆಯನ್ನು ಇಟ್ಟುಕೊಂಡು ಮಕ್ಕಳನ್ನು ಬೆಳೆಸುವುದು ಎಂದು ಪೋಷಕರ ಜವಾಬ್ದಾರಿಯನ್ನು ಮನ ಮುಟ್ಟುವ ಹಾಗೆ ತಿಳಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಜಯಮಾಲಾ ವಿ .ಎನ್, ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯ ಕಿರುನೋಟ ಹಾಗೂ ಶಿಕ್ಷಕರನ್ನು ಪೋಷಕ ವೃಂದದವರಿಗೆ ಪರಿಚಯಿಸಿದರು.
ಸಂಚಾಲಕ ಭಾಸ್ಕರ ಆಚಾರ್ ಹಿಂದಾರು ಮಾತನಾಡಿ ಯಾವ ವಿಶ್ವಾಸವಿಟ್ಟು ಶಾಲೆಗೆ ಮಕ್ಕಳನ್ನು ಕಳುಹಿಸಿದ್ದೀರಿ ಅದಕ್ಕೆ ಯಾವ ಲೋಪ ಬಾರದ ಹಾಗೆ ನಿಮ್ಮ ವಿಶ್ವಾಸಕ್ಕೆ ಗೌರವ ಸಿಗುವ ಹಾಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡುವ ಗುರಿಯನ್ನು ಇಟ್ಟುಕೊಂಡಿದ್ದು ವಿದ್ಯಾರ್ಥಿಗಳಲ್ಲಿ ಉತ್ತಮ ನಡೆ ನುಡಿಯನ್ನು ವೃದ್ಧಿಸುವ ಜವಾಬ್ದಾರಿ ನಮ್ಮದು. ತಮ್ಮ ಸಹಕಾರ ಎಲ್ಲಾ ರೀತಿಯಲ್ಲು ಇರಲಿ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕ್ ಪ್ರಧಾನ ಕಛೇರಿ ಮಂಗಳೂರು ಇದರ ನೇತೃತ್ವದಲ್ಲಿ ನರಿಮೊಗರಿನ ಸಾಂದೀಪನಿ ವಿದ್ಯಾಸಂಸ್ಥೆಗೆ ಭಾರತ್ ಬೆಂಜ್ ಕಂಪೆನಿಯ ಶಾಲಾ ಬಸ್ಸನ್ನು ಕೊಡುಗೆ ಯಾಗಿ ನೀಡಿದ್ದರಿಂದ ಕರ್ನಾಟಕ ಬ್ಯಾಂಕ್ ಪುತ್ತೂರು ಇದರ ಮುಖ್ಯ ವ್ಯವಸ್ಥಾಪಕಶ್ರೀಹರಿ .ಪಿ ಹಾಗೂ ವ್ಯವಸ್ಥಾಪಕ ಶ್ರೀಶ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಬ್ಯಾಂಕ್ ನ ಮುಖ್ಯ ವ್ಯವಸ್ಥಾಪಕ ಶ್ರೀಹರಿ ಪೋಷಕರಾಗಿದ್ದು ಮಕ್ಕಳಿಗೆ ಆದಷ್ಟು ಸಮಯ ಕಳೆಯುವ ಹಾಗೆ ಇರಬೇಕು ಎಂದರು.

ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ರವರು ಶುಭ ಹಾರೈಸಿದರು.ಶಾಲಾ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಶುಭ ಹಾರೈಸಿದರು. ಮಂಜುಳಾ ಗೌಡ ಪ್ರಾರ್ಥಿಸಿ, ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯ ಸ್ವಾಗತಿಸಿ,ಮುರಳಿಕೃಷ್ಣ ಕಾರ್ಯಕ್ರಮ ನಿರೂಪಿಸಿ, ವಾಣಿ ವಂದಿಸಿದರು.

ಆಡಳಿತ ಮಂಡಳಿಯ ಸದಸ್ಯರಾದ ಎಸ್ .ಜಿ. ಕೃಷ್ಣ ,ಹರೀಶ್ ಪುತ್ತೂರಾಯ, ಅಶೋಕ್ ಕುಮಾರ್ ಪುತ್ತಿಲ, ಶಿಕ್ಷಕ – ಶಿಕ್ಷಕೇತರ ವೃಂದ ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here