ಪಳ್ಳತ್ತಾರು ಜುಮಾ ಮಸೀದಿಯಲ್ಲಿ ಬಕ್ರೀದ್ ಆಚರಣೆ

0

ಕಾಣಿಯೂರು:ಆಧುನಿಕ ಕಾಲಘಟ್ಟದಲ್ಲಿ ಯುವ ಸಮೂಹವು ಸಾಮಾಜಿಕ ತಾಣಗಳ ಅತಿಯಾದ ಬಳಕೆಯಿಂದಾಗಿ ದಾರಿ ತಪ್ಪುತ್ತಿದ್ದು, ಪ್ರೀತಿ ಪ್ರೇಮಗಳು ಕಾಮಕ್ಕೆ ತಿರುಗಿ ಆತ್ಮಹತ್ಯೆ ಕೊಲೆ ಮುಂತಾದ ಅನಾಹುತಗಳಿಗೆ ಎಡೆ ಮಾಡುತ್ತಿದೆ. ಆದುದರಿಂದ ಯುವ ಸಮೂಹವು ಸಾಮಾಜಿಕ ತಾಣಗಳನ್ನು ದುರ್ಬಳಕೆ ಮಾಡಿ ಜೀವನ ಹಾಳು ಮಾಡಬಾರದೆಂದು ಪಳ್ಳತ್ತಾರು ಮಸೀದಿಯ ಇಮಾಮ್ ಮುಷ್ತಾಕ್ ಕಾಮಿಲ್ ಸಖಾಫಿ ಬಕ್ರೀದ್ ಸಂದೇಶ ನೀಡಿದರು.


ಅವರು ಜೂ 17 ರಂದು ಪಳ್ಳತ್ತಾರು ಜುಮಾ ಮಸೀದಿಯಲ್ಲಿ ಬಕ್ರೀದ್ ನಮಾಝ್ ಹಾಗೂ ಖುತುಬಾ ಪಾರಾಯಣಕ್ಕೆ ನೇತೃತ್ವ ನೀಡಿ ಮಾತನಾಡಿದರು.ಈ ಸಂದರ್ಭದಲ್ಲಿ ಜಮಾಅತಿನ ಪದಾಧಿಕಾರಿಗಳು ಹಾಗೂ ಜಮಾಅತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here