ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ವಿದ್ಯಾರ್ಥಿ ನಾಯಕರ ಪ್ರಮಾಣವಚನ

0

ಮಕ್ಕಳಲ್ಲಿ ಉತ್ತಮ ನಾಯಕತ್ವದ ಗುಣ ಮೂಡಿ ಬರಲಿ : ಮಹೇಶ್ ಕಜೆ


ಪುತ್ತೂರು: ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವದ ಗುಣವಿದ್ದರೆ ಅದು ಅವರ ಮುಂದಿನ ಜೀವನಕ್ಕೆ ಪ್ರೇರಣೆಯನ್ನು ನೀಡುತ್ತದೆ. ಹಾಗಾಗಿ ಉತ್ತಮ ನಾಯಕತ್ವದ ಲಕ್ಷಣ ಮಕ್ಕಳಲ್ಲಿ ಮೂಡಿ ಬರಬೇಕು. ಸಂವಿಧಾನದ ಮೌಲ್ಯ ಉಳಿದುಕೊಳ್ಳಬೇಕಾದರೆ ಸರಿಯಾದ ವಿರೋಧ ಪಕ್ಷದ ಅಗತ್ಯವಿದೆ. ಅಂತಹ ಕಲ್ಪನೆ ಎಳೆಯ ವಯಸ್ಸಿನಿಂದಲೇ ಮೂಡಿಬರಬೇಕು ನ್ಯಾಯವಾದಿ ಮಹೇಶ್ ಕಜೆಯವರು ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದಲ್ಲಿ ಆಯೋಜಿಸಲಾದ ಶಾಲಾ ಸಂಸತ್ತಿನ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ದೇಶದ ರಾಜಕೀಯದಲ್ಲಿ ಸಮರ್ಥ ನಾಯಕರನ್ನು ಹೊರ ತರಲು ಸಮರ್ಥ ವಿದ್ಯಾವಂತರ ಅವಶ್ಯಕತೆ ಇದೆ. ಹಾಗಾಗಿ ಶಾಲಾ ಮಂತ್ರಿಮಂಡಲದ ರಚನೆ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿ ಕೊಡುವ ಒಂದು ಜೀವನ ಪಾಠ. ಆದ್ದರಿಂದ ಪ್ರತಿಯೊಬ್ಬ ಮಂತ್ರಿಗಳು ಅವರವರ ಕಾರ್ಯಗಳನ್ನು ಕಂಕಣಬದ್ಧರಾಗಿ ನೆರವೇರಿಸಲಿ ಎಂಬುದಾಗಿ ಹೇಳಿದರು.


ಈ ಸಂದರ್ಭದಲ್ಲಿ ಶಾಲಾ ಮಂತ್ರಿಮಂಡಲದಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಶಾಲಾ ನಾಯಕ ಬಿ ಆರ್ ಸೂರ್ಯ ಮತ್ತು ಶಾಲಾ ವಿದ್ಯಾರ್ಥಿಗಳ ಮತದಾನದಿಂದ ಆಯ್ಕೆಗೊಂಡಿರುವ ಶಾಲಾ ನಾಯಕಿ ಅನಘ ವಿ ಪಿ, ಗೃಹ ಮಂತ್ರಿ ಸಮೃದ್ ಎಲ್ ಶೆಟ್ಟಿ, ಕ್ರೀಡಾಮಂತ್ರಿ ಸಂಪ್ರೀತ್ ವಿ, ಸಾಂಸ್ಕೃತಿಕ ಮಂತ್ರಿ ರಕ್ಷಾ ಎಸ್ ಎಸ್, ಶಿಕ್ಷಣ ಮಂತ್ರಿ ಸಾತ್ವಿಕ್ ಜಿ, ಸಂವಹನ ಅಧಿಕಾರಿ ವಂಶಿಕ ರೈ, ನೀರಾವರಿ ಮಂತ್ರಿ ಶ್ರೀನಿಕ್ ಆಚಾರ್ಯ, ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿ ಮನಿಷಾ ಕಜೆ ಮತ್ತು ವಿರೋಧ ಪಕ್ಷದ ನಾಯಕಿ ಹಿತಾಲಿ ಪಿ ಶೆಟ್ಟಿಯವರು ಪ್ರಮಾಣವಚನ ಸ್ವೀಕಾರ ಮಾಡಿದರು.


ಹಾಗೆಯೇ ಐರಾವತ ತಂಡದಿಂದ ಮನಸ್ವಿತ್ ಭಂಡಾರಿ ಮತ್ತು ಅದಿತಿ ಯು ಎನ್, ಅಮೃತ ತಂಡದಿಂದ ಕುಲದೀಪ್ ಮತ್ತು ಅವನಿ ಯು ಎನ್, ಕಾಮಧೇನು ತಂಡದಿಂದ ಅಕ್ಷಜ್ ರೈ ಮತ್ತು ಅದಿತಿ ರೈ, ಕಲ್ಪವೃಕ್ಷ ತಂಡದಿಂದ ಗೌರೀಶ್ ಪಿ ಶೆಟ್ಟಿ ಮತ್ತು ಇಶಾ ಕೀರ್ತಿ ಪ್ರಮಾಣವಚನ ಸ್ವೀಕಾರ ಮಾಡಿದರು. ಶಾಲಾ ಪ್ರಾಂಶುಪಾಲೆ ಮಾಲತಿ.ಡಿ ಮತ್ತು ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್‌ರವರು ಉಪಸ್ಥಿತರಿದ್ದರು.


ಶಾಲಾ ಶಿಕ್ಷಕಿ ಮಲ್ಲಿಕಾ ಶಾಲಾ ಸಂಸತ್ತಿನ ಕುರಿತಾಗಿ ಪ್ರಾಸ್ತಾವಿಕ ಮಾತುಗಳಾನ್ನಾಡಿದರು. ವಿದ್ಯಾರ್ಥಿ ಸನ್ಮಯ್ ಪ್ರಾರ್ಥನೆಗೈದರು. ಶಾಲಾ ವಿದ್ಯಾರ್ಥಿ ಕನಿಷ್ಕ್ ಸ್ವಾಗತಿಸಿದರು ಮತ್ತುವಿದ್ಯಾರ್ಥಿನಿ ವಿವಿಕ್ತಾ ರೈ ಧನ್ಯವಾದ ಸಲ್ಲಿಸಿದರು. ಶಾಲಾ ವಿದ್ಯಾರ್ಥಿನಿಯರಾದ ವೈಷ್ಣವಿ ಎಂ ಆರ್, ಸಾನ್ವಿ ಆರ್, ಲಾಸ್ಯ ಸಂತೋಷ ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾಕಾರ್ಯಕ್ರಮದ ಬಳಿಕ ಹೊಸದಾಗಿ ಶಾಲೆಗೆ ಸೇರ್ಪಡೆಯಾಗಿರುವ ಮಕ್ಕಳಿಂದ ಭಾಷಣ, ಹಾಡು, ನೃತ್ಯ, ನಚಿತ್ರಕಲೆ, ಕ್ವಿಜ್ ಮೊದಲಾದ ವಿವಿಧ ಕಾರ್ಯಕ್ರಮಗಳು ನೆರವೇರಿದವು.

LEAVE A REPLY

Please enter your comment!
Please enter your name here