ಬಂಟ್ಟಾಳ ವಿಶ್ವಹಿಂದು ಪರಿಷತ್ ಬಜರಂಗದಳ ಪ್ರಖಂಡದಿಂದ ಸೇವಾ ಕಾರ್ಯ

0

ಪುತ್ತೂರು: ಬಂಟ್ವಾಳ ಕುರಿಯಾಳದ ತೀರಾ ಅಸಹಾಯಕ ಮತ್ತು ಬಡತನದಲ್ಲಿದ್ದ ಕುಟುಂಬಕ್ಕೆ ವಿಶ್ವಹಿಂದು ಪರಿಷತ್ ಬಜರಂಗದಳ ಬಂಟ್ಟಾಳ ಪ್ರಖಂಡದ ವತಿಯಿಂದ ಜೂ.16ರಂದು ಧರ್ಮ ರಕ್ಷಣೆ ಮತ್ತು ಸೇವಾ ಕಾರ್ಯ ನಡೆಯಿತು.

ಕುರಿಯಾಳದ ಪದ್ಮನಾಭ ಪೂಜಾರಿ ಎಂಬ ಕುಟುಂಬವೊಂದು ತೀರಾ ಸಂಕಷ್ಟದಲ್ಲಿದ್ದು ಮನೆ ಮತ್ತು ಮನೆಯ ಪರಿಸರ ಕೆಟ್ಟು ಹೋಗಿದ್ದು ಮನೆಯನ್ನು ಸಂಪೂರ್ಣವಾಗಿ ಶುಚಿಗೊಳಿಸಿ ಮನೆಗೆ ಸಂಪೂರ್ಣವಾಗಿ ಬಣ್ಣ ಬಳಿಯುವ ಕಾರ್ಯವನ್ನು ಬಂಟ್ಟಾಳ ಬಜರಂಗದಳ ಕಾರ್ಯಕರ್ತರು ಮಾಡಿದರು. ಹಾಗೆಯೇ‌ ಮನೆಗೆ ಬೇಕಾದ ದಿನಸಿ ಸಾಮಾಗ್ರಿಗಳನ್ನು ಒದಗಿಸಿ ಮುಂದೆ ಎಲ್ಲಾ ರೀತಿಯ ಮೂಲ ಸೌಕರ್ಯವನ್ನು ಒದಗಿಸುವ ಜವಾಬ್ದಾರಿಯನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ವಹಿಸಿಕೊಂಡರು.

LEAVE A REPLY

Please enter your comment!
Please enter your name here