ಅಂಙತ್ತಡ್ಕದಲ್ಲಿ ಮಸೀದಿ ಉದ್ಘಾಟನೆ

0

ಪುತ್ತೂರು: ಇಹ್ಸಾನ್ ಚಾರಿಟೇಬಲ್ ಫೌಂಡೇಶನ್ ಅಂಙತಡ್ಕ ತಿಂಗಳಾಡಿ ನೂತನ ಮಸೀದಿ ‘ಮಸ್ಜಿದ್ ಅಹ್ದಮಲ್ ಬದವಿ’ ಉದ್ಘಾಟನೆಯನ್ನು ಸಯ್ಯದ್ ಫಝಲ್ ಕೊಯಮ್ಮ ತಂಙಳ್ ಕೂರ ನೆರವೇರಿಸಿದರು.

ಮಸೀದಿಯ ಅಧ್ಯಕ್ಷ ಉಸ್ಮಾನ್ ಹಾಜಿ ಅಂಗತಡ್ಕ ಅಧ್ಯಕ್ಷತೆ ವಹಿಸಿದ್ದರು. ಸಯ್ಯದ್ ಹಾಮಿದ್ ತಂಙಳ್ ಮುಹಿಮ್ಮಾತ್ ದುವಾ ನೆರವೇರಿಸಿದರು. ಮಹಮೂದುಲ್ ಫೈಝಿ ಓಲೆಮುಂಡೋವು ಪ್ರಭಾಷಣ ಮಾಡಿದರು. ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಅಧ್ಯಕ್ಷ ಸಯ್ಯದ್ ಸಾಬಿತ್ ತಂಙಳ್, ಕುಂಬ್ರ ಸೆಕ್ಟರ್ ಅಧ್ಯಕ್ಷ ರಂಶೀದ್ ಸಖಾಫಿ ತಿಂಗಳಾಡಿ, ಮಸೀದಿ ಅಧ್ಯಕ್ಷ ಸಿದ್ದಿಕ್ ಸಿಝ, ದರ್ಬೆ ಮಸೀದಿ ಅಧ್ಯಕ್ಷ ರಹೀಮ್ ದರ್ಬೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮುಹಮ್ಮದ್, ಕೆಯ್ಯೂರು ಗ್ರಾ.ಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲ, ಹನೀಫ್ ಮಾಡಾವು, ಯೂಸುಫ್ ಹಾಜಿ ಕೈಕಾರ, ಯೂಸುಫ್ ಗೌಸಿಯಾ ಸಾಜ, ಅಬ್ದುಲ್ಲ ಹಾಜಿ ಕಣ್ಣೂರು, ಹಿದಾಯತ್ ಕಣ್ಣೂರು, ಸಿಯಾಬ್ ಕಣ್ಣೂರು, ಹಮೀದ್ ಪಟ್ಟೆ, ರಫೀಕ್ ನಂಜೆ, ಮುಹಮ್ಮದ್ ಮದನಿ ತಿಂಗಳಾಡಿ, ಹಮೀದ್ ಮದನಿ, ಸ್ವಾಗತ ಸಮಿತಿ ಅಧ್ಯಕ್ಷ ಮುಹಮ್ಮದ್ ಕೆಜಿಎನ್, ಕಾರ್ಯದರ್ಶಿ ಮುಹ್ಸಿನ್ ಕಟ್ಟತಾರ್, ಉದ್ಯಮಿ ಅಲಿ ಸಹದಿ ಬಲ್ಕಾಡ್, ಅಶ್ರಫ್ ಬಲ್ಕಾಡ್ ಹಾಗೂ ಹಲವಾರು ಮಂದಿ ಉಪಸ್ಥಿತರಿದ್ದರು. ಮುಹಮ್ಮದ್ ಸಖಾಫಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here