ಬಡಗನ್ನೂರು ರಸ್ತೆ ಬದಿಯಿದ್ದ ಅಪಾಯಕಾರಿ ಮರ ತೆರವು

0

ಬಡಗನ್ನೂರುಃ ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ಪಡುವನ್ನೂರು ಗ್ರಾಮದ ಪದಡ್ಕ ಎಂಬಲ್ಲಿ ರಸ್ತೆ ಬದಿಯಲ್ಲಿದ್ದ ಅಪಾಯಕಾರಿ ಮರವನ್ನು ತೆರವು ಮಾಡಲಾಗಿದೆ.

ಮರ ಒಣಗಿದ್ದು ರಸ್ತೆ ಬದಿಯಲ್ಲಿದ್ದ ಕಾರಣ ಅಪಾಯಕಾರಿಯಾಗಿತ್ತು .ಮರ ತೆರವು ಮಾಡುವಂತೆ ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಬೆಯಲ್ಲೂ ಈ ಬಗ್ಗೆ ಅರಣ್ಯ ಇಲಾಖೆಗೆ ಬರೆಯಲು ನಿರ್ಣಯ ಮಾಡಲಾಗಿತ್ತು. ಮತ್ತು ಸ್ಥಳೀಯರು ಅರಣ್ಯ‌ ಇಲಾಖೆ ಮನವಿ ಮಾಡಿದ್ದು, ಸ್ಥಳಿಯ ಕಾಂಗ್ರೆಸ್ ಮುಂದಾಳು ರಾಕೇಶ್ ರೈ ಕುದ್ಕಾಡಿ ಅವರ ನೇತೃತ್ವದಲ್ಲಿ ಮರವನ್ನು ತೆರವು ಮಾಡುವ ಕಾರ್ಯ ಜೂ 19 ರಂದು ನಡೆಯಿತು.

LEAVE A REPLY

Please enter your comment!
Please enter your name here