ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ಸಮಸ್ಯೆಗಳು ಇದೆ. ಅದಕ್ಕೆ ಕಾನೂನಿನ ಚೌಕಟ್ಟಿನಲ್ಲೇ ಪರಿಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಥಮವಾಗಿ ಅಧಿಕಾರಿಗಳ ಜೊತೆಯಲ್ಲೇ ಸ್ಥಳ ಸಂದರ್ಶನ ಮಾಡಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕ್ರಮ ಮಾಡುವ ಕುರಿತ ನಿರ್ಧಾರವನ್ನು ಪುತ್ತೂರು ನಗರಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರ ಉಪಸ್ಥಿತಿಯಲ್ಲಿ ನೂತನ ನಾಮನಿರ್ದೇಶಿತ ಸದಸ್ಯರ ಪ್ರಥಮ ಸಭೆಯಲ್ಲಿ ಮಾಡಲಾಗಿದೆ.
ಜೂ.19ರಂದು ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಪುಡಾ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಪತ್ರಿಕಾ ಮಾದ್ಯಮದೊಂದಿಗೆ ಮಾತನಾಡಿದ ಭಾಸ್ಕರ್ ಕೋಡಿಂಬಾಳ ಅವರು ಮುಂದೆ ನಗರಸಭೆ ಅಧಿಕಾರಿಗಳು, ಪುಡಾ ಅಧಿಕಾರುಗಳು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಶಾಸಕರ ನೇತೃತ್ವದಲ್ಲಿ ಸಮಸ್ಯೆಗಳಿಗೆ ಸೂಕ್ತ ಪರಿಹಾರಕ್ಕಾಗಿ ಚರ್ಚಿಸಲಾಗುವುದು ಎಂದು ತಿಳಿಸಿದರು. ಇಲ್ಲಿ ನಗರಯೋಜನೆ ಮಾಡುವ ಸಮಸ್ಯೆ ಅಲ್ಲ ಕಾನೂನಿನ ತೊಡಕಿದೆ ಅದನ್ನು ಸರಿ ಮಾಡಬೇಕಾಗಿದೆ. ಇದು ಗಂಭೀರ ಸಮಸ್ಯೆಯು ಹೌದು. ಅದನ್ನು ಪ್ರಾಮಾಣಿಕವಾಗಿ ನಾವು ಬಗೆ ಹರಿಸಲಿದ್ದೇವೆ. ಈ ಕುರಿತು ಶಾಸಕರು ಬಹಳ ಹೆಚ್ಚು ಕಾರ್ಯ ನಿರ್ವಹಿಸಲಿದ್ದಾರೆ. ಇಲ್ಲಿ ತಾಂತ್ರಿಕತೆಯನ್ನು ಅಳವಡಿಸಿ ಪ್ಲಾನ್ ಮಾಡಿಕೊಂಡು ಅಭಿವೃದ್ಧಿಯಾಗಬೇಕಾಗಿದೆ. ಯಾಕೆಂದರೆ ಇವತ್ತು ರಾಜ್ಯದ ಸಮಸ್ಯೆಗೆ ಪರಿಹಾರ ಕಂಡು ಹಿಡಿದಾಗ ಕರಾವಳಿ ಭಾಗದ ಸಮಸ್ಯೆ ಬೇರೆ ಇರುತ್ತದೆ. ಅದನ್ನು ಇವತ್ತು ಮನದಟ್ಟು ಮಾಡಬೇಕಾಗಿದೆ. ಸಿಂಗಲ್ ಲೇ ಔಟ್ ಸಮಸ್ಯೆ ಇದೆ. ಅದನ್ನು ಪರಿಹರಿಸಲಾಗುವುದು ಎಂದು ಭಾಸ್ಕರ್ ಕೋಡಿಂಬಾಳ ತಿಳಿಸಿದರು.
ಕಚೇರಿಯಲ್ಲಿ ಸಾರ್ವಜನಿಕ ಸ್ಪಂಧನೆಗೆ ನಿಯೋಜನೆ:
ಪುಡಾ ಕಚೇರಿಗೆ ಜನಸಾಮಾನ್ಯರು ಬಂದಾಗ ಅಲ್ಲಿ ಸ್ಪಂಧನೆ ನೀಡಲು ಅಧಿಕಾರಿಗಳು ಇರಬೇಕು. ಈ ನಿಟ್ಟಿನಲ್ಲಿ ನಿಯೋಜನೆ ಮೂಲಕ ಹೆಚ್ಚುವರಿ ಸಿಬ್ಬಂದಿ ನೇಮಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರ ಪಾಲೋ ಅಪ್ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಿದ್ದೇವೆ ಎಂದು ಪುಡಾ ನಿರ್ದೇಶಕ ನಿಹಾಲ್ ಶೆಟ್ಟಿ ತಿಳಿಸಿದ ಅವರು ಪುತ್ತೂರಿನ ಮಾಸ್ಟರ್ ಪ್ಲಾನ್ ಅಪ್ ಡೇಟ್ ಆಗಬೇಕು. ಈ ಕುರಿತು ತಾಂತ್ರಿಕ ವ್ಯವಸ್ಥೆಯಡಿಯಲ್ಲಿ ಕಾರ್ಯಗತ ಮಾಡಲು ಸಭೆಯಲ್ಲಿ ಚರ್ಚಿಸಿದ್ದೇವೆ ಎಂದರು.
ಕಾನೂನು ಚೌಕಟ್ಟಿನಲ್ಲೇ ಪರಿಹಾರ:
ಈ ಹಿಂದೆ ಮಾಡಿದ ಸೈಟ್‌ಗಳು ಅವೈಜ್ಞಾನಿಕವಾಗಿದೆ. ಆಗ ಈ ಕಾನೂನು ಇರಲಿಲ್ಲ. ಸರಕಾರದ ಮಾಡಿದ ಕಾನೂನು ಸೂಕ್ತವಾಗಿದೆ. ಲೇ ಔಟ್ ಆದಾಗ ಅಲ್ಲಿ ಎಲ್ಲವೂ ಕಾನೂನು ಚೌಕಟ್ಟಿನಲ್ಲೇ ಮಾಡಬೇಕು. ಈಗ ಹಲವು ಕಡೆ ಇದೇ ಸಮಸ್ಯೆ ಇದೆ ಅದನ್ನು ಕಾನೂನು ಚೌಕಟ್ಟಿನಲ್ಲೇ ಪರಿಹಾರ ನೀಡಲಾಗುವುದು ಎಂದು ಪುಡಾ ನಿರ್ದೇಶಕ ಲ್ಯಾನ್ಸಿ ಮಸ್ಕರೇನಸ್ ತಿಳಿಸಿದರು. ಪುಡಾದಲ್ಲಿ ಹಣವನ್ನು ಯಾವ ರೀತಿ ಖರ್ಚು ಮಾಡಬೇಕೆಂಬ ಕುರಿತು ಚೌಕಟ್ಟು ಇದೆ. ಈ ಕುರಿತು ಕೂಡಾ ಮುಂದೆ ಚರ್ಚಿಸಲಾಗುವುದು ಎಂದು ನಿರ್ದೇಶಕ ಅನ್ವರ್ ಖಾಸಿಂ ತಿಳಿಸಿದರು.
ಕೆರೆ ಅಭಿವೃದ್ಧಿ, ರಿಂಗ್ ರೋಡ್, ವೃತ್ತ ನಿರ್ಮಾಣ
ನಾವು ಅಧಿಕಾರವನ್ನು ಮಾ.14ರಂದು ಪಡೆದಿದ್ದೇವೆ. ಅದೆ ದಿನ ಚುನಾವಣೆ ಕಾರ್ಯ ಆರಂಭಗೊಂಡಿದೆ. ಮತ್ತೆ ನೀತಿ ಸಂಹಿತೆ ತೆರವಾದ ಬಳಿಕ ನಾವು ಪ್ರಥಮ ಸಭೆಯನ್ನು ನಿರ್ದೇಶರು ಮತ್ತು ಪುಡಾ ಸದಸ್ಯ ಕಾರ್ಯದರ್ಶಿ ಅಭಿಲಾಶ್, ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರ ಉಪಸ್ಥಿತಿಯಲ್ಲಿ ಮಾಡಿದ್ದೇವೆ. 2024-25ರಲ್ಲಿ ಅಂದಾಜು ರೂ. 6.96 ಕೋಟಿ ಬಜೆಟ್ ಮಾಡಿದ್ದೇವೆ. ಕೆರೆ ಅಭಿವೃದ್ಧಿ, ರಿಂಗ್ ರೋಡ್, ವೃತ್ತ ನಿರ್ಮಾಣವನ್ನು ಕೈಗೊಳ್ಳಲಿದ್ದೇವೆ. ಈಗಾಗಲೇ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಅಭಿವೃದ್ದಿ ರೂ. 35 ಲಕ್ಷ ಅನುದಾನದಲ್ಲಿ ಅರ್ಧ ಆಗಿದೆ. ಇನ್ನೂ ಕೆರೆಯನ್ನು ಸೌಂದರ್ಯಗೊಳಿಸಲು ಬೇಡಿಕೆ ಇದೆ. ಈ ಕುರಿತು ಸರಕಾರಕ್ಕೆ ಅನುಮೋದನೆಗೆ ಪ್ರಸ್ತಾನೆ ಸಲ್ಲಿಸಲಾಗಿದೆ. ಇದಕ್ಕೆ ಸಕಾರಾತ್ಮಕ ಸ್ಪಂಧನೆ ಸಿಗಲಿದೆ. ಅದೆ ರೀತಿ ರಿಂಗ್ ರಸ್ತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಮಯೂರ ಇನ್‌ಲ್ಯಾಂಡ್, ಕೊಂಬೆಟ್ಟು ರಸ್ತೆ, ಮುಖ್ಯ ರಸ್ತೆ ಮಧ್ಯೆ ವೃತ್ತ ನಿರ್ಮಾಣಕ್ಕೆ ಪ್ರಸ್ತಾವನೆ ಹೋಗಿದೆ. ಅದನ್ನು ನಾವು ಪೂರ್ಣಗೊಳಿಸಲಿದ್ದೇವೆ. ಅಧಿಜಾರಿಗಳ ಜೊತೆಯಲ್ಲಿ ಎಲ್ಲಾ ಎರಿಯ ಸಂದರ್ಶಿಸಿ ಸೂಕ್ತ ಸ್ಥಳದಲ್ಲಿ ಇನ್ನೊಂದು ವ್ರತ್ತ ನಿರ್ಮಾಣ ಮಾಡಲಿದ್ದೇವೆ.