ರಷ್ಯಾದಲ್ಲಿ ಬ್ರಿಕ್ಸ್ ಪ್ರಾಸಿಕ್ಯೂಷನ್ಸ್ ಸರ್ವಿಸಸ್ ಮುಖ್ಯಸ್ಥರ ಶೃಂಗ ಸಭೆ-ಕೆ.ಎಂ.ನಟರಾಜ್ ನೇತೃತ್ವದ ಭಾರತದ ನಿಯೋಗದಿಂದ ರಾಜತಾಂತ್ರಿಕ ಮಾತುಕತೆ ಆರಂಭ

0

ಪುತ್ತೂರು:ರಿಪಬ್ಲಿಕ್ ಆಫ್ ರಷ್ಯಾದ ಸೈಂಟ್ ಪೀಟರ್ಸ್ ಬರ್ಗ್‌ನಲ್ಲಿ ಆರಂಭವಾದ 2 ದಿನಗಳ ಬ್ರಿಕ್ಸ್ ಪ್ರಾಸಿಕ್ಯೂಷನ್ಸ್ ಸರ್ವಿಸಸ್ ಮುಖ್ಯಸ್ಥರ ಶೃಂಗ ಸಭೆಯ ಮೊದಲ ದಿನವಾದ ಜೂ.18ರಂದು ಭಾರತದ ನಿಯೋಗ ಬ್ರಿಕ್ಸ್ ದೇಶಗಳ ರಾಜತಾಂತ್ರಿಕರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದೆ.


ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ನೇತೃತ್ವದ ಭಾರತದ ರಾಜತಾಂತ್ರಿಕ ನಿಯೋಗದ ನೇತೃತ್ವದಲ್ಲಿ ಭಾರತದ ರಾಜತಾಂತ್ರಿಕ ಮಾತುಕತೆಗಳು ಆರಂಭವಾಗಿವೆ. ಈ ಶೃಂಗಸಭೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಝಿಲ್, ಅತಿಥೇಯ ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ, ಇರಾನ್, ಈಜಿಪ್ಟ್, ಇಥಿಯೋಪಿಯಾ ಹಾಗೂ ಅರಬ್ ಎಮಿರೇಟ್ಸ್‌ನ ಸುಮಾರು 60 ಮಂದಿ ರಾಜತಾಂತ್ರಿಕರು ಪಾಲ್ಗೊಂಡಿದ್ದಾರೆ.


ಮುಖ್ಯವಾಗಿ ಅರಬ್ ರಾಷ್ಟ್ರ, ದಕ್ಷಿಣ ಆಫ್ರಿಕಾ, ರಷ್ಯಾ ಸೇರಿದಂತೆ ಬ್ರಿಕ್ಸ್ ದೇಶಗಳೊಂದಿಗೆ ರಾಜತಾಂತ್ರಿಕ ಸಂಬಂಧ ಹಾಗೂ ಕ್ರಿಮಿನಲ್‌ಗಳ ಗಡಿಪಾರು ವಿಚಾರದಲ್ಲಿ ಮೊದಲ ದಿನ ಮಾತುಕತೆ ನಡೆಸಲಾಗಿದೆ.ರಾಜತಾಂತ್ರಿಕ ಒಪ್ಪಂದ ಕೊನೆಯ ದಿನದ ಶೃಂಗಸಭೆಯಲ್ಲಿ ನಡೆಯಲಿದೆ. ಈ ಶೃಂಗಸಭೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ನಡುವೆ ಅಪರಾಽಗಳ ಹಸ್ತಾಂತರ, ಭ್ರಷ್ಟಾಚಾರ ಅಪರಾಧ ಮತ್ತು ಅಪರಾಽಗಳ ಸೊತ್ತು ವಶಪಡಿಸುವ ಅಂಶಗಳು ಪ್ರಮುಖವಾಗಿ ಪ್ರಸ್ತಾಪಗೊಳ್ಳುತ್ತವೆ.


ಭಾರತದ ಜೊತೆ ಉತ್ತಮ ಬಾಂಧವ್ಯ ವೃದ್ಧಿಗೆ ಅರಬ್ ಎಮಿರೇಟ್ಸ್ ರಾಷ್ಟ್ರಗಳು ಉತ್ಸುಕ ತೋರಿಸಿವೆ.ಈ ಕುರಿತು ಶೃಂಗ ಸಭೆಯಲ್ಲಿ ಅರಬ್ ಎಮಿರೇಟ್ಸ್‌ನ ಅಟಾನಮಿ ಜನರಲ್ ಡಾ.ಅಹ್ಮದ್ ಸೈಫ್ ಶಂಶಿ ಅವರು ಭಾರತದ ರಾಜತಾಂತ್ರಿಕ ನಿಯೋಗದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.ಅರಬ್ ರಾಷ್ಟ್ರಗಳಲ್ಲಿ ಸುಮಾರು 40 ಲಕ್ಷದಷ್ಟು ಭಾರತೀಯರು ಇದ್ದು, ಅವರ ಹಿತಾಸಕ್ತಿ ಕಾಪಾಡುವ ಬಗ್ಗೆ ಒತ್ತು ನೀಡುವಂತೆ ದ್ವಿಪಕ್ಷೀಯ ಮಾತುಕತೆ ವೇಳೆ ಭಾರತದ ರಾಜತಾಂತ್ರಿಕ ನಿಯೋಗ ಪ್ರಸ್ತಾಪಿಸಿದೆ. ದಕ್ಷಿಣ ಆಫ್ರಿಕಾ ಮತ್ತು ರಷ್ಯಾ ಜೊತೆಗಿನ ದ್ವಿಪಕ್ಷೀಯ ಮಾತುಕತೆ ಅನೌಪಚಾರಿಕವಾಗಿ ನಡೆಸಲಾಗಿದೆ.ಈ ಮಾತುಕತೆಯಲ್ಲಿ ಭಾರತದೊಂದಿಗೆ ಉಭಯ ರಾಷ್ಟ್ರಗಳ ಸ್ನೇಹಾಚಾರ ವೃದ್ಧಿಯ ಜೊತೆಗೆ ಅಂತರ್ರಾಷ್ಟ್ರೀಯ ಕ್ರಿಮಿನಲ್‌ಗಳ ಗಡಿಪಾರು ಕುರಿತಂತೆ ಪರಸ್ಪರ ಸಹಕಾರ ಕೋರಲಾಗಿದೆ. ಮುಂದಿನ ದಿನಗಳಲ್ಲಿ ಕ್ರಿಮಿನಲ್ಸ್ ಗಳ ಗಡಿಪಾರು ಪ್ರಕ್ರಿಯೆ ಸರಳಗೊಳಿಸುವ ನಿಟ್ಟಿನಲ್ಲೂ ಈ ಮಾತುಕತೆ ನಡೆಸಲಾಗಿದೆ. ಈ ಕುರಿತು ಅಧಿಕೃತ ದ್ವಿಪಕ್ಷೀಯ ಮಾತುಕತೆ ಎರಡನೇ ದಿನ ನಡೆಯಲಿದೆ.

LEAVE A REPLY

Please enter your comment!
Please enter your name here