ಖಾಯಿಲೆ ಬಾರದ ಹಾಗೆ, ಲೈಫ್ ಟೈಮ್ ಹೆಚ್ಚಿಸಲು ಯೋಗ ಮುಖ್ಯ – ಡಾ. ಭಾಸ್ಕರ್ ಎಸ್
ವಯಸ್ಸು, ಸಾಮಾರ್ಥ್ಯ, ಶರೀರ ಪ್ರಕೃತಿಗೆ ಅನುಗುಣವಾಗಿ ಯೋಗ ಮಾಡಿ – ಡಾ.ಚೇತನಾ ಗಣೇಶ್
ಪುತ್ತೂರು: ದೇಹವನ್ನು ದಂಡಿಸಲು, ಮನಸ್ಸನ್ನು ಹತೋಟಿಯಲ್ಲಿಡಲು ಯೋಗ ಮುಖ್ಯ ಆಗ ಖಾಯಿಲೆಯೂ ಬರುವುದಿಲ್ಲ. ನಮ್ಮ ಲೈಫ್ ಟೈಮ್ ಕೂಡಾ ಹೆಚ್ಚು ಮಾಡಬಹುದು ಎಂದು ಪುತ್ತೂರು ಸಿಟಿ ಆಸ್ಪತ್ರೆಯ ಅಡಳಿತ ವ್ಯವಸ್ಥಾಪಕ ನಿರ್ದೇಶಕ ಡಾ. ಭಾಸ್ಕರ್ ಎಸ್ ಅವರು ಹೇಳಿದರು.
ಇನ್ನರ್ ವೀಲ್ ಕ್ಲಬ್ ಪುತ್ತೂರು ಮತ್ತು ಪುತ್ತೂರು ಸಿಟಿ ಹಾಸ್ಪಿಟಲ್ ಚಾರಿಟೇಬಲ್ ವತಿಯಿಂದ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಜೂ.21ರಂದು ನಡೆದ ಯೋಗ ಡೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇವರು ನಮಗೆ 120 ವರ್ಷ ಆಯುಷ್ಯ ಕೊಟ್ಟರೂ ಅಷ್ಟು ವರ್ಷ ಯಾರು ಬದುಕುವುದಿಲ್ಲ. ಯಾಕೆಂದರೆ ನಮ್ಮ ಜೀವನ ಶೈಲಿ ಬದಲಾಗಿದೆ. ಅನೇಕ ಇತರ ಖಾಯಿಲೆ ಮತ್ತು ಆಧುನಿಕ ವ್ಯವಸ್ಥೆಯಿಂದಾಗಿ ಆಯುಷ್ಯ ಕಡಿಮೆ ಆಗಿದೆ. ಯೋಗ ನಮಗೆ ಅಮರತ್ವ ಕೊಡದಿದ್ದರೂ ನಮ್ಮ ಲೈಫ್ ಟೈಮ್ ಹೆಚ್ಚು ಮಾಡಬಹುದು. ಮಾನಸಿಕ ಶಾಂತಿ ಪಡೆಯಬಹುದು. ಖಾಯಿಲೆಯೂ ಕಡಿಮೆ ಮಾಡಬಹುದು. ಇದರಿಂದ ಆಸ್ಪತ್ರೆಗೆ ಬರುವುದನ್ನು ತಪ್ಪಿಸಬಹುದು. ಖಾಯಿಲೆ ಬಂದಾಗ ಮಾತ್ರ ಆಸ್ಪತ್ರೆಗೆ ಬನ್ನಿ ಎಂದು ನಾನೊಬ್ಬ ವೈದ್ಯನಾಗಿ ಹೇಳುವ ಮಾತು. ನಮ್ಮ ಆಸ್ಪತ್ರೆಯಲ್ಲಿ ಕೇವಲ ಅಲೋಪತಿ ಮಾತ್ರವಲ್ಲದೆ ಆಯುರ್ವೇದ, ಯೋಗಚಿಕಿತ್ಸೆ, ಮುದ್ರೆ, ಪಿಸಿಯೋಥೆರಪಿ ಕೂಡಾ ಇದೆ. ನಮ್ಮ ಪರಿಸರದ ಜನರಿಗೆ ಉತ್ತಮ ಸೇವೆ ಕೊಡಬೇಕೆಂದು ಇದನ್ನೆಲ್ಲ ಆರಂಭದಲ್ಲೇ ಅಳವಡಿಕೊಂಡಿದ್ದೇವೆ. ಹಾಗಾಗಿ ಸರ್ವಿಸ ಪಸ್ಟ್, ಬಿಸ್‌ನೆಸ್ ನೆಕ್ಟ್ ಎಂಬುದು ನಮ್ಮ ದೇಯ ವಾಕ್ಯವಾಗಿದೆ ಎಂದರು.
ವಯಸ್ಸು, ಸಾಮಾರ್ಥ್ಯ, ಶರೀರ ಪ್ರಕೃತಿಗೆ ಅನುಗುಣವಾಗಿ ಯೋಗ ಮಾಡಿ:
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅಯುರ್ವೇದ ಮತ್ತು ಯೋಗ ಚಿಕಿತ್ಸಾ ತಜ್ಞೆ ಡಾ. ಚೇತನಾ ಗಣೇಶ್ ಅವರು ಯೋಗ ಯಾಕೆ, ಹೇಗೆ ಎಂಬ ಕುರಿತು ಮಾಹಿತಿ ನೀಡಿದರು. ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅದಕ್ಕೆ ಬೇಕಾದ ಅಸನಗಳು, ಪ್ರಾಣಾಯಾಮ, ಮುದ್ರೆಗಳನ್ನು ಮಾಡಿ. ಆದರೆ ಎಲ್ಲೂ ತಪ್ಪು ಅಭ್ಯಾಸಗಳನ್ನು ಕಂಡಿತಾ ಮಾಡಬೇಡಿ, ಟಿ ವಿ ಯುಟ್ಯೂಬ್ ನೋಡಿ ಮಾಡುವ ಬದಲು, ತಜ್ಞರಿಂದ ಮಾಹಿತಿ ಪಡೆದು ಕೊಳ್ಳಿ ಎಂದ ಅವರು ತಮ್ಮ ಸಾಮರ್ಥ್ಯಕ್ಕೆ, ವಯಸ್ಸಿನ, ಶರೀರ ಪ್ರಕೃತಿಗೆ ಅನುಗುಣವಾಗಿ ಯೋಗ ಮಾಡಿ. ಸ್ವಲ್ಪ ಸಮಯ ಮಾಡಿ ಬಿಡಬೇಡಿ. ಪುತ್ತೂರು ಸಿಟಿ ಆಸ್ಪತ್ರೆಯಲ್ಲೂ ಯೋಗ ಥೆರಪಿ ಇದೆ. ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶದಿಂದ ಆಸ್ಪತ್ರೆಯಲ್ಲಿ ಡಾ. ಭಾಸ್ಕರ್ ಅವರು ಎಲ್ಲಾ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಇನ್ನರ್ ವ್ಹೀಲ್ ಕ್ಲಬ್ ನ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ ಸ್ವಾಗತಿಸಿ ಮಾತನಾಡಿ ಕಳೆದ ಹಲವು ವರ್ಷಗಳಿಂದ ಪುತ್ತೂರು ಸಿಟಿ ಆಸ್ಪತ್ರೆ ಚಾರಿಟೇಬಲ್ ಟ್ರಸ್ಟ್‌ನಿಂದ ನಡೆಸುವ ಯೋಗ ಕಾರ್ಯಕ್ರಮದಲ್ಲಿ ನಮ್ಮ ಕ್ಲಬ್‌ನ್ನು ಸೇರಿಸಿಕೊಂಡು ನಮಗೆ ಅವಕಾಶಕೊಟ್ಟಿದ್ದಾರೆ ಎಂದರು. ವೇದಿಕೆಯಲ್ಲಿ ಇನ್ನರ್‌ವ್ಹೀಲ್ ನಿಯೋಜಿತ ಅಧ್ಯಕ್ಷೆ ರಾಜೇಶ್ವರಿ ಉಪಸ್ಥಿತರಿದ್ದರು. ಮನೋರಮ ಸೂರ್ಯ ಪ್ರಾರ್ಥಿಸಿದರು. ಕ್ಲಬ್‌ನ ವೆಬ್ ಕೋ ಆರ್ಡಿನೇಟರ್ ವಚನ ಜಯರಾಮ್ ಕಾರ್ಯಕ್ರಮ ನಿರೂಪಿಸಿದರು. ಇನ್ನರ್‌ವ್ಹೀಲ್ ಕ್ಲಬ್‌ನ ಪೂರ್ವಾ ಅಧ್ಯಕ್ಷೆ ಪ್ರಮೀಳಾ ರಾವ್, ಮಂಜುಳಾ ಭಾಸ್ಕರ್, ವೀಣಾ ಬಿ ಕೆ, ಕೃಷ್ಣವೇಣಿ ಮುಳಿಯ, ಅಶ್ವಿನಿ ಸಹಿತ ಹಲವಾರು ಮಂದಿ ಸದಸ್ಯರು ಉಪಸ್ಥಿತರಿದ್ದರು. ಯೋಗ ಮಾಹಿತಿ ಕಾರ್ಯಗಾರದ ಬಳಿಕ ಯೋಗ ಪ್ರಾತಿಕ್ಷೆಕೆ ನೀಡಲಾಯಿತು.
ಖಾಯಿಲೆ ಇಲ್ಲಾಂದ್ರೆ ಆರೋಗ್ಯವಂತವೆಂದು ಭಾವಿಸುವುದು ಬೇಡ
ಯೋಗವನ್ನು ಅಂತರಾಷ್ಟ್ರೀಯವಾಗಿ ಪರಿಚಯಿಸಲು ಪ್ರಧಾನಿ ನರೇಂದ್ರ ಮೋದಿಯವರು ಕಾರಣರಾದರು. ಇವತ್ತು ವಿಶ್ವದ ಎಲ್ಲಾ ದೇಶಗಳಲ್ಲಿ ಯೋಗ ಕಾರ್ಯಕ್ರಮ ನಡೆಯುತ್ತಿದೆ. ಅಂತಹ ವಿಶೇಷ ದಿನದಲ್ಲಿ ನಾವು ಕೂಡಾ ಯೋಗ ದಿನವನ್ನು ಈ ಹಿಂದಿನಿಂದಲೂ ಪುತ್ತೂರು ಇನ್ನರ್‌ವ್ಹೀಲ್ ಕ್ಲಬ್ ಜೊತೆಯಲ್ಲಿ ಹಮ್ಮಿಕೊಂಡು ಕೊಂಡು ಬರುತ್ತಿದ್ದೇವೆ. ಖಾಯಿಲೆ ಇಲ್ಲದವರು ಮಾತ್ರ ಆರೋಗ್ಯವಂತರಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮನುಷ್ಯ ಶಾರೀರಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಕವಾಗಿ ಸಾಮಾಜಿಕವಾಗಿ ಇರಬೇಕು ಎಂಬ ಮಾರ್ಗದರ್ಶಿ ಸೂತ್ರ ನೀಡಿದೆ. ಇದೆಲ್ಲವನ್ನು ಯೋಗದಿಂದ ಪಡೆಯಬಹುದು.
ಡಾ. ಭಾಸ್ಕರ್ ಎಸ್