ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಹಿಂದೂ ಸಾಮ್ರಾಜ್ಯ ದಿನ ಆಚರಣೆ

0

ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಸಾಮ್ರಾಟ್ ಛತ್ರಪತಿ ಶಿವಾಜಿಯವರ ಪಟ್ಟಾಭಿಷೇಕದ ದಿನವಾದ ಹಿಂದೂ ಸಾಮ್ರಾಜ್ಯ ದಿನವನ್ನು ಆಚರಿಸಲಾಯಿತು. ವಿವೇಕಾನಂದ ಪದವಿ ಕಾಲೇಜಿನ ವಿದ್ಯಾರ್ಥಿಯಾದ ಅಭಿರಾಮ್ ಭಟ್ ಇವರು ಹಿಂದವಿ ಸಾಮ್ರಾಜ್ಯ ನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರ ಕಾರ್ಯ-ಸಾಹಸ- ನಾಯಕತ್ವ ಗುಣಗಳನ್ನು ಘಟನೆಗಳನ್ನು ಓದಿ – ಕೇಳಿ ತಿಳಿಯಬೇಕಿದೆ. ಇತಿಹಾಸ ಪ್ರಸಿದ್ಧ ನಾಯಕರು ನಮಗೆ ನಾಯಕರಾಗಬೇಕು ಎಂದು ತಿಳಿಸಿದರು.

ಶಾಲಾ ಪೋಷಕರಾದ ಶಶಿಕಲಾ,ಆಡಳಿತ ಮಂಡಳಿ ಕೋಶಾಧಿಕಾರಿ ಅಶೋಕ ಕುಂಬಳೆ, ಪ್ರೌಢ ಶಾಲಾ ಮುಖ್ಯಗುರು ಆಶಾಬೆಳ್ಳಾರೆ, ಶಾಲಾ ಸಮಾಜ ವಿಜ್ಞಾನ ಸಂಘ- ಸಮನ್ವಯದ ಸಂಯೋಜಕ ಶಿಕ್ಷಕಿಯಾದ ಲೀಲಾವತಿ ಉಪಸ್ಥಿತರಿದ್ದರು. ಸಹಶಿಕ್ಷಕಿ ಗೀತಾ.ಬಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here