ಪುತ್ತೂರು: ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಷಣ್ಮುಖ ದೇವ ಪ್ರೌಢಶಾಲೆಯಲ್ಲಿ ಗುಪ್ತ ಮತದಾನದ ಮೂಲಕ ಶಾಲಾ ಸಂಸತ್ತು ರಚನೆಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಜೂ.21ರಂದು ನಡೆಯಿತು.
ಮುಖ್ಯಮಂತ್ರಿಯಾಗಿ ಹತ್ತನೇ ತರಗತಿಯ ವಿದ್ಯಾರ್ಥಿನಿ ಕು!ಮೌಲ್ಯಾ ಉಪ ಮುಖ್ಯಮಂತ್ರಿಯಾಗಿ ಒಂಭತ್ತನೇ ತರಗತಿಯ ಶ್ರವಣ್, ವಿರೋಧ ಪಕ್ಷದ ನಾಯಕಿಯಾಗಿ ಕಾವ್ಯಶ್ರೀ, ಸಭಾಪತಿಯಾಗಿ,ಪ್ರೇಕ್ಷಾ ಕುಮಾರಿ ಹಾಗೂ ಮಂತ್ರಿ ಮಂಡಲದಲ್ಲಿ ಸ್ವಸ್ತಿಕ್,ಸಂಜಯ್,ಧನ್ಯಶ್ರೀ, ದೀಪ ಶ್ರೀ,ಸಿಂಚನ್,ಯಶಸ್ವಿನಿ,ಸಿಂಚನಾ,ಪೂಜಾ, ರಂಜಿತ್,ಕೃಪೇಶ್,ಹಿಮಾನಿ,ಯಶ್ಮಿತಾ,ದಿಶಾಂತ್, ಕಿಶನ್,ಅನೀಶ್,ದೀವಿತಾ,ರಕ್ಷಾ, ತೃಪ್ತಿ ಅಖಿಲ್, ಪುನೀತ್ ಇವರುಗಳು ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು ಮುಖ್ಯ ಗುರು ಕೃಷ್ಣವೇಣಿ ಹಾಗೂ ಹಿರಿಯ ಶಿಕ್ಷಕ ನಂಜುಂಡಪ್ಪ ಸಂಸತ್ತಿನ ಕಾರ್ಯಗಳ ಬಗ್ಗೆ ವಿವರಿಸಿದರು.ಆಯಿಷತ್ ಶೈಮಾ ಸ್ವಾಗತಿಸಿ ,ಫಾತಿಮಾ ರಹಿಯಾನತ್ ವಂದಿಸಿದರು. ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.