ಪುತ್ತೂರು: ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲದಲ್ಲಿ 10 ನೇ ವರ್ಷದ ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ನರಿಮೊಗರು ಗ್ರಾಮಪಂಚಾಯತ್ ಅಧ್ಯಕ್ಷೆ ಹರಿಣಿ ಇವರು ವಹಿಸಿದ್ದರು.
ದೇಶದಾದ್ಯಂತ ಇಂದು ಎಲ್ಲಾ ಶಾಲೆಯವರು ಯೋಗ ದಿನವನ್ನಾಗಿ ಆಚರಿಸುತ್ತಿದ್ದೇವೆ. ವೀರಮಂಗಲ ಶಾಲೆಯಲ್ಲಿ ನಡೆಯುವ ಯೋಗೋತ್ಸವಕ್ಕೆ ಶುಭಹಾರೈಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಯೋಗ ಕೇವಲ ಶಾರೀರಿಕ ಅಭ್ಯಾಸವಲ್ಲ ಅದು ನಮ್ಮ ಸಂಸ್ಕೃತಿ. ಯೋಗ ಸ್ವಚ್ಛಂದ ಮನಸ್ಸಿನ ಆಗರ. ಯೋಗವಿದ್ದರೆ ರೋಗವಿಲ್ಲ. ಯೋಗ ನಮ್ಮ ದೇಶದ ಪ್ರಾಚೀನ ಕಾಲದ ಮಹರ್ಷಿಗಳ ಬದುಕಿನ ಸಂಸ್ಕೃತಿಯ ಸಾರ , ಯೋಗ ಒಂದು ಜೀವನ ಶೈಲಿ ಎಂದು ನುಡಿದರು.
ವೀರಮಂಗಲ ಶಾಲೆಯ ಸಂಸ್ಕೃತಿಗೂ ಯೋಗಕ್ಕು ಹತ್ತಿರ ಸಂಬಂಧವಿದೆ. ವೀರಮಂಗಲ ಶಾಲೆ ಗುರುಕುಲ ಮಾದರಿಯ ಶಾಲೆ , ಇಲ್ಲಿನ ಕ್ರಿಯಾಶೀಲ ಮುಖ್ಯಗುರುಗಳ ಮತ್ತು ಶಿಕ್ಷಕರ ಉತ್ತಮ ಕಾರ್ಯನಿರ್ವಹಣೆ ನಮ್ಮ ಇಲಾಖೆಗೆ ಹೆಮ್ಮೆ ಎಂದು ನುಡಿದರು. ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಎನ್ ಸುಂದರಗೌಡ ಮಕ್ಕಳು ಪ್ರದರ್ಶಿಸಿದ ಯೋಗ ಚಟುವಟಿಕೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು .ಯೋಗ ನಮ್ಮ ದೇಶದ ಕೊಡುಗೆ ಇದು ನಮ್ಮ ನಮ್ಮಜೀವನದ ಒಂದು ಭಾಗವಾಗಬೇಕು.ಪ್ರತಿದಿನ ಅಭ್ಯಾಸ ಮಾಡಿ ಸದೃಡವಾಗಬೇಕು ಎಂದರು.
BRC ಕೇಂದ್ರದ ಸಮನ್ವಯಾಧಿಕಾರಿ ನವೀನ್ ಸ್ಟೀಪನ್ ವೇಗಸ್ ಮಾತನಾಡಿ ವೀರಮಂಗಲ ಶಾಲೆಯ ಶೈಕ್ಷಣಿಕ ಬೆಳವಣಿಗೆ ಇತರ ಶಾಲೆಗಳಿಗೆ ಮಾದರಿ ಎಂದು ನುಡಿದರು. 180 ಮಕ್ಕಳ ಯೋಗ ಚಟುವಟಿಕೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಸಿ ಆರ್ ಪಿ ಪರಮೇಶ್ವರಿ ಯೋಗ ದಿನಾಚರಣೆಯ ಶುಭಾಶಯ ಕೋರಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅನುಪಮ,ಉಪಾಧ್ಯಕ್ಷ ರಝಾಕ್, ಸದಸ್ಯರಾದ ರಾಜೇಶ್ವರಿ, ಭವ್ಯ, ಶಾಂಬಲತಾ, ಚಿತ್ರಾ,ಸುರೇಶ್ ಗಂಡಿ,ಹಿರಿಯ ವಿದ್ಯಾರ್ಥಿ ಸಂಘದ ಗೋಪಾಲಕೃಷ್ಣ, ಪೋಷಕರಾದ ಹರೀಶ ಮಣ್ಣಗುಂಡಿ, ಸಂದೀಪ್ ಕಾಂತೀಲ, ಯೋಗೀಶ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ತಾರಾನಾಥ ಸವಣೂರು ಸ್ವಾಗತಿಸಿದರು, ಶಿಕ್ಷಕರಾದ ಹರಿಣಾಕ್ಷಿ, ಶೋಭಾ, ಕವಿತಾ, ಶಿಲ್ಪರಾಣಿ, ಸೌಮ್ಯ ಅತಿಥಿಗಳನ್ನು ಗೌರವಿಸಿದರು. ಶ್ರೀಲತಾ ವಂದಿಸಿದರು ಸವಿತಾ,ಸಂಚನಾ ಚಂದ್ರಾವತಿ ,ಅಡುಗೆ ಸಿಬ್ಬಂಧಿಗಳಾದ ಪಾರ್ವತಿ, ಪ್ರೇಮ ಸುಶೀಲಾ ಸಹಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಶ್ರೀ ಅರುಣ್ ಕುಮಾರ್ ಪುತ್ತಿಲ ಇವರು ಪಿ ಎಂ ಶ್ರೀ ಶಾಲೆ ವೀರಮಂಗಲ ಇಲ್ಲಿನ ಯೋಗೋತ್ಸವದ ಕಾರ್ಯಕ್ರಮಕ್ಕೆ ಪುತ್ತಿಲ ಪರಿವಾರ ವೀರಮಂಗಲ ಇದರ ವತಿಯಿಂದ ಕೊಡ ಮಾಡಿದ 100 T shirt ಗಳನ್ನು ವಿತರಿಸಿದರು. ಪುತ್ತಿಲ ಪರಿವಾರದ ಅಧ್ಯಕ್ಷರು,ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಶ್ರೀ ಮಹಾವಿಷ್ಣು ಸೇವಾಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಸೇರಿದಂತೆ ಪರಿವಾರದ ಹಲವು ಮಂದಿ ಉಪಸ್ಥಿತರಿದ್ದರು.