ಪೆರಿಯಡ್ಕ ಸರ್ವೋದಯ ಪ್ರೌಢಶಾಲೆಯಲ್ಲಿ ಯೋಗ ದಿನಾಚರಣೆ

0

ಉಪ್ಪಿನಂಗಡಿ: ಸರ್ವೋದಯ ಪ್ರೌಢಶಾಲೆ ಪೆರಿಯಡ್ಕ ಇಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.

ಸಂಪನ್ಮೂಲ ವ್ಯಕ್ತಿಗಳಾದ ಈಶ ಯೋಗ ಕೇಂದ್ರದ ಶ್ರವಣ್ ಕುಮಾರ್ ಶೆಟ್ಟಿ ಮತ್ತು ವಿಘ್ನೇಶ್‌ಕುಮಾರ್ ಅವರು ವಿದ್ಯಾರ್ಥಿಗಳಿಗೆ ಯೋಗಭ್ಯಾಸ ಮಾಡಿಸಿದರು. ಸಂಸ್ಥೆಯ ಪರಿವೀಕ್ಷಕರಾದ ಬಾಲಕೃಷ್ಣ ಗೌಡ ಅವರು ಯೋಗದ ಮಹತ್ವವನ್ನು ತಿಳಿಸಿದರು. ಪೆರಿಯಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷರು, ಅಮ್ಮ ಇಂಟೀರಿಯರ್ ಡೆಕೊರೇಟ್ಸ್‌ನ ಮಾಲಕರಾದ ಪ್ರಸನ್ನ ಪೆರಿಯಡ್ಕ, ಎಸ್‌ಡಿಎಂಸಿ ಅಧ್ಯಕ್ಷ ಶೀನಪ್ಪ ಗೌಡ ಬೊಳ್ಳಾವು ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕಿ ಲಕ್ಷ್ಮೀ ಪಿ., ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಮೋಹನ ಹೆಚ್.ವಂದಿಸಿದರು. ಸಹಶಿಕ್ಷಕರಾದ ಸವಿತಾ ಪಿ.ಸಿ., ರಜನಿ ಹೆಚ್., ಭವ್ಯ ವೈ ಸಹಕರಿಸಿದರು. ಯೋಗ ಮತ್ತು ಗಣಿತ ಶಿಕ್ಷಕಿ ಶಕುಂತಳಾ ಕೆ.ನಿರೂಪಿಸಿದರು. ಪೆರಿಯಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ವತಿಯಿಂದ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here