ನಿಡ್ಪಳ್ಳಿ; ಸರಕಾರಿ ಹಿರಿಯ ಪ್ರಾಥಮಿಕ ಶಾಲೆ.ಮುಂಡೂರು 1 ನಿಡ್ಪಳ್ಳಿ ಇಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಮುಖ್ಯ ಗುರು ಆಶಾ ಎಸ್ ಇವರು ಅಂತರಾಷ್ಟ್ರೀಯ ಯೋಗ ದಿನದ ಮಹತ್ವವನ್ನು ತಿಳಿಸಿದರು. ಸಹಶಿಕ್ಷಕಿ ಸೌಮ್ಯ ಮಾರ್ಗದರ್ಶಕರಾಗಿ ದ್ಯಾನ, ಪ್ರಾಣಾಯಾಮ ಮತ್ತು ಆಸನಗಳನ್ನು ವಿದ್ಯಾರ್ಥಿಗಳಿಗೆ ಮಾಡಿಸಿದರು. ಆಸನಗಳನ್ನು ಮಾಡುವ ಸರಿಯಾದ ಕ್ರಮ ಹಾಗೂ ಅದರಿಂದಾಗುವ ಪ್ರಯೋಜನಗಳನ್ನು ಗೌರವ ಶಿಕ್ಷಕಿ ಭಾರತಿ ವಿವರಿಸಿದರು. ಸಹ ಶಿಕ್ಷಕಿ ಸಾವಿತ್ರಿ ಮತ್ತು ಅತಿಥಿ ಶಿಕ್ಷಕಿ ಧನ್ಯಶ್ರೀ ಇವರು ವಿದ್ಯಾರ್ಥಿಗಳಿಗೆ ಆಸನಗಳನ್ನು ಅಭ್ಯಸಿಸಲು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.