ಹಿರೆಬಂಡಾಡಿ: ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ‘ಮಹಿಳಾ ಸಬಲೀಕರಣಕ್ಕಾಗಿ ಯೋಗ’ ಎಂಬ ಧ್ಯೇಯ ವಾಕ್ಯದೊಂದಿಗೆ ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು.
ಯೋಗ ಶಿಕ್ಷಕ ಆನಂದ ಪೆರಿಯಡ್ಕ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಯೋಗ ದೇಹ, ಮನಸ್ಸುಗಳ ಸಾಮರಸ್ಯ, ಆರೋಗ್ಯದ ಕೀಲಿಕೈ ಎಂದರು. ಯೋಗಶಿಕ್ಷಕರಾದ ಕೃಷ್ಣಪ್ಪ, ಆಶಾ, ಶಶಿಕಲಾರವರು ವಿದ್ಯಾರ್ಥಿಗಳಿಗೆ ಯೋಗ ಪ್ರಾತ್ಯಕ್ಷಿಕೆ ನೀಡಿದರು. ಹಿರಿಯ ಶಿಕ್ಷಕಿ, ಯೋಗ ಪ್ರಶಿಕ್ಷಣಾರ್ಥಿ ಲಲಿತಾ ಅವರು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಮಲ್ಲಿಕಾ ಐ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಮನೋಹರ್ ಎಂ.ಸ್ವಾಗತಿಸಿ, ವಸಂತಕುಮಾರ್ ಪಿ.ವಂದಿಸಿದರು. ಅತಿಥಿ ಶಿಕ್ಷಕಿಯರಾದ ಆರತಿ ವೈ.ಡಿ., ಮಮತಾ ಎಂ.ಸಹಕರಿಸಿದರು. ಬಳಿಕ ವಿದ್ಯಾರ್ಥಿಗಳು ಯೋಗಾಸನದಲ್ಲಿ ಪಾಲ್ಗೊಂಡರು.