ಪಂಜಳ- ಪರ್ಪುಂಜ ರಸ್ತೆ ದುರಸ್ತಿಗೆ ಶಾಸಕರ ಸೂಚನೆ

0

ಪುತ್ತೂರು; ಪಂಜಳದಿಂದ- ಪರ್ಪುಂಜಕ್ಕೆ ತೆರಳುವ ಜಿ.ಪಂ ರಸ್ತೆಯು ಸಂಪೂರ್ಣ ಹೊಂಡಮಯವಾಗಿದ್ದು ರಸ್ತೆಯನ್ನು ದುರಸ್ತಿ ಮಾಡುವಂತೆ ಶಾಸಕ ಅಶೋಕ್ ರೈಯವರು ಜಿ.ಪಂ ಇಂಜಿನಿಯರ್‌ಗೆ ಸೂಚನೆಯನ್ನು ನೀಡಿದ್ದಾರೆ.


ಈ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು ವಾಹನ ಸಂಚಾರಕ್ಕೆ ಅಸಾಧ್ಯವಾಗಿದೆ ಎಂದು ಕುರಿಯ ಆಟೋ ಚಾಲಕರ ಸಂಘದ ವತಿಯಿಂದ ಶಾಸಕರಿಗೆ ಮನವಿ ಮಾಡಿದ್ದರು. ರಸ್ತೆಯ ವಿಚಾರದ ಬಗ್ಗೆ ಜಿ.ಪಂ ಇಂಜಿನಿಯರ್ ಜತೆ ಮಾತನಾಡಿದ ಶಾಸಕರು ಪಂಜಳ ಕುರಿಯ ರಸ್ತೆಯ ಅಲ್ಲಲ್ಲಿ ಡಾಮಾರು ಎದ್ದು ಹೊಂಡವಾಗಿದೆ. ಸಂಚಾರಕ್ಕೆ ಅಡಚಣೆಯಾಗಿದೆ ಎಂದು ನಾಗರಿಕರು ತಿಳಿಸಿದ್ದು ಒಂದು ವಾರದೊಳಗೆ ಇಲ್ಲಿನ ರಸ್ತೆಯ ಹೊಂಡಕ್ಕೆ ಮುಕ್ತಿ ಕಾಣಿಸಬೇಕು ಎಂದು ಶಾಸಕರು ಸೂಚನೆಯನ್ನು ನೀಡಿದ್ದಾರೆ.


ಈ ಸಂದರ್ಭದಲ್ಲಿ ಕುರಿಯ ವಲಯ ಉಸ್ತುವಾರಿ ಶಿವರಾಮ ಆಳ್ವ, ರಮೇಶ್ ಅಂಚನ್, ಪ್ರಸಾದ್, ಇಲ್ಯಾಸ್ ಪಾಷಾ, ಇಮಾಂ ಷಾ, ರಮೇಶ್ ಎ, ಅಬ್ದುಲ್ಲ, ರಾಜೇಶ್, ಹಬೀಬ್, ನವೀನ್ ಕೋಟ್ಯಾನ್, ದುಗ್ಗಪ್ಪ, ಮುಸ್ಥಫಾ, ರಮೇಶ್, ನಿಝಾರ್, ಅಬ್ದುಲ್ಲ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here