ವಿಟ್ಲ: ಮನಸ್ಸು, ದೇಹ ಮತ್ತು ಆತ್ಮಗಳ ಸಂಯೋಜನೆಯ ಯತ್ನವೇ ಯೋಗ. ಅಪರೂಪದ ಪ್ರಯತ್ನದಿಂದ ನಿರೀಕ್ಷಿತ ಫಲ ದೊರೆಯದು ನಿರಂತರ ಅಭ್ಯಾಸದಿಂದ ಫಲ ನಿಶ್ಚಿತ ಎಂದು ವಿಟ್ಲ ಭಾರತ್ ಆಡಿಟೋರಿಯಂ ನಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಜೇಸಿ ಶಾಲಾ ಆಡಳಿತಾಧಿಕಾರಿ ರಾಧಾಕೃಷ್ಣ ಎರುಂಬು ಹೇಳಿದರು.
ಅವರು ಯಕ್ಷ ಭಾರತ ಸೇವಾ ಪ್ರತಿಷ್ಟಾನ ಮತ್ತು ಶ್ರೀ ಭಗವತಿ ಯೋಗಕೇಂದ್ರದ ವತಿಯಿಂದ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಮಾತನಾಡಿದರು.
ಸಂಸ್ಥೆಯ ಯೋಗಗುರು ಸಂಜೀವ ಪೂಜಾರಿ ಯವರು ಮಾತನಾಡಿ ವ್ಯಾಯಾಮ, ಪ್ರಾಣಾಯಾಮ ಹಾಗೂ ಆಹಾರಕ್ರಮದ ಬಗೆಗೆ ಸಲಹೆ ನೀಡಿದರು. ಸುಮಾರು 40 ಕ್ಕಿಂತಲೂ ಹೆಚ್ಚು ಯೋಗಪಟುಗಳು ಭಾಗವಹಿಸಿ ಆನಂದಿಸಿದರು. ಭಾರತ್ ಶಾಮಿಯಾನ ಹಾಗೂ ಭಾರತ್ ಆಡಿಟೋರಿಯಂ ಮಾಲಕರಾದ ಸಂಜೀವ ಪೂಜಾರಿ ಯವರು ಸ್ವಾಗತಿಸಿ ವಂದಿಸಿದರು.