ಪುತ್ತೂರು: ಉಪ್ಪಿನಂಗಡಿ ವೇದಶಂಕರನಗರದ ಶ್ರೀರಾಮ ಶಾಲೆಯಲ್ಲಿ ನಡೆದ ಶಾಲಾ ವಿದ್ಯಾರ್ಥಿ ಸಂಸತ್ತು ಚುನಾವಣೆ ಗಮನ ಸೆಳೆಯಿತು.ವಿದ್ಯಾರ್ಥಿಗಳನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಶಾಸಕರ ಆಯ್ಕೆ ಪ್ರಕ್ರಿಯೆ ನಡೆಯುವ ರೀತಿಯಲ್ಲಿ 5ನೇ ತರಗತಿಯಿಂದ 10ನೇ ತರಗತಿಯವರೆಗೆ ಸರಯೂ , ಜನಕಪುರಿ, ಕಿಷ್ಕಿಂಧೆ, ಸಾಕೇತ, ಕೋಸಲ ಹಾಗೂ ಅಯೋಧ್ಯಾ ಮತ ಕ್ಷೇತ್ರಗಳಾಗಿ ವಿಂಗಡಿಸಿ. ಚುನಾವಣಾ ಪ್ರಕ್ರಿಯೆ ನಡೆಸಲಾಯಿತು. ಜೂನ್ 11ರಂದು ನಾಮಪತ್ರ ಸಲ್ಲಿಕೆ, 12ಎಂದು ನಾಮಪತ್ರ ಹಿಂತೆಗೆತ, 13ರಂದು ಅಂತಿಮ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಹಾಗೂ ಗುರುತಿನ ಚಿಹ್ನೆ ನೀಡುವ ಪ್ರಕ್ರಿಯೆ ಜರಗಿತು. 14ರಂದು ಚುನಾವಣಾ ಪ್ರಚಾರ ಬಹಿರಂಗವಾಗಿ ನಡೆದು 15ರಂದು ಮತದಾನ 2 ಮತಗಟ್ಟೆಗಳಲ್ಲಿ ನಡೆಯಿತು.
ಕ್ಷೇತ್ರವಾರು ಮಂತ್ರಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆದ ಬಳಿಕ ಅಧ್ಯಕ್ಷೀಯ ಮಾದರಿಯಲ್ಲಿ ಎಲ್ಲಾ ಕ್ಷೇತ್ರಗಳಿಂದ ಮತದಾರರು ಶಾಲಾನಾಯಕ, ಶಾಲಾ ಉಪನಾಯಕ, ಶಾಲಾಉಪ ನಾಯಕಿಯ ಸ್ಥಾನಕ್ಕೆ ತಮಗೆ ನಿಗದಿಪಡಿಸಿದ ಗುರುತಿನ ಚೀಟಿ ತೋರಿಸುವ ಮೂಲಕ ತಮ್ಮ ಮತ ಚಲಾಯಿಸಿದರು. ಒಟ್ಟು ಶೇ.97ರಷ್ಟು ಮತದಾನವಾಗಿತ್ತು.

ಗಮನ ಸೆಳೆದ ಮತ ಎಣಿಕೆ:
ಜೂನ್ 17ರಂದು ಮತ ಎಣಿಕೆ ಶಾಲೆಯ ಉರಿಮಜಲು ರಾಮಭಟ್ ಸಭಾಂಗಣದಲ್ಲಿ ನಡೆಯಿತು. ಇದರ ನೇರಪ್ರಸಾರ ಮತದಾರರಲ್ಲಿ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿತ್ತು.
ಶಾಲಾ ನಾಯಕನಾಗಿ ಯಕ್ಷಿತ್ ಜಿ, ಉಪನಾಯಕನಾಗಿ ಮನೀಶ್, ಶಾಲಾ ಉಪನಾಯಕಿಯಾಗಿ ಚಿನ್ಮಯಿ ಜೋಗಿ ಕೆ ಆಯ್ಕೆಯಾದರು.
ಕ್ಷೇತ್ರವಾರು ಮಂತ್ರಿಗಳಾಗಿ ಕ್ರೀಡಾ ಮಂತ್ರಿಯಾಗಿ ಮನ್ವಿತ್ ಗೌಡ ಜಿ. ಎನ್ (9ನೇ), ಸ್ವೀಕೃತಾ ( 7ನೇ),ಆಹಾರ ಮತ್ತು ಆರೋಗ್ಯ ಮಂತ್ರಿಯಾಗಿ ಕುಶ್ವಿತ್ ಎಂ(9ನೇ), ವೈಷ್ಣವಿ ಜೆ ನಾಯ್ಕ್ (7ನೇ). ಗೃಹ ಮಂತ್ರಿಯಾಗಿ ಚಿತೇಶ್ (9ನೇ), ವೇದಾಂತ್ ಎನ್. (7ನೇ), ಸಾಂಸ್ಕೃತಿಕ ಮತ್ತು ಗ್ರಂಥಾಲಯ ಮಂತ್ರಿಯಾಗಿ ಸುಶ್ಮಿತಾ (9ನೇ), ಧನ್ವಿತ್ ಆರ್ (7ನೇ), ಕೃಷಿ ಮತ್ತು ನೀರಾವರಿ ಮಂತ್ರಿಯಾಗಿ ರಂಜನ್ (8ನೇ), ರಕ್ಷಾ (6ನೇ), ಶಿಸ್ತು ಮತ್ತು ಸ್ವಚ್ಚತಾ ಮಂತ್ರಿಯಾಗಿ ಲತಿಕಾ ಎನ್. (8ನೇ), ವಿಭಾ ಯು.ಎಚ್. (6ನೇ),ಮಾಹಿತಿ ಮತ್ತು ಪ್ರಸಾರ ಮಂತ್ರಿಯಾಗಿ ದಿಶಾ (8ನೇ) ಮತ್ತು ಶಾಶ್ವಿತ್ ಎಂ. (6ನೇ) ಆಯ್ಕೆಗೊಂಡರು.
ಮುಖ್ಯ ಚುನಾವಣಾಧಿಕಾರಿಯಾಗಿ ಕೃಪಾ ಐ.ಜಿ., ಉಪ ಚುನಾವಣಾಧಿಕಾರಿಗಳಾಗಿ ನಮಿತಾ ಕೆ ಮತ್ತು ಶ್ರೀನಿಧಿ, ಚುನಾವಣಾ ಕಣ್ಗಾವಲು ಅಧಿಕಾರಿಯಾಗಿ ಲತಾ ಕುಮಾರಿ ಹಾಗೂ ಪ್ರೌಢ ವಿಭಾಗದ ಮುಖ್ಯ ಗುರು ರಘುರಾಮ್ ಭಟ್ ಸಿ., ಪ್ರಾಥಮಿಕ ವಿಭಾಗದ ಮುಖ್ಯಗುರು ವಿಮಲ ಸಹಕರಿಸಿದರು.