ವಿಟ್ಲ: ಹಲಸಿನಕಾಯಿ ತಲೆಗೆ ಬಿದ್ದು ಮೃತ್ಯು

0

ವಿಟ್ಲ: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಹಲಸಿನಕಾಯಿ ಮರದಿಂದ ತಲೆಗೆ ಬಿದ್ದ ಪರಿಣಾಮ ವೃದ್ಧರೋರ್ವರು ಮೃತಪಟ್ಟ ಘಟನೆ ಜೂ.23ರಂದು ಸಂಜೆ ವಿಟ್ಲ ಕಸಬ ಗ್ರಾಮದ ದಾಸರಬೆಟ್ಟು ಎಂಬಲ್ಲಿ ನಡೆದಿದೆ.


ದಾಸರಬೆಟ್ಟು ನಿವಾಸಿ ಕಾಶ್ಮೀರ್ ಡಿ.ಸೋಜ(80ವ.)ಮೃತಪಟ್ಟವರಾಗಿದ್ದಾರೆ. ಕಾಶ್ಮೀರ್ ಡಿ.ಸೋಜ ಅವರು ತಮ್ಮ ತೋಟದಲ್ಲಿ ಮದ್ದು ಬಿಡುವ ಕೆಲಸದವರ ಜೊತೆ ಕೆಲಸ ಮಾಡಿಕೊಂಡಿದ್ದಾಗ ಹಲಸಿನ ಮರದಿಂದ ಹಲಸಿನ ಕಾಯಿಯೊಂದು ಆಕಸ್ಮಿಕವಾಗಿ ಮರದಿಂದ ಕಾಶ್ಮೀರ್ ಡಿ.ಸೋಜ ಅವರ ತಲೆಗೆ ಬಿದ್ದು ಮೂಗಿನಲ್ಲಿ ರಕ್ತ ಬರಲಾರಂಭಿಸಿತ್ತು. ಇದನ್ನು ಕಂಡ ಅಡಿಕೆ ಮರಕ್ಕೆ ಮದ್ದು ಬಿಡುತ್ತಿದ್ದ ಪ್ರವೀಣ್ ಅವರು ಕಾಶ್ಮೀರ್ ಡಿ.ಸೋಜ ಅವರ ಸಂಬಂಧಿಕರಾದ ಹಿಲರಿ ಮೊಂತೇರೊರವರಿಗೆ ಪೋನ್ ಮಾಡಿ ತಿಳಿಸಿದ್ದು ಅವರು ಬಂದು ಕಾರಿನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಾಗ ಪರೀಕ್ಷಿಸಿದ ವೈದ್ಯರು ಕಾಶ್ಮೀರ್ ಡಿ.ಸೋಜ ಅವರು ಮೃತಪಟ್ಟಿರುವುದನ್ನು ದೃಢಪಡಿಸಿದ್ದರು ಎಂದು ವರದಿಯಾಗಿದೆ. ಈ ಬಗ್ಗೆ ಮೃತರ ಪುತ್ರ ವಿಕ್ಟರ್ ಡಿ.ಸೋಜ ಎಂಬವರು ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here