ಈಶ್ವರಮಂಗಲ ಶ್ರೀ ಗಜಾನನ ಆ.ಮಾ ಶಾಲಾ ಮಂತ್ರಿಮಂಡಲ ರಚನೆ

0

ಈಶ್ವರಮಂಗಲ :,ಈಶ್ವರಮಂಗಲ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲದ ಚುನಾವಣೆಯು ಪ್ರಾಂಶುಪಾಲರು,ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರ ಸಹಭಾಗಿತ್ವದಲ್ಲಿ ನಡೆಯಿತು.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಾಲಾ ಮುಖ್ಯಮಂತ್ರಿಯಾಗಿ ದಿಶಾ ಪಿ ಡಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಪ್ರತೀತಿ ಹಾಗೂ ಪ್ರೌಢಶಾಲಾ ವಿಭಾಗದ ಮುಖ್ಯಮಂತ್ರಿಯಾಗಿ ದರ್ಶನ್ ಬಿ ಎನ್ ಹಾಗೂ ಉಪಮುಖ್ಯಮಂತ್ರಿ ಯಾಗಿ ಧ್ಯಾನ್ ಕೃಷ್ಣರವರನ್ನು  ಚುನಾವಣೆಯ ಮೂಲಕ ಆಯ್ಕೆಗೊಳಿಸಿದರು. ವಿದ್ಯಾರ್ಥಿಗಳಲ್ಲಿ ಮತದಾನದ ಅರಿವು ಮೂಡಿಸುವ ಸಲುವಾಗಿ ಇ ವಿ ಎಂ ಮಿಷನ್ ಮೂಲಕ ವಿದ್ಯಾರ್ಥಿಗಳು ಮತ ಚಲಾಯಿಸಿದರು. 2024-25ನೇ ಸಾಲಿನ ಶಾಲಾ ಮಂತ್ರಿಮಂಡಲದಲ್ಲಿ ಆಯ್ಕೆಗೊಂಡ ಎಲ್ಲಾ ವಿದ್ಯಾರ್ಥಿಗಳ ಪ್ರಮಾಣ ವಚನ ಜೂ.18ರಂದು ಪ್ರಾಂಶುಪಾಲರ ನೇತೃತ್ವದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ  ನಹುಷ ಪಿ ವಿ ರವರು ಉಪಸ್ಥಿತರಿದ್ದು, ದೀಪ ಪ್ರಜ್ವಲನೆಯ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ ಸೌಮ್ಯ ಎ ಅವರು ಶಾಲಾ ಮಂತ್ರಿಮಂಡಲದ ರಚನೆಯ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲ ಕೆ ಶಾಮಣ್ಣರವರು ಶಾಲಾ ಮಂತ್ರಿಗಳಾದ ವಿದ್ಯಾರ್ಥಿಗಳು ಶಿಸ್ತಿನಿಂದ ಜವಾಬ್ದಾರಿಯನ್ನು ತೆಗೆದುಕೊಂಡು ತಮ್ಮ ಕರ್ತವ್ಯವನ್ನು ನಿಯತ್ತಿನಿಂದ ನಿರ್ವಹಿಸಬೇಕೆಂದು ಹೇಳಿದರು. ಮನ್ವಿತಾ ಸ್ವಾಗತಿಸಿ, ರಿಯಾ ಬಿನೋಯ್ ಮತ್ತು ಬಳಗ ಪ್ರಾರ್ಥಿಸಿ, ಬಿಂದ್ಯಾ ವಂದಿಸಿದರು.ವಿದ್ಯಾರ್ಥಿನಿ ಅನಾಮಿಕ ನಿರೂಪಿಸಿದರು.

LEAVE A REPLY

Please enter your comment!
Please enter your name here