ಶಾಲಾ ನಾಯಕ-ಅನಿರುದ್ಧ, ಉಪನಾಯಕ-ತುಷಾನ್ಕುಮಾರ್
ರಾಮಕುಂಜ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತು ಚುನಾವಣೆಯ ಮೂಲಕ ವಿದ್ಯಾರ್ಥಿ ನಾಯಕರ ಆಯ್ಕೆ ಪ್ರಕ್ರಿಯೆ ನಡೆಯಿತು.
ಶಾಲಾ ನಾಯಕನಾಗಿ 10ನೇ ತರಗತಿಯ ಅನಿರುದ್ಧ, ಉಪನಾಯಕನಾಗಿ ೯ನೇ ತರಗತಿಯ ತುಷಾನ್ ಕುಮಾರ್ ಕೆ. ಹಾಗೂ ಕಾರ್ಯದರ್ಶಿಯಾಗಿ 10ನೇ ತರಗತಿಯ ಕೀರ್ತನಾರವರು ಆಯ್ಕೆಯಾದರು. ಶಾಲಾ ಮುಖ್ಯಗುರು ಸತೀಶ್ ಭಟ್ರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆ ಪ್ರಕ್ರಿಯೆ ನಡೆಯಿತು. ಶಿಕ್ಷಕ ವೃಂದದವರು ಸಹಕರಿಸಿದರು.