ಶ್ರೀ ಮಹಾಲಿಂಗೇಶ್ವರ ದೇವಳದ ಪರಿಚಾರಕರಾಗಿದ್ದ ದಿ.ಸುಬ್ರಹ್ಮಣ್ಯ ರಾವ್ ಅವರ ಪತ್ನಿ ಕಮಲಾಕ್ಷಿ ನಿಧನ

0

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದ ದಿ|ಸುಬ್ರಹ್ಮಣ್ಯ ರಾವ್ ರವರ ಪತ್ನಿ ಕಮಲಾಕ್ಷಿ (85ವ) ರವರು ವಯೋಸಹಜ ಅಸೌಖ್ಯದಿಂದ ಜೂ.25 ರಂದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಮೃತರು ಮಕ್ಕಳಾದ ಎಂ.ಎಸ್ ಕೃಷ್ಣ ಕುಮಾರ್, ಎಂ.ಎಸ್.ಗಂಗಾಧರ ರಾವ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವ ಎಂ.ಎಸ್. ಗೋವಿಂದ ರಾವ್, ಮಗಳು ಜಯಲಕ್ಷ್ಮಿ, ಅಳಿಯ ಸುರೇಶ್ ನಾರಾವಿ, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.

ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಆಸ್ಪತ್ರೆಗೆ ತೆರಳಿ ಅಂತಿಮ ದರ್ಶನ ಪಡೆದರು. ಮೃತರ ಅಂತ್ಯ ಕ್ರಿಯೆಯು ಚಿಕ್ಕ ಪುತ್ತೂರು ಹಿಂದೂ ರುದ್ರಭೂಮಿಯಲ್ಲಿ ನಡೆಯಿತು. ಪಿ.ಜಿ.ಚಂದ್ರಶೇಖರ ರಾವ್, ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸರಾವ್, ರಾಮಕೃಷ್ಣ ರಾವ್, ಪಿ.ಎಲ್.ನಾಗೇಶ್ ರಾವ್, ಯಶ್ವಿತ್, ಸುಪ್ರೀತ್, ದಾಮೋದರ್, ಲಕ್ಷ್ಮಣ್ ಮೊದಲಾದವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here