ನಗರಸಭೆಯಲ್ಲಿ ಕಲ್ಯಾಣ ಯೋಜನೆ ಕಾರ್ಯದೇಶ, ಸಹಾಯಧನ ವಿತರಣಾ ಕಾರ್ಯಕ್ರಮ

0

ಮಲ್ಟಿ ಸ್ಟೋರೆಜ್ ಬಿಲ್ಡಿಂಗ್ ಗೆ ಹೋದರೆ ಮಾತ್ರ ಮನೆ ನಿವೇಶನಕ್ಕೆ ಪರಿಹಾರ ಕೊಡಲು ಸಾಧ್ಯ – ಅಶೋಕ್ ಕುಮಾರ್ ರೈ

ಪುತ್ತೂರು: ನಗರಸಭೆಯಲ್ಲಿ 8 ಸಾವಿರಕ್ಕೂ‌ ಮಿಕ್ಕಿ ಮನೆ ನಿವೇಶನಕ್ಕೆ ಅರ್ಜಿ‌ಕೊಟ್ಟಿದ್ದಾರೆ. ಜಾಗ ಹುಡುಕುತ್ತಿದ್ದೇವೆ. ಮಲ್ಟಿ ಸ್ಟೋರೆಜ್ ಬಿಲ್ಡಿಂಗ್ ಗೆ ಹೋದರೆ ಪರಿಹಾರ ಕೊಡಲು ಸಾಧ್ಯ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ನಗರಸಭೆ ಸಭಾಂಗಣದಲ್ಲಿ ಜೂ.25 ರಂದು ನಡೆದ ನಗರಸಭೆಯ ಕಲ್ಯಾಣ ಯೋಜನೆ ವಸತಿ ಯೋಜನೆಗಳ ಕಾರ್ಯದೇಶ ಮತ್ತು ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಅವರು ಫಲಾನುಭವಿಗಳಿಗೆ ಸೌಲಭ್ಯ ಮತ್ತು ಕಾರ್ಯಾದೇಶ ಪತ್ರವನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿದರು. ಅನೇಕ ಮಂದಿಗೆ ನಿವೇಶನ ಬೇಕಾಗಿದೆ. ನಗರಸಭೆಯಲ್ಲಿ ಅಷ್ಟೊಂದು ದೊಡ್ಡ ಜಾಗ ಸಿಗುವುದು ಕಷ್ಟ. ಜಾಗಕ್ಕಾಗಿ ಹುಡುಕಾಡುತ್ತಿದ್ದೇವೆ. ಆದರೂ ಮುಂದಿನ ದಿನ ಮಲ್ಟಿ ಸ್ಟೋರೇಜ್ ಬಿಲ್ಡಿಂಗ್ ಅಗತ್ಯವಿದೆ ಎಂದರು.


ಚುನಾವಣೆ ನೀತಿ ಸಂಹಿತೆಯಿಂದಾಗಿ ಅನುದಾನ ವಿತರಣೆಯಲ್ಲಿ ತಡವಾಗಿದೆ:
ನಗರಸಭಾ ವ್ಯಾಪ್ತಿಯಿಂದ ಈ ವರ್ಷ ಅನುದಾನ ವಿತರಣೆ ಮಾಡುವಾಗ ಸ್ವಲ್ಪ ತಡವಾಗಿದೆ ಕಾರಣ ಚುನಾವಣೆ ನೀತಿ ಸಂಹಿತೆ. ಹಾಗಾಗಿ ಈಗ ಅದನ್ನು ವಿತರಣೆ ಮಾಡುತ್ತಿದ್ದೇವೆ‌.
ಹೊಸ ಮನೆ ನಿರ್ಮಾಣ ಮಾಡುವವರಿಗೆ, ಪೊಷಣಾ ವೆಚ್ಚ ಸಹಿತ ಹಲವು ವಿವಿಧ ಯೋಜನೆ ಪಡೆದುಕೊಳ್ಳಿ. ಅದರಲ್ಲೂ ಅಪೇಕ್ಷಿತರಾದವರಿಗೂ ಅರ್ಹತೆ ಇದ್ದರೂ ಅವರಿಗೆ ಸೌಲಭ್ಯ ನೀಡಲು ಅವರ ದಾಖಲೆ ಪತ್ರ ಸರಿ ಇಲ್ಲದಿರುವುದು ಸಮಸ್ಯೆಯಾಗಿದೆ. ಹಾಗಾಗಿ ಮುಂದೆ ದಾಖಲೆ ಪತ್ರ ಸರಿ ಮಾಡಿಕೊಳ್ಳುವಂತೆ ವಿನಂತಿಸಿದರು‌. ನಾನಿವತ್ತು ಅಕ್ರಮ ಸಕ್ರಮ ಸಭೆಯಿಂದಾಗಿ ಕಾರ್ಯಕ್ರಮಕ್ಕೆ ಆಗಮಿಸುವಾಗ ತಡವಾಗಿದೆ ಕ್ಷಮೆ ಇರಲಿ ಎಂದರು. ನಗರಸಭಾ ಸದಸ್ಯರಾದ ಶೈಲಾ ಪೈ, ಮಹಮ್ಮದ್ ರಿಯಾಜ್, ಯುಸೂಪ್ ಡ್ರೀಮ್, ರಾಬಿನ್ ತಾವ್ರೊ, ದಿನೇಶ್ ಶೇವಿರೆ, ಪೌರಾಯುಕ್ತ ಮಧು ಎಸ್ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕರುಣಾಕರ್ ವಿ ಅವರು ಮಾತನಾಡಿ ವಿವಿಧ ಸವಲತ್ತುಗಳ ಮಾಹಿತಿ ಮತ್ತು ಅದರಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಮನೆ ದುರಸ್ಥಿ, ಹೊಸಮನೆ, ವಿದ್ಯುತ್ ಸಂಪರ್ಕ, ಶೌಚಾಲಯ, ನಳ್ಳಿ ನೀರಿನ ಸಂಪರ್ಕಕ್ಕೆ ಅಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ತಿಳಿಸಿದರು.

139 ಮಂದಿ ಫಲಾನುಭವಿಗಳು
ಸರಕಾರದ ವಿವಿಧ ಯೋಜನೆಗಳಾದ ಶೇ.24.10 ಪ. ಜಾ / ಪ. ಪಂ ಶೇ 7.25, ಇತರ ಜಾತಿ/ ಶೇ 5 ವಿಕಲಚೇತನರಿಗಾಗಿ) ಸಹಾಯಧನ ಮತ್ತು ಸವಲತ್ತುಗಳಾದ ಹೊಸ ಮನೆ, ಮನೆ ದುರಸ್ಥಿ, ಶೌಚಾಲಯ ರಚನೆ, ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ, ವೈದ್ಯಕೀಯ ಸಹಾಯಧನ ಆದೇಶ ವಿತರಣೆಯಲ್ಲಿ ಒಟ್ಟು 139 ಫಲಾನುಭವಿಗಳ ಪೈಕಿ 49 ಮಂದಿಗೆ ವಿವಿಧ ಸವಲತ್ತುಗಳ ಸಹಾಯಧನ ಚೆಕ್ ಮತ್ತು 90 ಮಂದಿಗೆ ವಿವಿಧ ಕಾಮಗಾರಿಗಳ ಕಾರ್ಯಾದೇಶ ಪತ್ರ ವಿತರಣೆ ಮಾಡಲಾಯಿತು. ನಗರಸಭೆ ಸಮುದಾಯ ಸಂಘಟನಾಧಿಕಾರಿ ಜಯಲಕ್ಷ್ಮೀ ಆದೇಶಪತ್ರ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here