ಸುಬ್ರಹ್ಮಣ್ಯ: ಯುವಕನನ್ನು ಎಳೆದು ಹಾಕಿದ ಆನೆ

0

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆನೆ ಯುವಕನೊಬ್ಬನನ್ನು ಎಳೆದು ಹಾಕಿದ ಘಟನೆ ನಡೆದಿದೆ.

ಸುಬ್ರಹ್ಮಣ್ಯದ ಸವಾರಿ ಮಂಟಪದ ಹತ್ತಿರದ ಬಳಿ ದೇವಸ್ಥಾನದ ಆನೆ ಡಿ.ಕೆ.ಶಿ ಯವರನ್ನು ಸ್ವಾಗತಿಸಲು ಹೋಗುವ ಸಲುವಾಗಿ ನಿಂತಿತ್ತು. ಈ ವೇಳೆ ಒಂದಿಬ್ಬರು ಪೊಲೀಸರು ಕೂಡ ಆನೆಯ ಬಳಿಯಲ್ಲಿ ನಿಂತು ಪೋಟೋ ತೆಗೆಯಲು ಬಂದಿದ್ದರು. ಇದೇ ವೇಳೆಗೆ ಸುಬ್ರಹ್ಮಣ್ಯದ ಲಾಡ್ಜ್ ಒಂದರ ರೂಂ ಬಾಯ್ ಆನೆಯ ಹತ್ತಿರ ಬಂದಿದ್ದು ತಕ್ಷಣ ಆನೆ ತನ್ನ ಸೊಂಡಿಲಿನಿಂದ ಎಳೆದು ಹಾಕಿರುವುದಾಗಿ ತಿಳಿದು ಬಂದಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿಗೆ ಕೆಲವೇ ಸಮಯದ ಮೊದಲು ಈ ಘಟನೆ ನಡೆದಿದೆ.

LEAVE A REPLY

Please enter your comment!
Please enter your name here