ಪುತ್ತೂರು: ವಿಟ್ಲದಲ್ಲಿರುವ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಜೂ.25ರಂದು ವಿದ್ಯಾರ್ಥಿಗಳಿಗೆ ಸ್ಟೌವ್ ಕ್ರಾಫ್ಟ್ ಲಿಮಿಟೆಡ್ ಬೆಂಗಳೂರು ಮತ್ತು ಆಟೋಮೋಟಿವ್ ಆಕ್ಸೆಲ್ಸ್ ಲಿಮಿಟೆಡ್ ಮೈಸೂರು ಇವರಿಂದ ಕ್ಯಾಂಪಸ್ ಸಂದರ್ಶನ ಮತ್ತು ಅಪ್ರೆಂಟಿಸಿಪ್ ಟ್ರೈನಿಂಗ್ ಕುರಿತು ಮಾಹಿತಿ ಕಾರ್ಯಗಾರ ನಡೆಯಿತು.
ವಿವಿಧ ವೃತ್ತಿಗಳಾದ ಫಿಟ್ಟರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ರೆಫ್ರಿಜರೇಷನ್ ಆಂಡ್ ಏರ್ ಕಂಡೀಷನಿಂಗ್ ಟೆಕ್ನಿಷಿಯನ್, ಕಂಪ್ಯೂಟರ್ ಆಪರೇಟರ್ ಆಂಡ್ ಪ್ರೋಗ್ರಾಮಿಂಗ್ ಅಸಿಸ್ಟಂಟ್, ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್ ಮತ್ತು ಇಂಡಸ್ಟ್ರಿಯಲ್ ರೊಬೋಟಿಕ್ಸ್ ಆಂಡ್ ಡಿಜಿಟಲ್ ಮ್ಯಾನ್ಯೂಫ್ಯಾಕ್ಚರಿಂಗ್ ತಂತ್ರಜ್ಞಾನದಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಹಾಂತಯ್ಯ ಎರಡು ಕಂಪನಿಗಳಲ್ಲಿ ಲಭ್ಯವಿರುವ ಉದ್ಯೋಗಾವಕಾಶ, ಸೌಲಭ್ಯ ಮತ್ತು ಅಪ್ರೆಂಟೈಸ್ ಟ್ರೈನಿಂಗ್ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಸಿಗುವ ಪ್ರಯೋಜನಗಳ ಕುರಿತು ವಿಸ್ತ್ರತ ಮಾಹಿತಿಯನ್ನು ನೀಡಿದರು.
ಸಂಸ್ಥೆಯ ಪ್ರಾಚಾರ್ಯ ಹರೀಶ್‌ರವರ ಮಾರ್ಗದರ್ಶನ ಮತ್ತು ಉದ್ಯೋಗಕೋಶ ಅಧಿಕಾರಿ ಸುಕನ್ಯಾ ರಾವ್ ಇವರ ಸಂಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಟ್ಲ ಸರಕಾರಿ ಐಟಿಐ, ನರಿಮೊಗರು ಸರಕಾರಿ ಐಟಿಐ, ಒಡಿಯೂರು ಶ್ರೀ ಗುರುದೇವ ಐಟಿಐ ಮತ್ತು ಸುಪ್ರಜಿತ್ ಐಟಿಐ ವಿಟ್ಲ ಇದರ ಒಟ್ಟು ೨೦೪ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಿರಿಯ ತರಬೇತಿ ಅಧಿಕಾರಿ ಜೋಯ್ಲಿನ್ ಕ್ರಾಸ್ತಾ ಸ್ವಾಗತಿಸಿ, ವಂದಿಸಿದರು.