
ಬೆಟ್ಟಂಪಾಡಿ: ಇರ್ದೆ ಗ್ರಾಮದ ಕೋನಡ್ಕ ಜನತಾ ಕಾಲೋನಿ ಬಳಿ ಕಾಂಕ್ರಿಟ್ ರಸ್ತೆ ಬದಿ ಬರೆ ಕುಸಿತಗೊಂಡಿರುವ ಘಟನೆ ಜೂ.26ರಂದು ರಾತ್ರಿ ನಡೆದಿದೆ. ಕೋನಡ್ಕ ಸಮೀರ್ ಎಂಬವರ ಮನೆ ಹಿಂಬದಿ ಭಾಗದಲ್ಲಿ ಬರೆ ಕುಸಿದಿರುವುದರಿಂದ ಇನ್ನಷ್ಟು ಕುಸಿತವಾದಲ್ಲಿ ಅವರ ಮನೆಗೆ ಹಾನಿಯಾಗುವ ಸಾಧ್ಯತೆ ಇದೆ.

ಸ್ಥಳಕ್ಕೆ ಬೆಟ್ಟಂಪಾಡಿ ಗ್ರಾ.ಪಂ. ಅಧ್ಯಕ್ಷೆ ವಿದ್ಯಾಶ್ರೀ, ಸದಸ್ಯರಾದ ಮೊಯಿದುಕುಂಞಿ ಕೋನಡ್ಕ, ಮಹಾಲಿಂಗ ನಾಯ್ಕ್, ಅಧಿಕಾರಿಗಳು, ಸಿಬ್ಬಂದಿ ಸಂದೀಪ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು. ತಕ್ಷಣಕ್ಕೆ ತಡೆಗೋಡೆ ರಚಿಸಿ ಮತ್ತಷ್ಟು ಕುಸಿತಗೊಂಡು ಹಾನಿ ಆಗುವ ಮೊದಲು ಸಂಬಂಧಪಟ್ಟವರು ಗಮನಹರಿಸಬೇಕಿದೆ.