ಬನ್ನೂರು ತಡೆಗೋಡೆ ಜರಿದು ಹಾನಿ -ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಭೇಟಿ – ಶಾಸಕರಿಂದ ಪರಿಹಾರದ ಭರವಸೆ

0

ಪುತ್ತೂರು: ನಗರ ಸಭಾ ವ್ಯಾಪ್ತಿಯ ಬನ್ನೂರು ಜೈನರಗುರಿ ಎಂಬಲ್ಲಿ ಕಳೆದ ರಾತ್ರಿ ಧಾರಾಕಾರವಾಗಿ ಸುರಿದ ಮಳೆಗೆ ಪಕ್ಕದ ಮನೆಯವರು ಕಟ್ಟಿದ ಕಳ್ಳಿನ ತಡೆಗೋಡೆ ಮಜೀದ್ ಎಂಬವರ ಮನೆಗೆ ಜರಿದು ಬಿದ್ದಿದ್ದು ಸಣ್ಣ ಮಗುವಿಗೆ ಗಾಯವಾಗಿದ್ದು ಉಳಿದವರು ಅದೃಷ್ಟವಷಾತ್ ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ.

ಇಲ್ಲಿಗೆ ಭೇಟಿ ನೀಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಸ್ಥಳದಿಂದಲೇ ಬೆಂಗಳೂರುನಲ್ಲಿರುವ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ವಿಷಯವನ್ನು ತಿಳಿಸಿದ್ದಾರೆ. ಶಾಸಕ ಸೂಚನೆಯಂತೆ ಹಾನಿಗೀಡಾದ ಮನೆಗೆ ಸರಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದೆಂದು ಮಜೀದ್ ಅವರಿಗೆ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಹಮ್ಮದ್ ಆಲಿಯವರು ತಹಸೀಲ್ದಾರ್ ರನ್ನು ಸಂಪರ್ಕಿಸಿ ಜರಿದ ಮಣ್ಣುಗಳನ್ನು ನಗರ ಸಭೆಯ ಜೆಸಿಬಿ ಮೂಲಕ ತೆರವು ಗೊಳಿಸುವಂತೆ ಮನವಿ ಮಾಡಿದರು.

LEAVE A REPLY

Please enter your comment!
Please enter your name here