ಸವಣೂರಿನಲ್ಲಿ ಗ್ರಾ.ಪಂ., ಸಂಜೀವಿನಿ ಒಕ್ಕೂಟ, ಸ್ತ್ರೀ ಶಕ್ತಿ ಸಂಘದ ಸಹಯೋಗದಲ್ಲಿ ಬಟ್ಟೆ ಚೀಲ ತಯಾರಿಕಾ ಘಟಕ ಉದ್ಘಾಟನೆ 

0

ಸವಣೂರು : ಸವಣೂರು ಗ್ರಾಮ ಪಂಚಾಯತ್, ಶ್ರೀ ರಾಮ ಸಂಜೀವಿನಿ ಗ್ರಾಮ‌ ಪಂಚಾಯತ್ ಮಟ್ಟದ ಒಕ್ಕೂಟ, ಸ್ತ್ರೀ ಶಕ್ತಿ ಸಂಘ ಸವಣೂರು ಇದರ ಸಹಯೋಗದಲ್ಲಿ ಬಟ್ಟೆ ಚೀಲ ತಯಾರಿಕಾ ಘಟಕದ ಉದ್ಘಾಟನಾ ಕಾರ್ಯಕ್ರಮ ಜೂ.27ರಂದು ಗ್ರಾಮ ಪಂಚಾಯತ್‌ನ ಕುಮಾರಧಾರ ಸಭಾಂಗಣದಲ್ಲಿ ನಡೆಯಿತು.

ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್ ಅವರು ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿ ,ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕು. ಸವಣೂರು ಗ್ರಾ.ಪಂ.ನ್ನು ಪ್ಲಾಸ್ಟಿಕ್ ಮುಕ್ತ ಗ್ರಾ.ಪಂ.ಆಗಿ ಮಾಡುವಲ್ಲಿ ಈ ಘಟಕ ಮಾದರಿಯಾಗಬೇಕು. ಗ್ರಾ.ಪಂ.ಹಾಗೂ ಜನತೆಯ ಸಹಕಾರ ಈ ಘಟಕಕ್ಕೆ ಸಿಗಲಿದೆ ಎಂದರು. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಸಂದೇಶ್ ಕೆ.ಎನ್ ಅವರು ಬಟ್ಟೆ ಚೀಲ ಅನಾವರಣಗೊಳಿಸಿ ಘಟಕದ ಯಶಸ್ಸಿಗೆ ಶುಭಹಾರೈಸಿದರು. ವೇದಿಕೆಯಲ್ಲಿ ಸವಣೂರು ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಲಯ ಮೇಲ್ವಿಚಾರಕಿ ಭವಾನಿ, ಶ್ರೀ ರಾಮ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿಜಯ ಈಶ್ವರ ಗೌಡ, ನಿಕಟ ಪೂರ್ವ ಅಧ್ಯಕ್ಷೆ ರೇವತಿ, ಗ್ರಾ.ಪಂ.ಲೆಕ್ಕಸಹಾಯಕರಾದ ಎ.ಮನ್ಮಥ ಅವರು ಉಪಸ್ಥಿತರಿದ್ದರು. ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾದ ಗೀತಾ ಜಿ.ಎಸ್. ಪ್ರಸ್ತಾವನೆಗೈದರು. ಕೃಷಿ ಸಖಿ ಜಯಂತಿ ಸ್ವಾಗತಿಸಿ, ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಪೂರ್ಣಿಮಾ ಮಹೇಶ್ ವಂದಿಸಿದರು. ಪಶು ಸಖಿ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು ಒಕ್ಕೂಟದ  ಸಿಬ್ಬಂದಿಗಳು ,ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಪ್ಲಾಸ್ಟಿಕ್ ಚೀಲ ಬಿಡಿ ಬಟ್ಟೆ ಚೀಲ ಹಿಡಿ: ಪ್ಲಾಸ್ಟಿಕ್ ಚೀಲ ಬಿಡಿ ಬಟ್ಟೆ ಚೀಲ ಹಿಡಿ ಅಭಿಯಾನದ ಅಂಗವಾಗಿ ಸಾರ್ವಜನಿಕರು ಬಟ್ಟೆ ಚೀಲ ಪಡೆದುಕೊಂಡು ,ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕೆಂದು ಗ್ರಾ.ಪಂ.ಸಾರ್ವಜನಿಕರಲ್ಲಿ ವಿನಂತಿಸಿದೆ.

LEAVE A REPLY

Please enter your comment!
Please enter your name here