ಪುತ್ತೂರು: ರಸ್ತೆ ನಿರ್ಮಾಣದ ವೇಳೆ ಜಿ.ಪಂ ನಿರ್ಮಾಣ ಮಾಡಿದ ತಡೆಗೋಡೆ ಬಿರುಕು ಬಿಟ್ಟಿದ್ದು ಬೀಳುವ ಹಂತದಲ್ಲಿದೆ. ಶಾಲಾ ಮಕ್ಕಳು ನಡೆದಾಡುವ ದಾರಿಯಲ್ಲೇ ಈ ತಡೆಗೋಡೆ ಇದ್ದು ಪಕ್ಕದಲ್ಲೇ ಮನೆಯಿದ್ದು ಅಪಾಯದ ಸ್ಥಿತಿ ಇದೆ.
ಮಾಣಿ- ಸಂಪಾಜೆ ರಾ. ಹೆದ್ದಾರಿ 275 ರ ಶೇಕಮಲೆಯಿಂದ ಉಪ್ಪಳಿಗೆಗೆ ತೆರಳುವ ರಸ್ತೆಗೆ ಜಿಪಂ ವತಿಯಿಂದ ಅಪಾಯವನ್ನು ತಪ್ಪಿಸುವ ಉದ್ದೇಶದಿಂದ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಈ ತಡೆ ಗೋಡೆಯ ಅಡಿಭಾಗದಲ್ಲಿ ಮಣ್ಣು ಕುಸಿತಕ್ಕೊಳಗಾಗಿದೆ. ತಡೆಗೋಡೆಯೂ ಬಿರುಕುಬಿಟ್ಟಿದ್ದರಿಂದ ಅಪಾಯ ಸೃಷ್ಟಿಯಾಗಿದೆ.
ಕಳಪೆ ಕಾಮಗಾರಿಯಿಂದಾಗಿ ಕಾಂಕ್ರೀಟ್ ತಡೆಗೋಡೆ ಕುಸಿದು ಬೀಳುವ ಹಂತದಲ್ಲಿದೆ. ಶಾಲಾ ಮಕ್ಕಳು ನಡೆದುಕೊಂಡು ಇದೇ ದಾರಿಯಾಗಿ ಹೋಗುತ್ತಿದ್ದು ವಾಹನಗಳು ಸಂಚರಿಸುವ ವೇಳೆ ತಡೆಗೋಡೆ ಅಲುಗಾಡುತ್ತಿದೆ. ಇದು ಬಿರುಕುಬಿಟ್ಟಿರುವ ಬಗ್ಗೆ ಕಳೆದ ಮಳೆಗಾಲದಲ್ಲೇ ನಾನು ಇಲಾಖೆಗೆ ಮಾಹಿತಿ ನೀಡಿದ್ದೆ ಆದರೆ ಯಾವುದೇ ಕ್ರಮಕೈಗೊಂಡಿಲ್ಲ.
ಎಸ್ ಪಿ ಬಶೀರ್ ಶೇಕಮಲೆ