ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆಯಡಿಯಲ್ಲಿ ತರಬೇತಿ ಕಾರ್ಯಗಾರ

0

ಪುತ್ತೂರು:ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ದ.ಕ ಜಿಲ್ಲಾ ಪಂಚಾಯತ್, ಡೇ-ಎನ್‌ಆರ್‌ಎಲ್‌ಎಂ ಯೋಜನೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಪ್ರಧಾನ ಮಂತ್ರಿಯವರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ದಗೊಳಿಸುವಿಕೆ ಯೋಜನೆಯಡಿ ಫಲಾನುಭವಿಗಳಿಗೆ`ಆಹಾರ ಸಂಸ್ಕರಣಾ ದೃಷ್ಠಿಕೋನ’ ಒಂದು ದಿನದ ತರಬೇತಿ ಕಾರ್ಯಗಾರವು ಜೂ.27ರಂದು ತಾ.ಪಂ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ತಾ.ಪಂ ಯೋಜನಾಧಿಕಾರಿ ಸುಕನ್ಯಾ ಮಾತನಾಡಿ, ಮಹಿಳೆಯರನ್ನು ಸಬಲೆಯರನ್ನಾಗಿಸುವ ಯೋಜನೆಯಾಗಿದೆ. ಕೇಂದ್ರ ಸರಕಾರದ ಆತ್ಮನಿರ್ಬರ ಭಾರತ ಯೋಜನೆಯಲ್ಲಿ ರಾಜ್ಯ ಸರಕಾರದ ಮೂಲಕ ಅನುಷ್ಠಾನವಾಗುತ್ತಿದೆ. ಈ ಯೋಜನೆಯ ಸೌಲಭ್ಯ ಪಡೆಯಲು ಒಕ್ಕೂಟದ ಸದಸ್ಯರಾಗಿ ಸೇರ್ಪಡೆಯಾಗಬೇಕು. ಇದು ಉತ್ತಮ ಯೋಜನೆಯಾಗಿದ್ದು ಈ ಯೋಜನೆಯಲ್ಲಿ ಮಹಿಳಾ ಫಲಾನುಭವಿಗಳು ಶೇ.10 ಬಂಡವಾಳವಿದ್ದರೆ ಸಾಕು. ಕನಿಷ್ಠ ಬಡ್ಡಿಯಲ್ಲಿ ಸರಕಾರದಿಂದ ಹಣಕಾಸು ನೆರವು ನೀಡಲಾಗುತ್ತಿದೆ. ಸಂದಾಯವಾಗುವ ಬಡ್ಡಿಯ ಮೊತ್ತವು ಮತ್ತೆ ಮಹಿಳಾ ಸ್ವ ಸಹಾಯ ಸಂಘಗಳ ಮೂಲಕ ಸಮಾಜದಲ್ಲಿ ಅಭಿವೃದ್ಧಿ ಪತದಲ್ಲಿ ಮುನ್ನಡೆಯಲು ಸಹಕಾರಿಯಗುತ್ತಿದೆ ಎಂದರು. ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕಿ ಶೈಲಜಾ ಭಟ್ ಮಾತನಾಡಿ, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಕೇಂದ್ರ ಸರಕಾರ ಹಲವಾರು ಯೋಜನೆಗಳಿವೆ. ಸಂಜೀವಿನಿ ಯೋಜನೆಯಲ್ಲಿ ಸರಕಾರದಿಂದ ಸಹಾಯಧನ ಸಹಕಾರ ನೀಡುತ್ತಿದೆ. ನೀವು ಸದುಯೋಗಪಡಿಸಿಕೊಂಡು ಇತರರಿಗೂ ಪ್ರೇರಣೆ ನೀಡಬೇಕು ಎಂದರು. ದ.ಕ ಜಿಲ್ಲಾ ಪಂಚಾಯತ್‌ನ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್, ಈಶ ಸಂಜೀವಿನ ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಮೀನಾಕ್ಷಿ, ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಡಾ.ಎ.ಎ ಫಝಲ್, ಸತೀಶ್ ಮಾಬೆನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಾರತಿ ದೇವಚಲ್ಲ ಪ್ರಾರ್ಥಿಸಿದರು. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಸ್ವಾಗತಿಸಿದರು. ಯುವ ವೃತ್ತಿಪರ ವಿನೀತ್ ವಿಶು ಮೋನೀಶ್ ಪ್ರಸ್ತಾವಣೆಗೈದರು. ಮೇಲ್ವಿಚಾರಕಿ ನಮಿತ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ವ್ಯವಸ್ಥಾಪಕಿ ನಳಿನಾಕ್ಷಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಡಾ.ಎ.ಎ ಫಝಲ್, ಸತೀಶ್ ಮಾಬೆನ್ ತರಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಪುತ್ತೂರು, ಕಡಬ, ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕಿನ ಸಂಜೀವಿನಿ ಒಕ್ಕೂಟದ ಫಲಾನುಭವಿ ಸದಸ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here