ಉಪ್ಪಿನಂಗಡಿ: ತನ್ವೀರುಲ್ ಇಸ್ಲಾಂ ಮದ್ರಸದಲ್ಲಿ ಸಮಸ್ತ ಸ್ಥಾಪಕ ದಿನಾಚರಣೆ

0

ಉಪ್ಪಿನಂಗಡಿ: ಉಪ್ಪಿನಂಗಡಿ ಮಲಿಕ್ ದೀನಾರ್ ಆಡಳಿತ ಸಮಿತಿ, ಎಸ್‌ಕೆಎಸ್‌ಎಸ್‌ಎಫ್ ಉಪ್ಪಿನಂಗಡಿ ಶಾಖೆ ಹಾಗೂ ಎಸ್‌ಕೆಎಸ್‌ಬಿವಿ ತನ್ವೀರುಲ್ ಇಸ್ಲಾಂ ಮದ್ರಸ ಉಪ್ಪಿನಂಗಡಿ ಇದರ ವತಿಯಿಂದ ಸಮಸ್ತ ಸ್ಥಾಪಕಾ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ, ಕಬರ್ ಝಿಯಾರತ್, ಮರ್ಹೂಂ ಕೆಂಪಿ ಮುಸ್ತಫ ಹಾಜಿ ಅನುಸ್ಮರಣೆ ಕಾರ್ಯಕ್ರಮ ಉಪ್ಪಿನಂಗಡಿ ತನ್ವೀರುಲ್ ಇಸ್ಲಾಂ ಮದ್ರಸ ವಠಾರದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಲಿಕ್ ದೀನಾರ್ ಜುಮಾ ಮಸೀದಿಯ ಅಧ್ಯಕ್ಷರಾದ ಎಚ್. ಯೂಸುಫ್ ಹಾಜಿ ವಹಿಸಿದರು. ಮಾಲಿಕ್ ದೀನಾರ್ ಮಸೀದಿಯ ಮುದರ್ರಿಸರಾದ ಅಬ್ಬುಸ್ಸಲಾಂ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾಲಿಕ್ ದೀನಾರ್ ಆಡಳಿತ ಸಮಿತಿಯ ಕಾರ್ಯದರ್ಶಿ ಶುಕೂರ್ ಹಾಜಿ, ವಿಖಾಯ ನೇತಾರ ಇಸ್ಮಾಯಿಲ್ ತಂಙಳ್, ಸಿದ್ದೀಕ್ ಕೆಂಪಿ, ಅಶ್ರಫ್ ಹಾಜಿ ಸಿಟಿ, ಮುಹಮ್ಮದ್ ಕೂಟೇಲ್, ಫಯಾಝ್ ಯು.ಟಿ, ಇಬ್ರಾಹಿಂ ಬಾತಿಷ ಅಝ್ಹರಿ, ಮನ್ಸೂರ್ ಯಮಾನಿ, ಹಂಝ ಮುಸ್ಲಿಯಾರ್, ಹೈದರ್ ಸಅದಿ, ಮುಯೀನುದ್ದೀನ್ ನಟ್ಟಿಬೈಲು, ಇಸ್ಹಾಕ್ ಪೆದಮಾಲೆ, ಅಕ್ಬರ್ ಮುನ್ನಿ, ಸಮದ್ ಹಾಜಿ, ನಾಸಿರ್ ಗಾಂಧಿಪಾರ್ಕ್, ಅಶ್ರಫ್ ಬಿ.ಕೆ, ಅಬ್ದುರಹ್ಮಾನ್ ಹಾಗೂ ಮದ್ರಸ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಮದ್ರಸ ಮುಖ್ಯ ಅಧ್ಯಾಪಕರಾದ ಕೆ.ಎಚ್.ಅಶ್ರಫ್ ಹನೀಫಿ ಸ್ವಾಗತಿಸಿದರು. ಯೂಸುಫ್ ಹಾಜಿ ಪೆದಮಲೆ ವಂದಿಸಿದರು.

LEAVE A REPLY

Please enter your comment!
Please enter your name here