ಮಳೆ ಆವಾಂತರ:ಸಾರ್ವಜನಿಕರು ಎಚ್ಚರಿಕೆಯಿಂದಿರಿ ಸಮಸ್ಯೆಯಾದರೆ ನನಗೆ/ಕಚೇರಿಗೆ ಮಾಹಿತಿ ಕೊಡಿ-ಶಾಸಕ ಅಶೋಕ್ ಕುಮಾರ್ ರೈ ಮನವಿ

0

ಪುತ್ತೂರು:ಮಳೆ ಧಾರಾಕಾರವಾಗಿ ಸುರಿಯುತ್ತಿದೆ.ಅಲ್ಲಲ್ಲಿ ಮಳೆಯ ಕಾರಣಕ್ಕೆ ಅವಘಡಗಳು ಸಂಭವಿಸುತ್ತಲೇ ಇದೆ.ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕಾಗಿದ್ದು ಯಾವುದೇ ಸಮಸ್ಯೆಯಾದರೂ ನನಗೆ ಇಲ್ಲವೇ ನನ್ನ ಕಚೇರಿಗೆ ಮಾಹಿತಿ ಕೊಡಿ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಮನವಿ ಮಾಡಿದ್ದಾರೆ.


ಮಳೆಯ ಸಂದರ್ಭ ಸಾರ್ವಜನಿಕರು ಬಹಳ ಎಚ್ಚರದಿಂದ ಇರಬೇಕು.ಮಕ್ಕಳನ್ನು ಮನೆಯಿಂದ ಹೊರಗಡೆ ಕಳುಹಿಸಬೇಡಿ.ಹೊಳೆ,ಕೆರೆ,ಬಾವಿಯ ಕಡೆ ಮಕ್ಕಳು ತೆರಳದಂತೆ ಎಚ್ಚರವಹಿಸಿ.ವಿದ್ಯುತ್ ಕಂಬ, ಮನೆಯ ವಿದ್ಯುತ್ ಮೀಟರ್, ಟ್ರಾನ್ಸ್-ರ್ಮರ್, ವಿದ್ಯುತ್ ಕಂಬ ಮುಟ್ಟಲು ಹೋಗಬೇಡಿ ಎಂದು ಶಾಸಕರು ಮನವಿ ಮಾಡಿದ್ದಾರೆ.
ಬಾವಿ ಕುಸಿಯುತ್ತಿರುವ ಘಟನೆಗಳೂ ನಡೆದಿದ್ದು ಬಾವಿಯಿಂದ ದೂರ ಇರಿ.ಮನೆಯ ಬಳಿ ಧರೆ ಇದ್ದರೆ ಅದಕ್ಕೆ ಪ್ಲಾಸ್ಟಿಕ್ ಹೊದಿಕೆ ಹಾಕಿ ನೀರು ಇಂಗದಂತೆ ನೋಡಿಕೊಳ್ಳಿ.ಧರೆ ಕುಸಿಯುವ ಭೀತಿಯಲ್ಲಿದ್ದರೆ ತಕ್ಷಣ ನನಗೆ ಅಥವಾ ನನ್ನ ಕಚೇರಿಗೆ ಕರೆ ಮಾಡಿ ತಿಳಿಸಿ.ಮನೆಯ ಪಕ್ಕ ಮರ ಇದ್ದರೆ ಜಾಗ್ರತೆ ವಹಿಸಿ.ಮನೆ ಅಪಾಯಕಾರಿಯಾಗಿದ್ದಲ್ಲಿ ತಿಳಿಸಿದರೆ ಬದಲಿ ವ್ಯವಸ್ಥೆ ಮಾಡುತ್ತೇವೆ.ಏನೇ ಘಟನೆ ನಡೆದರೂ, ಅವಘಡದ ಮುನ್ಸೂಚನೆ ಇದ್ದಲ್ಲಿ ಸಾರ್ವಜನಿಕರು ನನ್ನ ಕಚೇರಿಗೆ ತಿಳಿಸಿ ನೆರವು ಪಡೆದುಕೊಳ್ಳಬಹುದು.ಯಾರೂ ಆತಂಕ ಪಡಬೇಕಾಗಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಈ ನಂಬರ್‌ಗೆ ಕರೆ ಮಾಡಿ
ಸಾರ್ವಜನಿಕರು ಶಾಸಕರ ಕಚೇರಿ ಮೊಬೈಲ್ ಸಂಖ್ಯೆ:+91890470796ಅಥವಾ ಶಾಸಕ ಅಶೋಕ್ ಕುಮಾರ್ ರೈ ಅವರಿಗೇ(ಮೊ:9448380969)ಕರೆ ಮಾಡಿ ಮಾಹಿತಿ ನೀಡಬಹುದು.

LEAVE A REPLY

Please enter your comment!
Please enter your name here