ಪುತ್ತೂರು: ಪುತ್ತೂರು ಆದಾಯ ತೆರಿಗೆ ಇಲಾಖೆಯ ಅಧಿಕಾರಿಯಾಗಿ ಸುದರ್ಶನ್ ರಾವ್ ಕೆ.ರವರು ಪದೋನ್ನತಿಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ವಾರ್ಡ್ 1, ಪುತ್ತೂರು ಆದಾಯ ತೆರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಾಂತಲಾರವರು ಸ್ವಯಂ ನಿವೃತ್ತಿ ಪಡೆದ ನಂತರ ತೆರವಾದ ಸ್ಥಾನಕ್ಕೆ ಇವರು ಪದೋನ್ನತಿಗೊಂಡಿದ್ದಾರೆ.
ಪುತ್ತೂರಿನ ಬನ್ನೂರು ನಿವಾಸಿಯಾದ ಸುದರ್ಶನ್ ರಾವ್ ಕೆ. ರವರು 2013 ರಲ್ಲಿ ಆದಾಯ ತೆರಿಗೆ ನಿರೀಕ್ಷಕರಾಗಿ ಪದೋನ್ನತಿಗೊಂಡು ಮಂಗಳೂರಿಗೆ ವರ್ಗಾವಣೆಗೊಂಡು 7 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. 2020ರ ಅಕ್ಟೋಬರ್ನಲ್ಲಿ ಪುತ್ತೂರಿಗೆ ವರ್ಗಾವಣೆಗೊಂಡ ಇವರು 3 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ಆದಾಯ ತೆರಿಗೆ ಅಽಕಾರಿಯಾಗಿ ಪದೋನ್ನತಿಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.