ಪುತ್ತೂರು: ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಕಾರ್ಯಕ್ಷೇತ್ರದ ಕೈಕಾರ ಸೌಭಾಗ್ಯ ಸ್ವಸಹಾಯ ಸಂಘದ ಪ್ರಥಮ ವಾರ್ಷಿಕೋತ್ಸವವನ್ನು ಜೂ.27 ರಂದು ಆಚರಿಸಲಾಯಿತು. ಬೆಟ್ಟಂಪಾಡಿ ವಲಯ ಮೇಲ್ಚಿಚಾರಕರಾದ ಸೋಹಾನ್ ಗೌಡರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಘಕ್ಕೆ ಯೋಜನೆಯ ಮೂಲಕ ಸಿಗುವ ಸೌಲಭ್ಯಗಳೊಂದಿಗೆ ಆರ್ಥಿಕ ಚಟುವಟಿಕೆ ನಡೆಸಿ ಉತ್ತಮ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗುವಂತೆ ಕರೆ ನೀಡಿ ಶುಭ ಹಾರೈಸಿದರು.
ಸಂಘದ ಕೋಶಾಧಿಕಾರಿ ಭಾಗೀರಥಿ ಭಟ್ ಸಭಾಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಗ್ರಾಪಂ ಸದಸ್ಯೆ ರೇಖಾ ಯತೀಶ್ ಬಿಜತ್ರೆಯವರು ಮಾತನಾಡಿ, ಹತ್ತು ಮನೆಯ ಹತ್ತು ಸದಸ್ಯರು ಒಂದೇ ಮನೆಯವರಂತೆ ಒಂದಾಗಿ ಸ್ವ ಉದ್ಯೋಗ ಮಾಡುವ ಮೂಲಕ ಆರ್ಥಿಕವಾಗಿಯೂ ಸಬಲೀಕರಣಗೊಳ್ಳುವಂತೆ ಹೇಳಿ ಶುಭ ಹಾರೈಸಿದರು.
ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀಯವರು ಮಾತನಾಡಿ, ಮನೆಗೆ ಬೇಕಾದ ತರಕಾರಿ, ಹಣ್ಣುಗಳನ್ನು ಮನೆಯಲ್ಲೇ ಬೆಳೆಸಿ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಮಾಹಿತಿ ನೀಡಿದರು. ಸಂಘದ ಸದಸ್ಯೆ ದೀಪಿಕಾ ಭಟ್ ಸಂಘದ ಒಂದು ವರ್ಷದ ವರದಿಯನ್ನು ಮಂಡಿಸಿದರು. ಮಲ್ಲಿಕಾ ಸ್ವಾಗತಿಸಿ, ವಂದಿಸಿದರು. ಸೇವಾ ಪ್ರತಿನಿಧಿ ತ್ರಿವೇಣಿ ಪಲ್ಲತ್ತಾರು ಕಾರ್ಯಕ್ರಮ ನಿರೂಪಿಸಿದರು.