ಪೆರ್ನೆ: ಗ್ರಾಮಾಭಿವೃದ್ದಿ ಯೋಜನೆಯ ಸಹಾಯಧನದ ಮಂಜೂರಾತಿ ಪತ್ರ ವಿತರಣೆ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ , ಪೆರ್ನೆ ವಲಯದ ಪೆರ್ನೆ-ಬಿಳಿಯೂರು ಕಾರ್ಯಕ್ಷೇತ್ರದ ನೇಂಜ ನಿವಾಸಿ ಜಯ ಆಚಾರಿಯವರು ಧ್ವನಿ ಪೆಟ್ಟಿಗೆಯ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದು , ಇವರಿಗೆ ಶ್ರೀ ಕ್ಷೇತ್ರದಿಂದ ಮಂಜೂರಾಗಿರುವ ರೂ. 25,೦೦೦/- ಮೊತ್ತದ ಕ್ರಿಟಿಕಲ್ ಇಲ್ನೆಸ್ ಫಂಡ್ ಸಹಾಯಧನದ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಗೋಪಾಲ ಸಪಲ್ಯ, ಮೇಲ್ವಿಚಾರಕರಾದ ಶಾರದಾ, ಸೇವಾಪ್ರತಿನಿಧಿ ಜಯಶ್ರೀ, ಒಕ್ಕೂಟದ ಪದಾಧಿಕಾರಿ ಸುಮಾ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಸುರೇಶ್, ರಮೇಶ್ ನಾಯ್ಕ್, ಕೇಶವ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here