ಹವಾಮಾನ ಆಧಾರಿತ ಬೆಳೆ ವಿಮಾ ಕಂತು ಪಾವತಿಗೆ ಆದೇಶ – ವಿಮಾ ಕಂತು ಪಾವತಿಗೆ ಜು.31 ಕೊನೆಯ ದಿನ

0

*ಅಡಿಕೆಗೆ ಪ್ರತೀ ಹೆಕ್ಟೇರ್‌ಗೆ ರೂ.6400
*ಕಾಳುಮೆಣಸು ಪ್ರತೀ ಹೆಕ್ಟೇರ್‌ಗೆ ರೂ.2350

ಜುಲೈ 1ರಿಂದ 31ರವರೆಗೆ ನೋಂದಣಿಗೆ ಅವಕಾಶ
ಈ ಯೋಜನೆಯಡಿ ಜುಲೈ 1ರಿಂದ ನೋಂದಣಿ ಆರಂಭಗೊಳ್ಳಲಿದ್ದು ಜುಲೈ 31 ಅಂತಿಮ ದಿನವಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದರಿ ಯೋಜನೆಯ ಅನುಷ್ಟಾನಕ್ಕೆ ಸಂಬಂಧಿಸಿದಂತೆ ವಿಮಾ ಸಂಸ್ಥೆಯಾಗಿ ಪ್ರಸಕ್ತ ಸಾಲಿಗೆ SCSC CLJ ಸಂಸ್ಥೆಯು ಆಯ್ಕೆಯಾಗಿದ್ದು, ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರತಿನಿಧಿ ಅಥವಾ ರೇಖಾ ಎ., ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಪುತ್ತೂರು ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಮಾ ಕಂತು
ಪುತ್ತೂರು: 2024-25ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳ ವಿಮಾ ಕಂತು ಪಾವತಿಗೆ ತೋಟಗಾರಿಕಾ ಇಲಾಖೆ ಸುತ್ತೋಲೆ ಹೊರಡಿಸಿದ್ದು, ವಿಮಾ ಕಂತು ಪಾವತಿಗೆ ಜು.31 ಅಂತಿಮ ದಿನವಾಗಿದೆ.
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಮಳೆ, ತಾಪಮಾನ ಹಿಮ, ಇತ್ಯಾದಿ ಹವಾಮಾನದ ಪ್ರತಿಕೂಲ ಪರಿಸ್ಥಿತಿಯಿಂದ ಉಂಟಾಗುವ ಬೆಳೆ ನಷ್ಟಕ್ಕೆ ಸರಕಾರದಿಂದ ದೊರೆಯುವ ವಿಮಾ ಪರಿಹಾರವಾಗಿದೆ. ಬೆಳೆ ವಿಮಾ ಕಂತು ಪಾವತಿ ಮಾಡುವ ಮೂಲಕ ವಿಮಾ ಮೊತ್ತವನ್ನು ಪಡೆಯಬಹುದು.

ಸಹಕಾರ ಸಂಘ, ಗ್ರಾಮ ಒನ್‌ನಲ್ಲಿ ನೋಂದಣಿ: ದಕ್ಷಿಣ ಕನ್ನಡ ಜಿಲ್ಲೆಗೆ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳನ್ನು ಅಧಿಸೂಚಿಸಲಾಗಿರುತ್ತದೆ.ಅಡಿಕೆ ಮತ್ತು ಕಾಳುಮೆಣಸು ಬೆಳೆಗೆ ಮಾತ್ರ ವಿಮಾಕಂತು ಪಾವತಿಸಲು ಇಲ್ಲಿ ಅವಕಾಶವಿರುತ್ತದೆ. ಸದರಿ ಯೋಜನೆಯಡಿ ಬೆಳೆ ಸಾಲ ಪಡೆದಿರುವ ಹಾಗೂ ಬೆಳೆ ಸಾಲ ಹೊಂದಿಲ್ಲದ ರೈತರೂ ನೋಂದಾವಣೆಗೊಳ್ಳಬಹುದಾಗಿದೆ. ರೈತರು ತಮ್ಮ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ನೋಂದಣಿ ಮಾಡಿಕೊಳ್ಳಬಹುದು.ಬೆಳೆಸಾಲ ಪಡೆದ ರೈತರು ಬೆಳೆಸಾಲ ಹೊಂದಿರುವ ಬ್ಯಾಂಕ್‌ನಲ್ಲಿ ಹಾಗೂ ಬೆಳೆಸಾಲ ಹೊಂದಿಲ್ಲದ ರೈತರು ತಮ್ಮ ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್‌ಗಳಲ್ಲಿ ಸದರಿ ಯೋಜನೆಯಡಿ ನೋಂದಾವಣೆಗೊಳ್ಳಬಹುದು.ಅಲ್ಲದೆ ಸಾಮಾನ್ಯ ಸೇವಾ ಕೇಂದ್ರ ಮತ್ತು ಗ್ರಾಮ ಒನ್‌ಗಳ ಮೂಲಕವೂ ನೋಂದಾವಣೆಗೆ ಅವಕಾಶ ಕಲ್ಪಿಸಲಾಗಿದೆ.

*ಅಡಿಕೆ ಹೆಕ್ಟೇರ್‌ಗೆ ಗರಿಷ್ಠ ರೂ.1.28 ಲಕ್ಷ
* ಕಾಳುಮೆಣಸು-ಗರಿಷ್ಠ ರೂ.46 ಸಾವಿರ

ಪಾವತಿಸಬೇಕಾದ ವಿಮಾ ಮೊತ್ತ: ಈ ಯೋಜನೆಯಡಿ ರೈತರು ಪ್ರತೀ ಹೆಕ್ಟೇರ್‌ಗೆ ಅನುಗುಣವಾಗಿ ವಿಮಾ ಕಂತು ಪಾವತಿ ಮಾಡಬೇಕಾಗಿದೆ.ಅಡಿಕೆ ಬೆಳೆಗೆ ಪ್ರತೀ ಹೆಕ್ಟೇರ್‌ಗೆ ಪ್ರೀಮಿಯಂ ಮೊತ್ತ ರೂ.6400 ಹಾಗೂ ಕಾಳುಮೆಣಸು ಬೆಳೆಗೆ ಪ್ರತೀ ಹೆಕ್ಟೇರ್‌ಗೆ ರೂ.2350 ಪ್ರೀಮಿಯಂ ಮೊತ್ತವನ್ನು ರೈತರು ಪಾವತಿ ಮಾಡಬೇಕಾಗಿರುತ್ತದೆ.ಅಡಿಕೆಗೆ ಒಂದು ಹೆಕ್ಟೇರ್‌ಗೆ ಗರಿಷ್ಟ ರೂ.1.28 ಲಕ್ಷ ಹಾಗೂ ಕಾಳುಮೆಣಸಿಗೆ ಗರಿಷ್ಟ ರೂ.46 ಸಾವಿರ ವಿಮಾ ಪರಿಹಾರವಾಗಿ ಪಡೆಯಲು ಅವಕಾಶವಿದೆ.ಇದನ್ನು ಆಧರಿಸಿ ವಿಮಾ ಕಂಪೆನಿ ಕಂತಿನ ಮೊತ್ತವನ್ನು ನಿಗದಿ ಪಡಿಸುತ್ತದೆ. ರೈತರ ಪಾಲಿನ ವಿಮಾ ಕಂತಿನ ಮೊತ್ತವು ಬೆಳೆ ವಿಮಾ ಮೊತ್ತದ ಶೇ.5ರಷ್ಟು ಆಗಿರುತ್ತದೆ.

LEAVE A REPLY

Please enter your comment!
Please enter your name here