ಪುತ್ತೂರು: ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಪ್ರತಿ ವರ್ಷ ಮಳೆಗೆ ಧರೆ ಕುಸಿಯುತ್ತಿದ್ದು ಈ ಭಾರಿ ಮತ್ತೆ ಧರೆಕುಸಿತದಿಂದಾಗಿ ಕೊಂಬೆಟ್ಟು ಸ.ಪ.ಪೂ ಕಾಲೇಜಿನ ಆವರಣಗೋಡೆಗೆ ಅಪಾಯ ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಪುರಂದರ ಹೆಗ್ಡೆ ಮತ್ತು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಹೆಚ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ ತಾತ್ಕಾಲಿಕ ಹಿನ್ನೆಲೆಯಲ್ಲಿ ತರ್ಪಾಲು ಹೊದಿಸಿ ರಕ್ಷಣೆ ನೀಡಿದ್ದಾರೆ.
ಕೊಂಬೆಟ್ಟು ತಾಲೂಕು ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿ ಆಡಳಿತಾಧಿಕಾರಿಯಾಗಿರುವ ಹಿನ್ನಲೆಯಲ್ಲಿ ಧರೆ ಕುಸಿತ ಕುರಿತು ಸಮಗ್ರ ವರದಿ ಮಾಡಿ ಜಿಲ್ಲಾಧಿಕಾರಿ ಮತ್ತು ಶಿಕ್ಷಣ ಇಲಾಖೆ ಕಳುಹಿಸಲು ತಹಸೀಲ್ದಾರ್ ಮತ್ತು ತಾ.ಪಂಕಾರ್ಯನಿರ್ವಾಹಕ ಅಧಿಕಾರಿ ಮಾಹಿತಿ ಪಡೆದು ಕೊಂಡಿದ್ದಾರೆ. ಬಳಿಕ ತಕ್ಷಣ ಸರಕ್ಷತೆಯ ಕ್ರಮವಾಗಿ ಸಂಜೆ ವೇಳೆ ತರ್ಪಾಲು ಹೊದಿಸುವ ವ್ಯವಸ್ಥೆ ಮಾಡಿದ್ದಾರೆ. ಈ ಸಂದರ್ಭ ತಾಲೂಕು ಕ್ರೀಡಾಂಗಣದ ಮುಖ್ಯಸ್ಥ ಶ್ರೀಕಾಂತ್ ಬಿರಾವು ಉಪಸ್ಥಿತರಿದ್ದರು.