ವಿಟಿಯು ರಾಜ್ಯಮಟ್ಟದ ಅಂತರ್‌ಕಾಲೇಜು ಅಥ್ಲೆಟಿಕ್‌ ಮೀಟ್‌-ಚಿರಾಯು ರೈ ಬೆಳ್ಳಿ, ಚಿರಾಗ್ ರೈ ಕಂಚಿನ ಪದಕ

0


ಪುತ್ತೂರು: ಮೈಸೂರಿನ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ರಾಜ್ಯಮಟ್ಟದ ಅಂತರ್‌ಕಾಲೇಜು ಅಥ್ಲೆಟಿಕ್‌ ಮೀಟ್‌ನಲ್ಲಿ ಭಾಗವಹಿಸಿದ ಬೆಂಜನಪದವು ಕೆನರಾ ಇಂಜಿನಿಯರಿಂಗ್‌ ಕಾಲೇಜಿನ  ದ್ವಿತೀಯ ವರ್ಷದ ಕಂಪ್ಯೂಟರ್‌ ಸೈನ್ಸ್‌ & ಇಂಜಿನಿಯರಿಂಗ್‌ ವಿದ್ಯಾರ್ಥಿ ಚಿರಾಯು ಎಂ. ರೈರವರು ಶಾಟ್‌ಪುಟ್‌ನಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಡಿಸ್ಕಸ್‌ ಥ್ರೋ ವಿಭಾಗದಲ್ಲಿ ಇದೇ ಕಾಲೇಜಿನ ದ್ವಿತೀಯ ವರ್ಷದ ಕಂಪ್ಯೂಟರ್‌ ಸೈನ್ಸ್‌ & ಇಂಜಿನಿಯರಿಂಗ್‌ ವಿದ್ಯಾರ್ಥಿ ಚಿರಾಗ್‌ ಎಂ. ರೈ ರವರು ತೃತೀಯ ಸ್ಥಾನ ಪಡೆದು ಕಂಚಿನ ಪದಕ ಪಡೆದುಕೊಂಡಿದ್ದಾರೆ. ಅವಳಿ ಸಹೋದರರಾದ ಇವರು ಬೆಟ್ಟಂಪಾಡಿಯ ಚೆಲ್ಯಡ್ಕ ದಿ. ಮನೋಹರ ರೈ ಮತ್ತು ಮಮತಾ ಮನೋಹರ ರೈ ದಂಪತಿ ಪುತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here