ಸವಣೂರು ಸೋಂಪಾಡಿ ಕಾನಾವು ಫಾರ್ಮ್ಸ್‌ನಲ್ಲಿ ರಕ್ತದಾನ ಶಿಬಿರ

0

ಸವಣೂರು: ಇಲ್ಲಿನ ಸೋಂಪಾಡಿ ಕಾನಾವು ಫಾರ್ಮ್ಸ್‌ನಲ್ಲಿ ಯುವ ಉದ್ಯಮಿ, ಸಾಮಾಜಿಕ ಮುಂದಾಳು ಇಸ್ಮಾಯಿಲ್ ಕಾನಾವು ಇವರ ಶುಭವಿವಾಹದ ಅಂಗವಾಗಿ ಅಲ್ ಅನ್ಸಾರ್ ಚಾರಿಟೇಬಲ್ ಟ್ರಸ್ಟ್ ರಿ. ಸವಣೂರು ಇದರ ಸಾರಥ್ಯದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಭಾರತೀಯ ರೆಡ್‌ಕ್ರಾಸ್ ರಕ್ತನಿಧಿ ಮಂಗಳೂರು ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರವು ಜೂ. 30ರಂದು ನಡೆಯಿತು.

ಪಣೆಮಜಲು ರಹ್ಮಾನಿಯಾ ಜುಮ್ಮಾ ಮಸೀದಿಯ ಖತೀಬ್ ಪವಾಝ್ ಫೈಝಿ ದುಆ ನೆರವೇರಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಕ್ತದಾನ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಖ್ಯಾತ ಮಧುಮೇಹ ತಜ್ಞರಾದ ಡಾ. ನಝೀರ್ ಅಹ್ಮದ್‌ರವರು ರಕ್ತದಾನ ಮಾಡುವ ಮೂಲಕ ಉದ್ಘಾಟನೆಗೈದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಅಬ್ದುಲ್ ರಝಾಕ್ ಎಸ್ ಆರ್ ವಹಿಸಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಬ್ಲಡ್ ಡೋನರ್ಸ್ ಮಂಗಳೂರು ಕಾರ್ಯನಿರ್ವಾಹಕ ರಝಾಕ್ ಸಾಲ್ಮರ ರಕ್ತದಾನದ ಮಹತ್ವದ ಕುರಿತು ಮಾತನಾಡಿದರು. ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ರಫೀಕ್ ಎಂ.ಎ ಮಾತನಾಡಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಸಮಾರಂಭದಲ್ಲಿ ಅತಿಥಿಗಳಾಗಿ ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರಝಾಕ್ ಕೆನರಾ, ಸವಣೂರು ಯೂತ್ ಫ್ರೆಂಡ್ಸ್ ಗೌರವಾಧ್ಯಕ್ಷರಾದ ಹೈದರ್ ಅಲಿ ಐವತ್ತೊಕ್ಲು, ರೆಡ್ ಕ್ರಾಸ್ ರಕ್ತನಿಧಿಯ ಸಂಯೋಜಕ ಪ್ರವೀಣ್ ಕುಮಾರ್,

ಅಲ್ ಅನ್ಸಾರ್ ಚಾರಿಟೇಬಲ್ ಟ್ರಸ್ಟ್ ಮಾಜಿ ಅಧ್ಯಕ್ಷರಾದ ರಫೀಕ್ ಟಾಸ್ಕೋ, ಸವಣೂರು ಶಾಲಾ ಎಸ್ಡಿಎಂಸಿ ಸದಸ್ಯರಾದ ಯಾಕೂಬ್ ಮೊದಲಾದವರು ಆಗಮಿಸಿದ್ದರು. ಗೌರವ ಸಲಹೆಗಾರರಾದ ನಝೀರ್ ಸಿ.ಎ ಸ್ವಾಗತಿಸಿ, ಕಾರ್ಯದರ್ಶಿ ಫಾರೂಕ್ ಬಿ.ಎಂ ಸ್ಟೋರ್ ವಂದಿಸಿದರು. ಸಫ್ವಾನ್ ಸವಣೂರು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಬದ್ರಿಯಾ ಜುಮ್ಮಾ ಮಸ್ಜಿದ್ ಸವಣೂರು ಇದರ ಉಪಾಧ್ಯಕ್ಷರಾದ ಮುಹಮ್ಮದ್ ಬಿ.ಎಂ, ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ರಿ. ಉಪಾಧ್ಯಕ್ಷರಾದ ಬಶೀರ್ ಕಾಯರ್ಗ, ಸದಸ್ಯರಾದ ಕರೀಂ ಮೌಲ, ಉಮ್ಮರ್ ಸೋಂಪಾಡಿ, ಸ.ಉ.ಹಿ.ಪ್ರಾ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅಬ್ದುಲ್ಲ ಎಸ್.ಇ, ಸವಣೂರು ಯೂತ್ ಫ್ರೆಂಡ್ಸ್ ಸದಸ್ಯ ಶಾಫಿ ಟೈಲರ್, ಶರೀಫ್ ಕನಿಮಜಲ್. ಕಾನಾವು ಕನ್ಸ್ಟ್ರಕ್ಷನ್ ಮಾಲಕರಾದ ರಿಯಾಝ್ ಕಾನಾವು ಮೊದಲಾದವರು ಉಪಸ್ಥಿತರಿದ್ದರು.ಬಳಿಕ ನಡೆದ ರಕ್ತದಾನ ಶಿಬಿರದಲ್ಲಿ 57 ಮಂದಿ ದಾನಿಗಳು ಭಾಗವಹಿಸಿ ರಕ್ತದಾನ ಮಾಡಿದರು.

LEAVE A REPLY

Please enter your comment!
Please enter your name here