ಕಡಬ: ಕೊಣಾಜೆ ಗ್ರಾಮಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಜು.2ರಂದು ಭೇಟಿ ನೀಡಿ 2 ಕಾಂಕ್ರೀಟ್ ರಸ್ತೆಗಳನ್ನು ಉದ್ಘಾಟಿಸಿದರು.
ಕೊಣಾಜೆ ಗ್ರಾಮದ ಪಾದೆ ಎಂಬಲ್ಲಿ ಎಸ್ಕ್ರೋ ಖಾತೆಯ ಅನುದಾನದಲ್ಲಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆ ಹಾಗೂ ಪಟ್ಲ ಕೊನಡ್ಕ ಎಂಬಲ್ಲಿ 15ನೇ ಹಣಕಾಸು ಯೋಜನೆಯ ಎಸ್.ಸಿ.ಎಸ್.ಟಿ. ಅನುದಾನದಲ್ಲಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆಗಳನ್ನು ಶಾಸಕಿ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿದರು. ಈ ಸಂದರ್ಬದಲ್ಲಿ ಗ್ರಾ.ಪಂ. ಅಧ್ಯಕ್ಷೆ ರುಕ್ಮುಣಿ, ಉಪಾಧ್ಯಕ್ಷ ನವೀನ್ ಮನೆಜಾಲು, ಪಂಚಾಯತ್ ಅಭಿವೃದ್ದಿ ಅಧಿಕಾರಿ ಪದ್ಮನಾಭ, ಸದಸ್ಯರಾದ ಶಿವಪ್ಪ ಆಕೋಟೆಕಾನ, ಬೂತ್ ಸಮಿತಿ ಅಧ್ಯಕ್ಷ ಮೋಹನ್ ದಾಸ್, ಸದಸ್ಯರಾದ ನಾಗಪ್ಪ, ಸೇವಾ ಪ್ರತಿನಿಧಿ ಬೇಬಿ ಸೇರಿದಂತೆ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.
ಶಾಲೆ, ಪಂಚಾಯತ್ಗೆ ಶಾಸಕರ ಭೇಟಿ
ಇದೇ ಸಂದರ್ಭದಲ್ಲಿ ಶಾಸಕಿ ಕೊಣಾಜೆ ಶಾಲೆಗೆ ಭೇಟಿ ನೀಡಿದರು, ಬಳಿಕ ಗ್ರಾ.ಪಂ.ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಬದಲ್ಲಿ ಬಿ.ಎಸ್.ಎನ್.ಎಲ್. ಟವರ್ಗೆ ಜನರೇಟರ್ ಇಲ್ಲದೆ ಇರುವ ಸಮಸ್ಯೆಯ ಬಗ್ಗೆ ಗಮನ ಸೆಳೆದಾಗ ಜನರೇಟರ್ ವ್ಯವಸ್ಥೆ ಮಾಡಿಸುವುದಾಗಿ ಶಾಸಕಿ ಭರವಸೆ ನೀಡಿದರು. ಅಲ್ಲದೆ ಕೊಣಾಜೆ ಬಸ್ಸಿನ ವ್ಯವಸ್ಥೆ ಮಾಡುವ ಬಗ್ಗೆಯೂ ಭರವಸೆ ನೀಡಿದ್ದಾರೆ.