ಹೊಸ ರೇಷನ್ ಕಾರ್ಡ್ , ತಿದ್ದುಪಡಿ ಅವಾಂತರ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಪ್ರಚಾರ- ಜನರ ಪರಾದಾಟ

0

ಆಲಂಕಾರು :ಸರಕಾರದ ಆದೇಶದಂತೆ ಮೆಡಿಕಲ್ ಎಮೆರ್ಜೆನ್ಸಿ ಪ್ರಯುಕ್ತ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಜು.2 ಮತ್ತು ಜು.3 ರಂದು ಅವಕಾಶ ನೀಡಿದ್ದು ಇದನ್ನು ತಪ್ಪಾಗಿ ಗ್ರಾಮವನ್ ನಾಗರಿಕ ಸೇವಾ ಕೇಂದ್ರದಲ್ಲಿ ಹೊಸ ರೇಷನ್ ಕಾಡ್೯ ಹಾಗು ತಿದ್ದುಪಡಿ ಗೆ ಅವಕಾಶ ನೀಡಿದ್ದಾರೆ ಎಂದು ಗ್ರಾಮವನ್ ನಾಗರಿಕ ಸೇವಾ ಕೇಂದ್ರದ ಮುದ್ರೆಯನ್ನು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದ ಪರಿಣಾಮ ಜನರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಗ್ರಾಮ ಒನ್ ಕೇಂದ್ರಗಳಿಗೆ ಜಮಾಯಿಸುತ್ತಿದ್ದಾರೆ. ಗ್ರಾಮ ಒನ್ ಕೇಂದ್ರದವರು ಜನರ ಮೊಬೈಲ್ ಕರೆ ಮತ್ತು ಪ್ರಶ್ನೆಗಳಿಗೆ ಉತ್ತರಿಸಿ ಕಂಗಲಾಗುವ ಪರಿಸ್ಥಿತಿ ಉಂಟಾಗಿದೆ.


ಕಳೆದ ಎರಡು ವರುಷಗಳಿಂದ ರೇಷನ್ ಕಾರ್ಡ್ ತಿದ್ದುಪಡಿಗೆ ಸರಿಯಾಗಿ ಅವಕಾಶವನ್ನು ನೀಡದೇ ಇರುವುದರಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಯಾವುದೇ ದಾಖಲೆಗಳನ್ನು ಸರಿಪಡಿಸಬೇಕಾದಲ್ಲಿ, ಮಕ್ಕಳನ್ನು ಶಾಲಾ ದಾಖಲಾತಿ ಸಂದರ್ಭ, ಆಯುಷ್ಮಾನ್ ಕಾರ್ಡ್ ಮಾಡಲು ರೇಷನ್ ಕಾರ್ಡ್ ಅವಶ್ಯವಾಗಿ ಬೇಕಾಗಿರುವುದರಿಂದ ಜನರು ಅಲೆದಾಡುವಂತಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನರನ್ನು ಮತ್ತಷ್ಟು ಪರದಾಡುವಂತೆ ಮಾಡಿರುವುದು ವಿಪರ್ಯಾಸವಾಗಿದೆ.

ಈ ಬಗ್ಗೆ ಸರಕಾರ ಸೂಕ್ತ ಕ್ರಮಗಳನ್ನು ವಹಿಸಿ ಹಿಂದೆ ಇದ್ದಂತೆ ರೇಷನ್ ಸರ್ವರ್ ವ್ಯವಸ್ಥೆ ಮಾಡಿದರೆ ಜನರು ಪರದಾಡುವ ಪರಿಸ್ಥಿತಿ ತಪ್ಪುತ್ತದೆ. ಹಾಗು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಸಂಬಂಧಪಟ್ಟ ಇಲಾಖೆಯವರು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here