ಕಡಬ: ಕರ್ನಾಟಕ ರಾಜ್ಯ ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್‌ ನ ತಾಲೂಕು ಸಮಿತಿಯ ವಾರ್ಷಿಕ ಸಭೆ

0

ಕಡಬ: ಕರ್ನಾಟಕ ರಾಜ್ಯ ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್ ಇದರ ಕಡಬ ತಾಲೂಕು ಮಟ್ಟದ ಪದಾಧಿಕಾರಿಗಳ ವಾರ್ಷಿಕ ಸಭೆ ಹಾಗೂ ಚುನಾವಣೆಯು ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಜೂ.30ರಂದು ನಡೆಯಿತು.


ಮುಖ್ಯ ಅತಿಥಿಯಾಗಿದ್ದ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಎ.ಸಿ ವಿನಯರಾಜ ಅವರು, ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್ ನ ಅಗತ್ಯತೆ ಹಾಗೂ ಇದರಿಂದ ಕ್ರೈಸ್ತರಿಗೆ ಆಗುತ್ತಿರುವ ಅನುಕೂಲಗಳ ಬಗ್ಗೆ ಮಾತನಾಡಿ, ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್ ಮೂಲಕವೇ ನಾನು ರಾಜಕೀಯವಾಗಿ ಈ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಆಗಿದ್ದು ಮುಂದಿನ ದಿನಗಳಲ್ಲಿ ಯುವ ಜನತೆಯು ಕ್ರೈಸ್ತ ಸಮುದಾಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಕ್ಷೇತ್ರಕ್ಕೆ ಬರುವಂತಾಗಬೇಕು, ಈ ಮೂಲಕ ರಾಜಕೀಯ ಸ್ಥಾನಗಳಲ್ಲಿ ಕ್ರೈಸ್ತರು ಗುರುತಿಸಿಕೊಳ್ಳುವಂತೆಯು ಮಾಡಬೇಕು ಇದಕ್ಕಾಗಿ ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್ ರಾಜಕೀಯದಲ್ಲಿ ಆಸಕ್ತಿ ಇರುವಂತಹ ಕ್ರೈಸ್ತರಿಗೆ ಸಂಪೂರ್ಣ ಬೆಂಬಲವನ್ನು ಕೂಡ ನೀಡಲಾಗುವುದು, ಮುಂದಿನ ದಿನಗಳಲ್ಲಿ ಕಡಬ ತಾಲೂಕಿನಲ್ಲಿ ಸಂಘಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯನ್ನು ನೋಂದಾಯಿಸುವ ಮೂಲಕ ತಾಲೂಕಿನಲ್ಲಿ ಸಂಘಟನೆಯನ್ನು ಬಲಪಡಿಸುವಂತೆ ಕಾರ್ಯತಂತ್ರ ರೂಪಿಸಲಾಗುವುದು ಎಂದು ಹೇಳಿದರು.


ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್ನ ರಾಜ್ಯಾಧ್ಯಕ್ಷ ಎಸಿ ಜಯರಾಜ್ ಅವರು ಮಾತನಾಡಿ, ನಾವು ಇಂದು ನಿರ್ಮಿಸುವ ಸಂಘಟನೆಯ ಬುನಾದಿಯೆ ನಮ್ಮ ಮುಂದಿನ ಪೀಳಿಗೆಗೆ ಅನೇಕ ಅವಕಾಶಗಳನ್ನು ತಂದು ಕೊಡಲಿದೆ. 2005 ರಿಂದ ಪ್ರಾರಂಭಗೊಂಡ ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿದೆ. ಎಲ್ಲ ಸಮುದಾಯದವರಿಗೂ ಸಂಘಟನೆ ಎಂಬುದು ಅತ್ಯವಶ್ಯಕ ಘಟಕ. ಯಾವುದಾದರೂ ಸಮಸ್ಯೆಗಳು ಬಂದಾಗ ಸಂಘಟನೆ ಇರುವುದು ಸಮುದಾಯವನ್ನು ಒಗ್ಗಟ್ಟಿನಿಂದ ಆ ಸಮಸ್ಯೆನ ಬಗೆಹರಿಸಲು ಸಹಾಯ ಮಾಡುತ್ತದೆ. ಕಡಬ ತಾಲೂಕಿನಲ್ಲಿ ಅನೇಕ ಕಾರ್ಯಗಳನ್ನು ಮಾಡಲು ಸಂಘಟನೆಗಳಿಗೆ ಅವಕಾಶವಿದ್ದು, ಮುಂದೆ ಕ್ರೈಸ್ತ ಸಮುದಾಯದವರನ್ನು, ಪಂಗಡದವರನ್ನು ಕಡಬ ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್ ನ ಸಂಘಟನೆಗೆ ಸೇರ್ಪಡೆಸಿ ಸಂಘಟನೆಯನ್ನು ತಾಲೂಕು ಹಾಗೂ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಬಲಪಡಿಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ಎ.ಸಿ ಮ್ಯಾಥ್ಯೂ, ಪಿ.ಪಿ ವರ್ಗೀಸ್, ವಲ್ಸಮ್ಮ ಮೊದಲಾದವರು ಉಪಸ್ಥಿತರಿದ್ದರು. ಕಡಬ ತಾಲೂಕು ಘಟಕದ ಅಧ್ಯಕ್ಷ ಕ್ಷೇವಿಯರ್ ಬೇಬಿ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಥೋಮಸ್ ವಂದನಾರ್ಪಣೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ಶ್ರದ್ದಾಂಜಲಿ ಸಭೆ
ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನ ಹೊಂದಿದ ಕಡಬ ಕೋಡಿಂಬಾಳದ ಸನಿಶ್ ಹಾಗೂ ಚಿಕ್ಕಮಂಗಳೂರು ಜಿಲ್ಲಾ ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ ರಾಜು ವರ್ಗೀಸ್ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು.

LEAVE A REPLY

Please enter your comment!
Please enter your name here