ಜು.13: ಪುತ್ತೂರಿನಲ್ಲಿ ರಾಷ್ಟ್ರೀಯ ಲೋಕ ಅದಾಲತ್ – 2ನೇ ಶನಿವಾರದಂದು ಯಾರು ರಜೆ ಮಾಡುವಾಗಿಲ್ಲ – ಪ್ರಿಯರವಿ ಜೊಗಳೇಕರ್

0

ಪುತ್ತೂರು: ಜು.13ಕ್ಕೆ ರಾಷ್ಟ್ರೀಯ ಲೋಕಾ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನ್ಯಾಯಾಲಯದಲ್ಲಿ ಬಾಕಿ ಇರುವ ಮತ್ತು ಇತರ ಪ್ರಕರಣಗಳನ್ನು ಹಾಗು ಜನನ, ಮರಣ ನೋಂದಣಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಇತ್ಯರ್ಥ ಪಡಿಸಲು ನಿರ್ಧರಿಸಲಾಗಿದೆ. ಹಾಗಾಗಿ ಆ ದಿನ 2ನೇ ಶನಿವಾರವಾಗಿರುವುದರಿಂದ ವಿವಿಧ ಇಲಾಖೆಯ ಅಧಿಕಾರಿಗಳು ಸಹಿತ ಸಂಬಂಧಿಸಿವರು ನಾನು ಬರುವುದಿಲ್ಲ ಎಂಬ ರೀಸನ್ ಕೊಡಬಾರದು. ಜನರಿಗೆ ನ್ಯಾಯ ಕೊಡುವ ಕೆಲಸ ಆಗಬೇಕೆಂದು ಹಿರಿಯ ವ್ಯವಹಾರಿಕ ನ್ಯಾಯಾಧೀಶೆ ಮತ್ತು ಜೆಎಂಎಫ್‌ಸಿ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಪ್ರಿಯಾರವಿ ಜೊಗಳೇಕರ್ ಅವರು ಹೇಳಿದರು.


ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ಇವರ ನಿರ್ದೇಶನದಂತೆ ನಡೆಯುವ ರಾಷ್ಟ್ರೀಯ ಲೋಕಾ ಅದಾಲತ್‌ನ ಕುರಿತು ಜು.4ರಂದು ಪುತ್ತೂರು ಜೆಎಂಎಫ್‌ಸಿ ನ್ಯಾಯಾಯಲದಲ್ಲಿ ಇಲಾಖಾಧಿಕಾರಿಗಳ ಜೊತೆ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಇನ್ನು ಕೇವಲ 10 ದಿನವಿದೆ. ಹಾಗಾಗಿ ನಮ್ಮಲ್ಲಿ ಎಷ್ಟು ಕೇಸುಗಳಿವೆಯೋ ಅದನ್ನು ಇತ್ಯರ್ಥ ಮಾಡುವ ಪಣ ತೊಡಬೇಕಾಗಿದೆ. ಇಲ್ಲಿ ನಮಗೆ ಮುಖ್ಯವಾಗಿ ಪೊಲೀಸ್ ಇಲಾಖೆಯ ಸಹಕಾರ ಬೇಕಾಗಿದೆ. ಪೊಲೀಸ್ ಇಲಾಖೆಯಲ್ಲಿ ಯಾವುದೆಲ್ಲ ಪೆಂಡಿಂಗ್ ಕೇಸ್ ಇದೆ ಎಂದು ನೋಡಿ. ಸಿವಿಲ್ ಕೇಸ್‌ಗೆ ಸಂಬಂಧಿಸಿ ಕೌಂಟರ್ ಕೇಸ್‌ನಲ್ಲಿ ಎರಡು ಪಾರ್ಟಿಯ ಮನವೊಲಿಸುವ ಕೆಲಸ ನೀವು ಮಾಡಬೇಕು. ನಿಮ್ಮಲ್ಲಿ ಆಗದ ವಿಚಾರವನ್ನು ಕೋರ್ಟ್ ಮುಂದೆ ತನ್ನಿ. ಇಲ್ಲಿಂದ ಕಕ್ಷಿದಾರರುಗಳಿಗೆ ಲೋಕ ಅದಾಲತ್ ನೋಟೀಸ್ ಕಳಿಸುವ ವ್ಯವಸ್ಥೆ ಆಗುತ್ತದೆ. ಈ ಲೋಕ ಅದಾಲತ್ ನೋಟೀಸ್ ತಲುಪುವಲ್ಲಿ ಪೊಲೀಸ್ ಇಲಾಖೆಯ ಸಹಕಾರ ಬೇಕಾಗುತ್ತದೆ. ಸಹಾಯಕ ಸರಕಾರಿ ಅಭಿಯೋಜಕರ ಪಾತ್ರವೂ ಮುಖ್ಯ. ಅದೇ ರೀತಿ ಹಲವಾರು ವರ್ಷಗಳಲಿ ಬಾಕಿ ಉಳಿದಿರುವ ಚೆಕ್ ಕೇಸುಗಳು, ಬ್ಯಾಂಕ್ ಸಾಲದ ಕೇಸುಗಳು, ಜಮೀನಿಗೆ ಸಂಬಂಧಿಸಿದಂತೆ ವರ್ಷಾನುಗಟ್ಟಲೇ ಬಗೆಹರಿಸಿಕೊಳ್ಳದೆ ಬಾಕಿ ಇರುವ ಸಿವಿಲ್ ದಾವೆಗಳನ್ನು ಉಭಯತ್ರರಲ್ಲಿ ಸಂಧಾನ ಮಾಡಿಸುವುದರ ಮೂಲಕ ಅದಾಲತ್‌ನಲ್ಲಿ ಬಗೆಹರಿಸಿಕೊಂಡಾಗ ಕಕ್ಷಿದಾರರು ಸಣ್ಣಪುಟ್ಟ ವ್ಯಾಜ್ಯಗಳಿಗಾಗಿ ಹಲವು ವರ್ಷಗಳ ಕಾಲ ನ್ಯಾಯಾಲಯಕ್ಕೆ ಅಲೆದಾಡುವುದನ್ನು ತಪ್ಪಿದಂತಾಗುತ್ತದೆ. ಈ ನಿಟ್ಟಿನಲ್ಲಿ ಇದರ ಸದುಪಯೋಗವನ್ನು ಕಕ್ಷಿದಾರರು ಪಡೆದುಕೊಳ್ಳಬೇಕು ಎಂದರು.

ಜನನ ಪ್ರಮಾಣ ಪತ್ರದ ಪ್ರಕರಣ ಇತ್ಯರ್ಥ ಆಗಬೇಕು:
ಪುತ್ತೂರು ತಾಲೂಕಿನಲ್ಲಿ ಜನನ ಪ್ರಮಾಣ ಪತ್ರದ ಪ್ರಕರಣ ಎಷ್ಟಿವೆ. ಅದನ್ನು ದಾಖಲೆ ಸಹಿತ ಕೊಡಬೇಕು. ಲೋಕ ಅದಾಲತ್ ಮೂಲಕ ಇತ್ಯರ್ಥಗೊಳಿಸಬೇಕು. ಈ ಕುರಿತು ಕಂದಾಯ ಇಲಾಖೆ ಪೂರ್ಣ ಮಾಹಿತಿ ನೀಡುವಂತೆ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಪ್ರಿಯಾರವಿ ಜೊಗಳೇಕರ್ ಅವರು ಪ್ರಸ್ತಾಪಿಸಿದರಲ್ಲದೆ ಇಲಾಖೆ ಶ್ರಮಪಟ್ಟರೆ ಜವಾಬ್ದಾರಿ ಕಡಿಮೆಯಾಗುತ್ತದೆ. ಆಗ ಕೋರ್ಟ್‌ಗೆ ಹೋಗಿ ಕೇಸು ಹೆಚ್ಚು ಮಾಡುವುದು ಕೂಡಾ ಕಡಿಮೆ ಆಗುತ್ತದೆ.5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಸರಿತಾ, ಸಹಾಯಕ ಕಮೀಷನರ್ ಜುಬಿನ್ ಮೊಹಪಾತ್ರ, ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶ ಶಿವಣ್ಣ ಎಚ್.ಆರ್, 2ನೇ ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶ ಯೋಗೇಂದ್ರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಹೆಚ್, ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಗಲಕಾಳೆ, ಪುತ್ತೂರು ನಗರ ಪೊಲೀಸ್ ಠಾಣೆ ಎ.ಎಸ್.ಐ ಕೃಷ್ಣಪ್ಪ, ಕಡಬ ಪೊಲೀಸ್ ಠಾಣೆಯ ಎಸ್.ಐ ಸುರೇಶ್, ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಎ.ಎಸ್.ಐ ಕರುಣಾಕರ, ಅಬಕಾರಿ ಉಪನಿರೀಕ್ಷಕ ಹಮೀದ್, ಸಹಾಯಕ ಸರಕಾರಿ ಅಭಿಯೋಜಕಿ ಕವಿತಾ, ವಕೀಲರ ಸಂಘದ ಉಪಾಧ್ಯಕ್ಷ ಮೋನಪ್ಪ, ಕಾರ್ಯದರ್ಶಿ ಚಿನ್ಮಯ್ ರೈ, ನ್ಯಾಯವಾದಿಗಳಾದ ರಾಮಮೋಹನ್ ರಾವ್, ದೇವಾನಂದ್, ಪಿ.ಕೆ ಸತೀಶ್, ನಾಗರಾಜ್, ಪ್ರವೀಣ್ ಕುಮಾರ್, ಗೌರಿಶಂಕರ್ ಶಾನ್‌ಬೋಗ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಮಳೆಯಿಂದ ಹಾನಿ- ಪಟ್ಟಿಕೊಡುವಂತೆ ಸೂಚನೆ
ಮಳೆಯಿಂದ ಹಾನಿಯಾಗಿ ಎಷ್ಟು ನಷ್ಟ ಸಂಭವಿಸಿದೆ. ಜಾನುವಾರು ಮರಣವನ್ನಪಿದ ಕುರಿತು ಸಮಗ್ರ ಮಾಹಿತಿ ನೀಡುವಂತೆ ಜೂ.24ರಂದು ನ್ಯಾಯಾಲಯದಿಂದ ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ. ಇಲ್ಲಿನ ತನಕ ಅದಕ್ಕೆ ಉತ್ತರ ಬಂದಿಲ್ಲ. ಈ ವರದಿ ಹೈಕೋರ್ಟ್‌ಗೆ ಕೊಡಬೇಕಾಗಿದೆ. ಇದೇ ವರದಿಯ ಆದಾರದಲ್ಲಿ ಮುಂದೆ ಎನ್‌ಡಿಆರ್‌ಎಫ್ ಅನುದಾನ ಬರುತ್ತದೆ. ಅನುದಾನ ರಿಲೀಸ್ ಆಗಬೇಕಾದರೆ ವರದಿ ಕೊಡಬೇಕೆಂದು ತಹಶೀಲ್ದಾರ್ ಅವರಿಗೆ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಪ್ರಿಯಾರವಿ ಜೊಗಳೇಕರ್ ಸೂಚನೆ ನೀಡಿದರು. ಆರಂಭದಲ್ಲಿ ಜನನ ಪ್ರಮಾಣ ಪತ್ರದ ಪೆಂಡಿಂಗ್ ಕೇಸ್ ಕುರಿತು ನ್ಯಾಯಾಧೀಶೆ ಪ್ರಿಯರವಿ ಜೊಗಳೇಕರ್ ಅವರು ಪ್ರಸ್ತಾಪಿಸಿದಾಗ ತಹಸೀಲ್ದಾರ್ ಅನುಪಸ್ಥಿತಿಗೆ ನ್ಯಾಯಾಧೀಶರು ಒಮ್ಮೆ ಗರಂ ಆದರಲ್ಲದೆ ಮೊನ್ನೆ ಮಳೆ ಹಾನಿ ವರದಿ ಕೇಳಿದರೂ ಇನ್ನೂ ಅವರಿಗೆ ಕೊಡಲಾಗಿಲ್ಲ. ಇವತ್ತು ಮೀಟಿಂಗ್‌ಗೂ ಬರಲಿಲ್ಲ ಎಂದು ಪ್ರಶ್ನಿಸಿದರು. ಬಳಿಕ ಸಭೆಗೆ ಆಗಮಿಸಿದ ತಹಸೀಲ್ದಾರ್ ಅವರಲ್ಲಿ ಲೋಕ ಅದಾಲತ್‌ನಲ್ಲಿ ಜನನ ಪ್ರಮಾಣ ಪತ್ರವನ್ನು ಇತ್ಯರ್ಥ ಪಡಿಸುವಂತೆ ತಿಳಿಸಿದರು.

LEAVE A REPLY

Please enter your comment!
Please enter your name here