ವಿವೇಕಾನಂದ ಕಾನೂನು ಮಹಾವಿದ್ಯಾಲಯ, ಕರ್ನಾಟಕ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ, “ಮಾಧ್ಯಮ ಸಮೂಹ ವಿಶ್ವಾಸಾರ್ಹತೆ” ಉಪನ್ಯಾಸ

0

ವರದಿಗಾರರ ಬದುಕಿನ ಸ್ಥೈರ್ಯ, ಪತ್ರಿಕೋದ್ಯಮದ ವಿಶ್ವಾಸಾರ್ಹತೆ ಕುಸಿಯುತ್ತಿದೆ-ಜಿತೇಂದ್ರ ಕುಂದೇಶ್ವರ

ಪುತ್ತೂರು: ನ್ಯಾಯ, ನೀತಿ, ಧರ್ಮದಲ್ಲಿ ಬದುಕಿದರೆ ನಾಗರಿಕ ಸಮಾಜ ಸುಭೀಕ್ಷವಾಗುತ್ತದೆ. ಧರ್ಮ ಪಾಲನೆ ಮಾಡಿದರೆ ಸಂಸ್ಕಾರ ಉತ್ತಮವಾಗಿರುತ್ತದೆ. ಸಂಸ್ಕಾರವನ್ನು ಮೂಲದಲ್ಲಿ ಬೆಳೆಸಿದರೆ ಒಳ್ಳೆಯ ನಾಗರಿಕ ಸಮಾಜ ನಿರ್ಮಾಣವಾಗುತ್ತದೆ. ಇಂತಹ ಸಮಾಜದಿಂದ ಒಳ್ಳೆಯ ವ್ಯಕ್ತಿಗಳು ಬಂದು ಉತ್ತಮ ತಮ್ಮ ಕಾಯಕವನ್ನು ಮಾಡುತ್ತಾರೆ. ಎಂದು ಪತ್ರಕರ್ತ ಹಾಗೂ ವಿಶ್ವವಾಣಿ ಪತ್ರಿಕೆಯ ಅಂಕಣಕಾರ ಜಿತೇಂದ್ರ ಕುಂದೇಶ್ವರ ಹೇಳಿದರು.

ವಿವೇಕಾನಂದ ಕಾನೂನು ಮಹಾವಿದ್ಯಾಲಯ ಮತ್ತು ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಘಟಕದ ವತಿಯಿಂದ ಕಾನೂನು ವಿದ್ಯಾಲಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಮತ್ತು “ಮಾಧ್ಯಮ ಸಮೂಹ ಮತ್ತು ವಿಶ್ವಾಸಾರ್ಹತೆ” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಮಾಧ್ಯಮ ಎಂಬುದು ಸಮಾಜದ ಕನ್ನಡಿಯಾಗುತ್ತದೆ. ಪತ್ರಿಕಾ ವರದಿಗಾರರ ಬದುಕಿನ ಸ್ಥೈರ್ಯ ಹಾಗೂ ಪತ್ರಿಕೋದ್ಯಮದ ವಿಶ್ವಾಸಾರ್ಹ ಕುಸಿಯುವುಂತಹ ಸನ್ನಿವೇಶ ಇದೆ. ವರದಿಗಾರರಿಗೆ ಬದುಕಿನಲ್ಲಿ ಬದ್ರತೆ ಇಲ್ಲ. ತನಿಖಾವರದಿ ಪ್ರಕಟಿಸಿದರೆ ಹಲವು ಕಡೆಯಿಂದ ವರದಿಗಾರರನ್ನು ಹಣಿಯುವ ಕೆಲಸ ನಡೆಯುತ್ತದೆ ಎಂದರು. ಉತ್ತಮ ವರದಿಗಳು ಬಂದಾಗ ಪತ್ರಿಕೆಗಳ ವಿಶ್ವಾಸಾರ್ಹತೆ ಹೆಚ್ಚುತ್ತದೆ. ಸಾಮಾಜಿಕ ಜಾಲತಾಣದಿಂದ ಪತ್ರಿಕೆ ಓದುವವರ ಸಂಖ್ಯೆ ಕಡಿಮೆಯಾಗಿದೆ. ಸಮೂಹ ಮಾಧ್ಯಮಗಳಲ್ಲಿ ಸುದ್ದಿ, ಮಾಹಿತಿಗಳು ಹೆಚ್ಚಾಗಿದೆ ಅಲ್ಲದೆ ನಕಲಿ ಸುದ್ದಿಗಳು ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣದಿಂದ ಮನುಷ್ಯನ ಮೃಗೀಯ ಭಾವನೆಗಳು ಜಾಗೃತಗೊಳ್ಳುತ್ತದೆ ಎಂದ ಹೇಳಿದರು. ಮುಂದಿನ ವಕೀಲರಾಗುವ ನೀವು ವಿಶ್ವಾಸ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು ವಿಶ್ವಾಸಾರ್ಹ ವರದಿ ಮಾಡುವುದರಲ್ಲಿ ನನಗೆ ಖುಷಿ ಇದೆ ಎಂದು ಹೇಳಿ ತನ್ನ 25 ವರ್ಷಗಳ ವೃತ್ತಿ ಬದುಕಿನ ಅನುಭವಗಳನ್ನು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಮಾತನಾಡಿ ಈ ಕಾರ್ಯಕ್ರಮದ ಉಪಯೋಗವನ್ನು ಪಡೆದು ನಿಮ್ಮ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಿ. ಮುಂದಿನ ಜೀವನದ ಸಂದರ್ಭದಲ್ಲಿ ಇದರ ಘಟನೆಯನ್ನು ಅನುಭವಿಸಲು ಸಾಧ್ಯವಾದರೆ ಇಂದಿನ ಕಾರ್ಯಕ್ರಮಕ್ಕೆ ಮಹತ್ವ ಬರುತ್ತದೆ ಎಂದರು. ಪತ್ರಿಕಾ ಧರ್ಮ ಮತ್ತು ಕಾನೂನು ಒಂದೇ ದಾರಿಯಲ್ಲಿ ಸಾಗುತ್ತದೆ. ಪತ್ರಿಕಾ ಧರ್ಮಕ್ಕೆ ಸಂವಿಧಾನವೇ ಪ್ರಾಮುಖ್ಯತೆ ನೀಡಿದೆ. ಪತ್ರಿಕೋದ್ಯಮವನ್ನು ಹಾಗೂ ಪತ್ರಕರ್ತರನ್ನು ಕಾನೂನಿನಲ್ಲಿ ಮಾತ್ರ ಕಟ್ಟಿಹಾಕಬಹುದೇ ಹೊರತು ಬೇರೆ ಯಾವುದರಿಂದಲೂ ಸಾಧ್ಯವಿಲ್ಲ. ಪತ್ರಿಕಾರಂಗವು ಕಾರ್ಯಾಂಗ, ಶಾಸಕಾಂಗದ ತೊಡಕುಗಳನ್ನು ನಿವಾರಿಸುತ್ತದೆ ಅಲ್ಲದೆ ಸಾಮಾಜಿಕ ಕಳಕಳಿಯ ಕೆಲಸವನ್ನು ಮಾಡುತ್ತದೆ ಎಂದರು. ಸರಕಾರ ಹೊಸದಾಗಿ ಜಾರಿಗೆ ತಂದ ಹೊಸ ಕಾನೂನಿನ ಮಹತ್ವವನ್ನು ತಿಳಿಸಿದರು.

ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಅಧ್ಯಕ್ಷೆ ಶೈಲಜಾ ಸುದೇಶ್ ಮಾತನಾಡಿ ನಾವು ಅರ್ಥಪೂರ್ಣ ಕಾರ್ಯಕ್ರಮದಲ್ಲಿದ್ದೇವೆ. ಪತ್ರಿಕಾರಂಗ ಇವತ್ತು ಪತ್ರಿಕೋದ್ಯಮವಾಗಿ ಬೆಳೆದಿದೆ. ಪತ್ರಿಕಾ ರಂಗ ಹಾಗೂ ದೃಶ್ಯಮಾಧ್ಯಮದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿವೆ. ವರದಿ ಮತ್ತು ವರದಿಗಾರಿಕೆಗೆ ಸೀಮಿತವಾದ ಕ್ಷೇತ್ರ ತಂತ್ರಜ್ಞಾನದ ತೀವ್ರ ಪೈಪೋಟಿಯನ್ನು ಎದುರಿಸುತ್ತಿದೆ. ಇಂದು ಪತ್ರಿಕೆ ಓದುವವರ ಸಂಖ್ಯೆ ಕಡಿಮೆಯಾಗಿದೆ. ಹಿಂದಿನ ಕಾಲದಲ್ಲಿ ಶಾಲೆಯಲ್ಲಿ ಪತ್ರಿಕೆ ಓದುವ ಸಂಪ್ರದಾಯ ಇತ್ತು. ಇಂದಿನ ಜನತೆಯಲ್ಲಿ ಓದುವ ಹವ್ಯಾಸ ಕಡಿಮೆಯಾಗಿ ಮೊಬೈಲ್ ಬಳಕೆ ಹೆಚ್ಚಾಗಿದೆ. ಪತ್ರಿಕೆ ಓದುವ ಹವ್ಯಾಸವನ್ನು ಎಲ್ಲರೂ ಬೆಳೆಸಿಕೊಳ್ಳಿ ಎಂದ ಅವರು ನಿಮ್ಮ ಅಗತ್ಯಗನುವಾಗಿ ಮೊಬೈಲ್ ಬಳಸಿ. ಬ್ರಷ್ಟಾಚಾರ ಕಾನೂನು ಮೀರಿ ಯಾರು ಹೋಗಬೇಡಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕ ವಿಜಯನಾರಾಯಣ ಕೆ.ಎಂ. ಮಾತನಾಡಿ ವಕೀಲ, ನ್ಯಾಯಾಧೀಶನಾನಾದವನಿಗೆ ಎಲ್ಲಾ ವಿಚಾರಗಳ ಜೊತೆಗೆ ಪತ್ರಿಕಾ ರಂಗದ ವಿಷಯದ ಮಾಹಿತಿಯೂ ಇರಬೇಕು. ಕಾನೂನು ಮತ್ತು ಪತ್ರಿಕಾ ರಂಗ ಎರಡು ಕಣ್ಣುಗಳು ಇದ್ದ ಹಾಗೆ. ನಮ್ಮ ಜ್ಞಾನಾರ್ಜನೆಗೆ ಅವಕಾಶ ಸಿಗುವ ಇಂತಹ ಕಾರ್ಯಕ್ರಗಳನ್ನು ನಾವು ಬಳಸಿಕೊಳ್ಳಬೇಕು ಎಂದರು. ಒಬ್ಬನಿಂದ ಸಮಾಜ ಸುಧಾರಣೆ ಸಾಧ್ಯವಿಲ್ಲ. ಪತ್ರಿಕಾರಂಗದ ಜೊತೆಗೆ ಕಾನೂನು ಕ್ಷೇತ್ರ ಕೂಡ ಬೇಕು. ಕಾನೂನಿನ ಜ್ಞಾನ ಪತ್ರಿಕಾರಂಗವನ್ನು ಗಟ್ಟಿ ಮಾಡಲಿ. ಇಂದಿನ ಪತ್ರಿಕಾ ದಿನಾಚರಣೆ ಕಾಲೇಜಿನ ಮಟ್ಟಿಗೆ ಅರ್ಥಪೂರ್ಣವಾಗಿದೆ. ಕಾನೂನು ಮತ್ತು ಪತ್ರಿಕಾ ರಂಗದ ನಾವು ಜೊತೆಯಾಗಿ ನಡೆಯೋಣ ಎಂದು ಹೇಳಿದ ಅವರು ಕರ್ನಾಟಕ ಪತ್ರಕರ್ತರ ಸಂಘದ ಪೂರ್ಣ ಸಹಕಾರ ನಮಗೆ ಬೇಕು ಎಂದು ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಕಾಂತ್ ರೈ ಅನಿಕೂಟೇಲು ಪ್ರಾಸ್ತಾವಿಕ ಮಾತನಾಡಿ ವಿದ್ಯಾರ್ಥಿಗಳು ನಾಲ್ಕುಗೋಡೆಯ ಬಗ್ಗೆ ಸೀಮಿತವಾಗಬಾರದು. ಪಠ್ಯಕ್ರಮಕ್ಕೆ ಮಾತ್ರ ಇರಬಾರದು. ಸಮಾಜದ ಆಗು ಹೋಗುಗಳ ಬಗ್ಗೆಯೂ ತಿಳಿದುಕೊಳ್ಳುವಂತಹ ಅವಕಾಶವನ್ನು ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಇದಕ್ಕೆ ಪೂರಕವಾಗಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಇವತ್ತು ಕಾಲೇಜಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಕಾಲೇಜಿನ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕ ಡಾ.ಬಿ.ಕೆ.ರವೀಂದ್ರ ಹಾಗೂ ಪ್ರಾಂಶುಪಾಲೆ ಅಕ್ಷತಾ ಎ.ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿಸಿ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ವಿದ್ಯಾರ್ಥಿ ಸೂರ್ಯ ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿದರು. ಕರ್ನಾಟಕ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪಿ.ಸದಾಶಿವ ಭಟ್, ಜತೆ ಕಾರ್ಯದರ್ಶಿ ದಿಲ್‌ಶಾನ, ಸಂಘಟನಾ ಕಾರ್ಯದರ್ಶಿ ಗೋಪಾಲಕೃಷ್ಣ ಸಂತೋಷನಗರ, ಮಾಜಿ ಉಪಾಧ್ಯಕ್ಷ ಶರತ್ ಕುಮಾರ್ ಪಾರ ಅತಿಥಿಗಳಿಗೆ ಹೂ ನೀಡಿದರು. ವಿದ್ಯಾರ್ಥಿನಿ ಶ್ರೀರಕ್ಷಾ ಪ್ರಾರ್ಥಿಸಿ ಸಹಾಯಕ ಪ್ರಾಧ್ಯಾಪಕಿ ಸಂಗೀತಾ ಎಸ್.ಎಂ. ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ.ರೇಖಾ ವಂದಿಸಿ ವಿದ್ಯಾರ್ಥಿ ಪ್ರಿಯಾ ಸಾಯ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸದಸ್ಯರುಗಳಾದ ತಾರಾನಾಥ್, ಆದಿತ್ಯ ಈಶ್ವರಮಂಗಲ, ಉಮಾಪ್ರಸಾದ್ ರೈ ನಡುಬೈಲು, ಅಶ್ವಥ್ ಬೆಟ್ಟಂಪಾಡಿ,ರಾಜೇಶ್‌ ಸಂಪ್ಯಾಡಿ ಹಾಗೂ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿವೇಕ ಪ್ರತಿಧ್ವನಿ ಮಾಧ್ಯಮ ಘಟಕ ಆರಂಭ
ಕಾಲೇಜಿನ ಸಂಚಾಲಕರ ಮಾರ್ಗದರ್ಶನದಲ್ಲಿ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಹೊಸದಾಗಿ ವಿವೇಕ ಪ್ರತಿಧ್ವನಿ ಎಂಬ ಮಾಧ್ಯಮ ಘಟಕವನ್ನು ಆರಭಿಸಿದ್ದು ಇದರ ಉದ್ಘಾಟನೆಯನ್ನು ಮಾಡಲಾಯಿತು. ಬೇರೆ ಬೇರೆ ಮಾಧ್ಯಮದಲ್ಲಿ ಬರುವ ವಿಚಾರಗಳನ್ನು ಚರ್ಚಿಸಿ ತಿಂಗಳಿಗೊಮ್ಮೆ ಕಾರ್ಯಕ್ರಮ ನಡೆಸುವ, ವಿವಿಧ ರೀತಿಯ ಭಿತ್ತಿ ಪತ್ರಗಳನ್ನು ಹೊರತರುವ ವೇದಿಕೆಯಾದ ವಿವೇಕ ಪ್ರತಿಧ್ವನಿ ಘಟಕವನ್ನು ಸಂಪನ್ಮೂಲ ವ್ಯಕ್ತಿ ಜಿತೇಂದ್ರ ಕುಂದೇಶ್ವರರವರು ಭಿತ್ತಿಪತ್ರ ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಿದರು.

LEAVE A REPLY

Please enter your comment!
Please enter your name here