ನಮ್ಮನ್ನು ಖಾಯಂ ಮಾಡಿ, ಕನಿಷ್ಠ ಕಾಯ್ದೆ ನೀಡಿ – ರಾಜ್ಯ ವಿಶೇಷ ಚೇತನರ ನಗರ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಸಂಘ ಆಗ್ರಹ

0

ಪುತ್ತೂರು: ವಿಕಲಚೇತನ ನಗರ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಖಾಯಂ ಮಾಡಬೇಕು. ಮತ್ತು ಸುಪ್ರೀಂ ಕೋರ್ಟ್ 2016 ರ ಕಾಯ್ದೆಯಂತೆ ಕನಿಷ್ಠ ಕಾಯ್ದೆ ನೀಡಬೇಕು, ಸೇವಾ ಭದ್ರತೆ ನೀಡಬೇಕೆಂದು ನೂತನವಾಗಿ ರಚನೆಗೊಂಡ ರಾಜ್ಯ ವಿಶೇಷ ಚೇತನರ ನಗರ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ರಾಜ್ಯ ಸಮಿತಿ ಆಗ್ರಹಿಸಿದೆ.
ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ವಿಶೇಷ ಚೇತನರ ನಗರ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ರಾಜ್ಯ ಸಮಿತಿ ಸಂಸ್ಥಾಪಕ ರಾಜ್ಯ ಅಧ್ಯಕ್ಷೆ ಪ್ರವೀಣ್ ನಾಯಕ್ ಅವರು ಮಾತನಾಡಿ 2007-08 ರಲ್ಲಿ ವಿಶೇಷ ಚೇತನರ ನಗರ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಯೋಜನೆ ಆರಂಭಗೊಂಡಿತ್ತು. ಆಗಿನ ಕುಮಾರ ಸ್ವಾಮಿ ಸರಕಾರ ಇರುವಾಗ ವಿಕಲಚೇತನ ಎಲ್ಲಾ ಸೌಲಭ್ಯಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಲು ಈ ಯೋಜನೆ ಜಾರಿಗೆ ಬಂದಿತ್ತು. ಅದೇ ರೀತಿ ಸುಮಾರು 16 ವರ್ಷಗಳಿಂದ ಎಲ್ಲಾ ತಾಲೂಕು, ನಗರ ಪಂಚಾಯತ್‌ಗಳಲ್ಲಿ ನಗರ, ಗ್ರಾಮೀಣ ಪುನರ್ವಸತಿ ಕಾಯರ್ತರು ಮತ್ತು ವಿವಿಧೋದ್ದೇಶ ಪುನರ್ವಸತಿ ಕಾಯರ್ತರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಎಮ್‌ಆರ್‌ಡಬ್ಲ್ಯು ಅವರಿಗೆ ರೂ. 15ಸಾವಿರ ವೇತನ ನೀಡಲಾಗುತ್ತಿದೆ. ವಿಆರ್‌ಡಬ್ಲ್ಯು, ಯುಆರ್‌ಡಬ್ಲ್ಯು ಆಗಿರುವ ನಮಗೆ ರೂ. 9ಸಾವಿರ ಮಾತ್ರ ನೀಡುತ್ತಿದ್ದಾರೆ. ಆದರೆ ಲೈಬ್ರೇರಿಯನ್‌ರವರಿಗೆ ಅವರಿಗೆ 7ನೇ ಆಯೋಗದಲ್ಲಿ ರೂ. 25ಸಾವಿರ ಆಗುವ ಮಾಹಿತಿ ಇದೆ. ಅವರಿಗಾದಂತೆ ಎಮ್‌ಆರ್‌ಡಬ್ಲ್ಯು, ವಿಆರ್‌ಡಬ್ಲ್ಯು, ಯುಆರ್‌ಡಬ್ಲ್ಯು ಆದ ನಮಗೂ ಕನಿಷ್ಠ ಕಾಯ್ದೆ ಜಾರಿ ಮಾಡುವಂತೆ ಆಗ್ರಹಿಸಲು ಈ ನೂತನ ಸಮಿತಿ ರಚನೆ ಮಾಡಿದ್ದೇವೆ. ನಮಗೆ ಗ್ರಾ.ಪಂನಲ್ಲಿ ಈಗಾಗಲೇ ಈ ಹಾಜರಾತಿಯೂ ಇದೆ. ತಾಲೂಕುಗಳಲ್ಲಿ ಗ್ರಾ.ಪಂ ವ್ಯಾಪ್ತಿಯ ವಿಎ ಗಳಿಗೆ ಗ್ರಾಮ ಆಡಳಿತಾಧಿಕಾರಿ ಹುದ್ದೆ ಆಗಿದೆ. ಅದೆ ರೀತಿ ನಮಗೆ ವಿಕಲಚೇತನ ಕ್ಷೇಮಾಧಿಕಾರಿ ಎಂಬ ಹುದ್ದೆ ಕೊಡುವ ಮೂಲಕ ನಮ್ಮನ್ನು ಖಾಯಂ ಮಾಡಬೇಕು ಎಂದು ಅವರು ಆಗ್ರಹಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ರಚನೆ:
ರಾಜ್ಯ ವಿಶೇಷ ಚೇತನರ ನಗರ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ರಾಜ್ಯ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಕಡಬ ತಾಲೂಕಿನ ಆಲಂಕಾರು ಯುಆರ್‌ಡಬ್ಲ್ಯು ಆಗಿರುವ ಪ್ರಶಾಂತಿ ಕಡಬ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸುಳ್ಯ ಮರ್ಕಂಜದ ಷಣ್ಮುಖ, ಉಪಾಧ್ಯಕ್ಷರಾಗಿ ನೋಣಯ್ಯ ಪುತ್ತೂರು ಮತ್ತು ಸದಾನಂದ, ಸಂಘಟನಾ ಕಾರ್ಯದರ್ಶಿಯಾಗಿ ರಂಜಿನಿ ಮುರುಳ್ಯ, ಜೊತೆ ಕಾರ್ಯದರ್ಸಿಯಾಗಿ ರಾಧಾವತಿ ಬೆಟ್ಟಂಪಾಡಿ, ಉಪಖಜಾಂಜಿಯಾಗಿ ಮೋನಪ್ಪ ಆಲಂಕಾರು, ಜಿಲ್ಲಾ ಸಮಿತಿ ಸದಸ್ಯರಾಗಿ ಯಕ್ಷಿತಾ ಬೆಳ್ತಂಡಿ, ರವಿ ಪುತ್ರೂರು, ಶಿಲ್ಪಾ ಕೊಂಬಾರು, ಧನಂಜಯ ಕಡಬ, ಆಸೀಫ್ ಬೆಳ್ತಂಗಡಿ, ಶ್ರೀಧರ್ ಅಮರಮಡ್ನೂರು, ಸಲಹಾ ಸಮಿತಿ ಸದಸ್ಯರಾಗಿ ಎಮ್‌ಆರ್‌ಡಬ್ಲ್ಯು ಚಂದ್ರಶೇಖರ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಮಂಡ್ಯದ ಭಾಗ್ಯಮ್ಮ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಜೋಸೆಫ್ ಬೆಳ್ತಂಡಿ, ರಾಜ್ಯ ಸಮಿತಿ ಸದಸ್ಯರಾಗಿ ಕಡಬ ಪುತ್ತೂರಿನಿಂದ ಮುತ್ತಪ್ಪ ಗೌಡ ಆಯ್ಕೆಗೊಂಡಿದ್ದಾರೆ ಎಂದು ಪ್ರವೀಣ್ ನಾಯಕ್ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಕಾರ್ಯದರ್ಶಿ ಬಿ.ಎಮ್ ತಿರುಮಲೇಶ್ವರ್ ಮಡಿಕೇರಿ, ರಾಜ್ಯ ಕಾರ್ಯಕಾರಿ ಸದಸ್ಯರಾದ ಪೆರಾಬೆ ಯುಆರ್‌ಡಬ್ಲ್ಯೂ ಮುತ್ತಪ್ಪ ಗೌಡ ಕಡಬ, ಜಿಲ್ಲಾಧ್ಯಕ್ಷೆಯಾಗಿರುವ ಆಲಂಕಾರು ಯುಆರ್‌ಡಬ್ಲ್ಬು ಪ್ರಶಾಂತಿ, ಜಿಲ್ಲಾ ಸಮಿತಿ ಸದಸ್ಯರಾಗಿರುವ ಬೆಳಂದೂರು ಯುಆರ್‌ಡಬ್ಲ್ಬು ಮೋನಪ್ಪ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here