ಆಹಾರ ಪದ್ದತಿಯ ಬದಲಾವಣೆ ರೋಗ ರುಜಿನಗಳು ಹೆಚ್ಚಾಗಲು ಕಾರಣ: ಡಾ. ಮಹಾಲಿಂಗೇಶ್ವರ ಭಟ್ ಕೆ. ಪಿ
ವಿಟ್ಲ: ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ ವಿದ್ಯಾಕುಟೀರ ಬೈಪದವು ಇವರ ನೇತೃತ್ವದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಇಡ್ಕಿದು ಸೇವಾ ಸಹಕಾರಿ ಸಂಘ ನಿಯಮಿತ, ಬನ್ನೂರು ರೈತರ ಸೇವಾ ಸಂಘ ಬನ್ನೂರು, ರೋಟರಿ ಕ್ಲಬ್ ಪುತ್ತೂರು ಸಿಟಿ ಇವರ ಸಹಯೋಗದಲ್ಲಿ ಕೆಎಂಸಿ ಆಸ್ಪತ್ರೆ ಅತ್ತಾವರ, ಮಂಗಳೂರು ಇವರಿಂದ ಉಚಿತ ವೈದ್ಯಕೀಯ ಶಿಬಿರ ಹಾಗೂ ಕ್ಯಾನ್ಸರ್ ರೋಗ ಮಾಹಿತಿ ಶಿಬಿರವು ಜು.6ರಂದು ಕಬಕ ಗ್ರಾಮದ ಬೈಪದವು ಸಮೀಪದ ವಿದ್ಯಾಕುಟೀರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ವೈದ್ಯರಾದ ಡಾ. ಮಹಾಲಿಂಗೇಶ್ವರ ಭಟ್ ಕೆ. ಪಿ.ರವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಈಗಿನ ಕಾಲಘಟ್ಟದ ಆಹಾರ ಪದ್ದತಿಯ ಬದಲಾವಣೆಯಿಂದಾಗಿ ರೋಗ ರುಜಿನಗಳು ಹೆಚ್ಚಾಗುತ್ತಿವೆ. ಆದ್ದರಿಂದ ನಮ್ಮ ಆಹಾರ ಪದ್ದತಿಯಲ್ಲಿ ನಾವು ಬಹಳಷ್ಟು ಜಾಗರೂಕರಾಗಿರಬೇಕು. ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ ನಡೆಸುತ್ತಿರುವ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ದ.ಕ ಜಿಲ್ಲೆ ಇದರ ನಿರ್ದೇಶಕರಾದ ಪ್ರವೀಣ್ ಕುಮಾರ್, ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸುಧಾಕರ ಶೆಟ್ಟಿ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪಂಜಗುಡ್ಡೆ ಈಶ್ವರ ಭಟ್ , ರೋಟರಿ ಕ್ಲಬ್ ಪುತ್ತೂರು ಸಿಟಿಯ ಅಧ್ಯಕ್ಷರಾದ ಮಹಮ್ಮದ್ ಸಾಹೇಬ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನ ಮಾಣಿ ವಲಯ ಮೇಲ್ವಿಚಾರಕಿ ಆಶಾಪಾರ್ವತಿ, ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನದ ಸಂಚಾಲಕರಾದ ವೇ.ಮೂ. ತಿರುಮಲೇಶ್ವರ ಭಟ್, ಅಧ್ಯಕ್ಷರಾದ ರಮೇಶ್ ಭಟ್ ಬಿ. ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೈದ್ಯರಾದ ಡಾ. ಅಭಿಷೇಕ್ ಕೃಷ್ಣ ರವರು ಕ್ಯಾನ್ಸರ್ ಬಗೆಗಿನ ಮಾಹಿತಿ ನೀಡಿದರು.
ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನದ ಕಾರ್ಯದರ್ಶಿ ರಮೇಶ್ ಭಟ್ ಎಂ.ಹೆಚ್. ಸ್ವಾಗತಿಸಿದರು. ಕೋಶಾಧಿಕಾರಿ ಪಿ. ತಿರುಮಲೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು. ಇಡ್ಕಿದು ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ್ ವಂದಿಸಿದರು.
ಇಡ್ಕಿದು ಸೇವಾ ಸಹಕಾರಿ ಸಂಘದ ಜನೌಷದಿ ಕೇಂದ್ರ, ಇಂಟಾಸ್ ಫಾರ್ಮಾಸ್ಯುಟಿಕಲ್ ಲಿಮಿಟೆಡ್, ಸಿ.ಕೆಮ್ ಫಾರ್ಮಾಸ್ಯುಟಿಕಲ್, ಸವೋಮ್ ರೆಮಿಡೀಸ್, ಈಸ್ಟ್ ಇಂಡಿಯಾ ಫಾರ್ಮಾ ಮೊದಲಾದ ಕಂಪೆನಿಗಳು ಶಿಬಿರಕ್ಕೆ ಉಚಿತವಾಗಿ ಔಷದಿಯ ವ್ಯವಸ್ಥೆ ಯನ್ನು ಮಾಡಿದೆ. ಉಚಿತವಾದ ಈ ವೈದ್ಯಕೀಯ ಶಿಬಿರದಲ್ಲಿ ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯರು ಭಾಗವಹಿಸಿ ಕ್ಯಾನ್ಸರ್, ಕಿಡ್ನಿ ಮತ್ತು ಮೂತ್ರ ರೋಗ, ಸಾಮಾನ್ಯರೋಗ, ಎಲುಬು, ಕೀಲು ಹಾಗೂ ನೇತ್ರ ತಪಾಸಣೆ ನಡೆಸಿದರು.
ಹಲವರ ಸಹಕಾರದಿಂದಾಗಿ ಹಲವಾರು ಸಮಾಜಮುಖಿಯಾದ ಕೆಲಸಗಳು ನಡೆದಿವೆ
ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನವು 1993ರಲ್ಲಿ ಸ್ಥಾಪನೆಯಾಯಿತು. ಆ ಬಳಿಕ ಹಲವರ ಸಹಕಾರದಿಂದಾಗಿ ಹಲವಾರು ಸಮಾಜಮುಖಿಯಾದ ಕೆಲಸಗಳು ಸಂಪ್ರತಿಷ್ಠಾನದ ಅಡಿಯಲ್ಲಿ ನಡೆಯುತ್ತಾ ಬಂದಿದೆ. ಇದರಲ್ಲಿ 12ಜನರ ಆಡಳಿತ ಮಂಡಳಿಯ ಸಮಿತಿ ಇದೆ. ಹಲವಾರು ಸದಸ್ಯರಿದ್ದಾರೆ. ಸಂಪ್ರತಿಷ್ಠಾನವು ಸ್ಥಾಪನೆಯಾದ ಬಳಿಕ 53 ಪುಸ್ತಕಗಳನ್ನು ಸಮಾಜಕ್ಕೆ ನೀಡಿದೆ.ಉಚಿತ ವೈದ್ಯಕೀಯ ಶಿಬಿರ ಸಹಿತ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದೇವೆ. ವರ್ಷಂಪ್ರತಿ ನಡೆಯುವ ವಾರ್ಷಿಕ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಐವರು ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ. ಅದೇ ರೀತಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡುತ್ತಾ ಬಂದಿದ್ದೇವೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಸಮಿತಿ ಸದಸ್ಯರ ಜೊತೆಗೆ ಸರ್ವರ ಸಹಕಾರದಿಂದ ನಡೆಯುತ್ತಾ ಬಂದಿದೆ.
ವೇ.ಮೂ. ತಿರುಮಲೇಶ್ವರ ಭಟ್,
ಸಂಚಾಲಕರು
ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ