ಪುತ್ತೂರು: ದ.ಕ.ಜಿಲ್ಲಾ ಎಸ್ಪಿ ಕಚೇರಿಯ ಡಿ.ಸಿ.ಆರ್.ಬಿ. ಘಟಕದಲ್ಲಿ ಎ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪದ್ಮನಾಭ ಗೌಡ ಮಡ್ಯಲಮಜಲುರವರು ಜೂನ್ 30ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.
ಮಡ್ಯಲಮಜಲು ದಿ. ಸುಬ್ಬಯ್ಯ ಗೌಡ ಮತ್ತು ದಿ. ನೀಲಮ್ಮ ದಂಪತಿಯ 5ನೇ ಪುತ್ರರಾಗಿ ಜನಿಸಿದ ಪದ್ಮನಾಭ ಗೌಡರವರು 1993ರಲ್ಲಿ ಪೋಲೀಸ್ ಇಲಾಖೆಯಲ್ಲಿ ಸೇವೆ ಪ್ರಾರಂಭಿಸಿದರು. ಕಾನ್ಸ್ಟೇಬಲ್ ಆಗಿ ಉಪ್ಪಿನಂಗಡಿ, ಮಂಗಳೂರು ಸಂಚಾರ ಪೂರ್ವ ಠಾಣೆ ಹಾಗೂ ರಾಜ್ಯ ಗುಪ್ತವಾರ್ತೆಯಲ್ಲಿ ಕರ್ತವ್ಯ ನಿರ್ವಹಿಸಿ ಬಳಿಕ ಹೆಡ್ ಕಾನ್ಸ್ಟೇಬಲ್ ಆಗಿ ಪದೋನ್ನತಿಗೊಂಡು ಸುಳ್ಯ ಮತ್ತು ವಿಟ್ಲ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದರು. 2018ರಲ್ಲಿ ಮಂಗಳೂರು ಎಸ್.ಪಿ ಕಚೇರಿಯ ಡಿ.ಸಿ.ಆರ್.ಬಿ ಘಟಕಕ್ಕೆ ಎಎಸ್ಐ ಆಗಿ ಪದೋನ್ನತಿಗೊಂಡು ಇದೀಗ ಸೇವಾ ನಿವೃತ್ತಿ ಪಡೆದಿದ್ದಾರೆ. ಇವರು ಪತ್ನಿ ಪುಷ್ಪಾವತಿ ಪುತ್ರರಾದ ಅಭಿಷೇಕ್, ಅನುಜ್ಞಾರವರೊಂದಿಗೆ ಈಶ್ವರಮಂಗಲದ ಮಡ್ಯನಮಜಲುವಿನಲ್ಲಿ ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.

ಗೌರವಾರ್ಪಣೆ:
31 ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪದ್ಮನಾಭ ಗೌಡ ಮಡ್ಯಲಮಜಲುರವರಿಗೆ ದ.ಕ.ಜಿಲ್ಲಾ ಎಸ್.ಪಿ ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಎಸ್.ಪಿ ರಿಷ್ಯಂತ್ ಹಾಗೂ ಅಡಿಷನಲ್ ಎಸ್.ಪಿ ರಾಜೇಂದ್ರ ರವರು ಇವರನ್ನು ಗೌರವಿಸಿದರು.