ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪುತ್ತೂರಿನ ಅನೇಕ ಕ್ರೀಡಾಪಟುಗಳು ಮಿಂಚಿದ್ದಾರೆ. ಆದರೆ ಒಂದೇ ಒಂದು ಕೊರಗು ಏನಂದರೆ ಅತ್ಯುತ್ತಮ ಕ್ರೀಡಾಂಗಣದ ಕೊರತೆ ಎದ್ದು ಕಾಣುತ್ತದೆ. ಆದ್ದರಿಂದ ಜನಪ್ರತಿನಿಧಿಗಳು ಈಗಾಗಲೇ ಇರುವ ಕೊಂಬೆಟ್ಟು ತಾಲೂಕು ಕ್ರೀಡಾಂಗಣವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕೆಂದು ತಾಲೂಕು ಕ್ರೀಡಾಪಟುಗಳು, ತರಬೇತುದಾರರು ವಿನಂತಿಸುತಿದ್ದೇವೆ. ಸರಿಸುಮಾರು ಪುತ್ತೂರಿನ ಹೃದಯ ಭಾಗದಲ್ಲಿರುವ ಈ ಕ್ರೀಡಾಂಗಣವು ವಾರ್ಷಿಕವಾಗಿ 30 ಕ್ರೀಡಾ ಸಂಘಗಳು ಕ್ರಿಕೆಟ್ ಟೂರ್ನಮೆಂಟನ್ನು, 20 ಶಾಲಾ ಕಾಲೇಜುಗಳು ತಮ್ಮ ವಾರ್ಷಿಕ ಕ್ರೀಡಾಕೂಟಗಳನ್ನು ದಸರಾ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಕ್ರೀಡಾಕೂಟ ಗಳು ಈ ಕ್ರೀಡಾಂಗಣದಲ್ಲಿ ನಡೆಯುತ್ತಿರುತ್ತವೆ. ಹಾಗೂ ಕ್ರೀಡಾಪಟುಗಳಿಗೆ ತರಬೇತಿಯನ್ನು ಇದೇ ಕ್ರೀಡಾಂಗಣದಲ್ಲಿ ಆಯೋಜಿಸುತ್ತಿದ್ದಾರೆ. ಪುತ್ತೂರು ಬಸ್ ಸ್ಟ್ಯಾಂಡ್, ರೈಲ್ವೆ ಸ್ಟೇಷನ್ ಬಹಳ ಹತ್ತಿರ ಇರುವ ಕಾರಣ ದಿನಂಪ್ರತಿ ತರಬೇತಿಗೆ ಕ್ರೀಡಾಕೂಟಗಳಿಗೆ ಈ ಕ್ರೀಡಾಂಗಣದ ಅಭಿವೃದ್ಧಿಯು ಅವಶ್ಯಕ ವಾಗಿದೆ. ಇಲ್ಲಿ ಸಿಂಥೆಟಿಕ್ ಟ್ರ್ಯಾಕ್ ಹಾಗೂ ಸಕಲ ಸೌಲಭ್ಯದ ಒಳಾಂಗಣ ಕ್ರೀಡಾಂಗಣವು ಆದಲ್ಲಿ ಪುತ್ತೂರಿನ ಎಲ್ಲಾ ಕ್ರೀಡಾಪಟುಗಳಿಗೆ ದಿನನಿತ್ಯ ಅಭ್ಯಾಸ ಮಾಡಲುಖಂಡಿತ ಪ್ರಯೋಜನಕಾರಿಯಾಗಿದೆ. ಜನಪ್ರತಿನಿಧಿಗಳು ದಯವಿಟ್ಟು ಗಮನಹರಿಸಿ ಕ್ರೀಡಾಪಟುಗಳ ತರಬೇತಿಗೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿಸುತಿದ್ದೇವೆ.
-ಡಾ ಎಲ್ಯಾಸ್ ಪಿಂಟೋ
ತರಬೇತುದಾರರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರು, ಸಂತ ಫಿಲೋಮಿನಾ ಕಾಲೇಜು ಪುತ್ತೂರು