ವಿಟ್ಲ ಪಡ್ನೂರು: ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿ ಅನಾರೋಗ್ಯದಿಂದ ಮಲಗಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನಾಭರಣ ಕಳವು

0

ವಿಟ್ಲ: ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ್ದ ಕಳ್ಳರು ಅನಾರೋಗ್ಯದಿಂದ ಮಲಗಿದ್ದ ಮಹಿಳೆಯೋರ್ವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ ಘಟನೆ ಬಂಟ್ವಾಳ ತಾಲೂಕು ವಿಟ್ಲಪಡ್ನೂರು ಗ್ರಾಮದ ಪಳ್ಳಿಗದ್ದೆ ಎಂಬಲ್ಲಿ ನಡೆದಿದೆ.
ಬಂಟ್ವಾಳ ತಾಲೂಕು ವಿಟ್ಲಪಡ್ನೂರು ಗ್ರಾಮದ ಪಳ್ಳಿಗದ್ದೆ ನಿವಾಸಿ ಬಿ.ಎಂ. ಇಬ್ರಾಹಿಂ ರವರು ದೂರುದಾರರಾಗಿದ್ದು, ಜು.6ರ ರಾತ್ರಿಯಿಂದ ಜು.7ರ ಬೆಳಗ್ಗಿನ ಜಾವದ ಮಧ್ಯದ ಅವಧಿಯಲ್ಲಿ ಬಂಟ್ವಾಳ ತಾಲೂಕು ವಿಟ್ಲಪಡ್ನೂರು ಗ್ರಾಮದ ಪಳ್ಳಿಗದ್ದೆಯಲ್ಲಿರುವ ನನ್ನ ಸಹೋದರನ ವಾಸ್ತವ್ಯದ ಮನೆಯ ಹಿಂಬಾಗಿಲ ಕಿಟಕಿಯ ಸರಳನ್ನು, ಯಾರೋ ಕಳ್ಳರು ಯಾವುದೋ ಸಾಧನದಿಂದ ಮುರಿದು, ನಂತರ ಅದೇ ಕಿಟಕಿಯ ಮೂಲಕ ಯಾವುದೋ ಸಾಧನದಿಂದ ಮನೆಯ ಹಿಂಬದಿಯ ಬಾಗಿಲನ್ನು ತೆರೆದು, ಮನೆಯ ಒಳಗೆ ಪ್ರವೇಶಿಸಿ, ಮನೆಯ ಕೋಣೆಯಲ್ಲಿ ನಿಶಕ್ತರಾಗಿ ಮಲಗಿದ್ದ ತಾಯಿ ಐಸಮ್ಮ ಅವರ ಕತ್ತಿನಲ್ಲಿದ್ದ ಅಂದಾಜು 8 ಗ್ರಾಂ ತೂಕದ ರೂ. 48೦೦೦ ಮೌಲ್ಯದ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿರುತ್ತಾರೆ ಎಂದು ಅವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


LEAVE A REPLY

Please enter your comment!
Please enter your name here