ಕಾವು:ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರ ನನ್ಯ ದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಬಿ ಸಿ ಟ್ರಸ್ಟ್ ಪುತ್ತೂರು ಇದರ ಶೌರ್ಯ ವಿಪತ್ತು ನಿರ್ವಹಣಾ ಅರಿಯಡ್ಕ ಘಟಕದ ಸದಸ್ಯರಿಂದ ಶಾಲೆಯಲ್ಲಿ ಕುಸಿತಕ್ಕೊಳಪಟ್ಟ ತರಗತಿ ಕೋಣೆಯ ಹಂಚು,ಶಾಲೆ ಹಾಗೂ ಅಂಗನವಾಡಿ ಕೇಂದ್ರದ ನೀರಿನ ಟ್ಯಾಂಕ್, ತಾರಸಿಯನ್ನು ಸ್ವಚ್ಛತೆ ಮಾಡಲಾಯಿತು.
ತಾಲ್ಲೂಕು ವಿಪತ್ತು ನಿರ್ವಹಣಾ ಘಟಕದ ಕ್ಯಾಪ್ಟನ್ ಸುರೇಶ್, ಅರಿಯಡ್ಕ ಘಟಕ ಪ್ರತಿನಿಧಿ ಶಿವಶಂಕರ ಕುಲಾಲ್ ಮತ್ತು ವಿಪತ್ತು ನಿರ್ವಹಣಾ ಸಮಿತಿಯ ಸ್ವಯ ಸೇವಕರು ಉಪಸ್ಥಿತರಿದ್ದರು. ನನ್ಯ ಶಾಲಾ ಮುಖ್ಯ ಗುರು ಮೇಬುಲ್, ಅತಿಥಿ ಶಿಕ್ಷಕಿಯರಾದ ಶ್ರುತಿ,ಚೈತ್ರ, ನನ್ಯ ಅಂಗನವಾಡಿ ಕಾರ್ಯಕರ್ತೆ ಸೀತಾರತ್ನ, ಸಹಾಯಕಿ ಶಾರದಾ,ಬಿಸಿಯೂಟ ಸಿಬ್ಬಂದಿಗಳಾದ ರೂಪ,ಸುನಂದಾ ಸಹಕರಿಸಿದರು.